Slide
Slide
Slide
previous arrow
next arrow

ಸೆಂಟ್‌ ಮೈಕಲ್ ಕಾನ್ವೆಂಟ್ ಶಾಲೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ

300x250 AD

ದಾಂಡೇಲಿ : ನಗರದ ಸೆಂಟ್‌ ಮೈಕಲ್ ಕಾನ್ವೆಂಟ್ ಹಿ.ಪ್ರಾ. ಶಾಲೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯನ್ನು ಸೋಮವಾರ ಆಯೋಜಿಸಲಾಗಿತ್ತು.

ಕಾರ್ಯಕ್ರಮ ವಿದ್ಯಾರ್ಥಿಗಳನ್ನು ಕರೆತರುವ ಆಟೋ, ಟೆಂಪೊ, ಮಿನಿ‌ ಬಸ್ ವಾಹನಗಳ ಚಾಲಕರನ್ನು ಗೌರವಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯನಿ ಕ್ಲಾರೇಟ್ ಅವರು ಹೊಸ ವರ್ಷವೂ ಬದುಕಿನಲ್ಲಿ ಹೊಸ ಉತ್ಸಾಹ ಹಾಗೂ ಉನ್ನತಿಯನ್ನು ದಯಪಾಲಿಸಲೆಂದು ಶುಭ ಪ್ರಾರ್ಥಿಸಿದರು. ಆಟೋ ಚಾಲಕರ ಸಂಘದ ಅಧ್ಯಕ್ಷರಾದ ಬಾಬಾಸಾಬ್ ಜಮಾದಾರ್ ಅವರು ಗುರುತಿಸಿ, ಪ್ರೋತ್ಸಾಹಿಸಿರುವುದು ನಮಗೆಲ್ಲ ಅತೀವ ಆನಂದ ತಂದಿದೆ ಎಂದರು.

300x250 AD

ಈ ಸಂದರ್ಭದಲ್ಲಿ ಪಾಲಕರ ಸಮಿತಿಯ ಉಪಾಧ್ಯಕ್ಷರಾದ ಎಸ್.ಪ್ರಕಾಶ್ ಶೆಟ್ಟಿ, ಪಾಲಕರ ಸಂಘದ ಸದಸ್ಯರುಗಳಾದ ರಫೀಕ್ ಖಾನ್, ಸಾಲಿಹಾ, ಮುಖ್ಯ ಶಿಕ್ಷಕಿ ವಿನುತಾ ಡಯಾಸ್ ಹಾಗೂ ಶಿಕ್ಷಕ ವೃಂದವರು ಮತ್ತು ವಿದ್ಯಾರ್ಥಿಗಳನ್ನು ಕರೆತರುವ ವಾಹನಗಳ ಚಾಲಕರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top