ಭಟ್ಕಳ: ಶೈಕ್ಷಣಿಕವಾಗಿ ಪ್ರತಿಭಾನ್ವಿತರಾಗಿರುವ ತಾವೆಲ್ಲರೂ ಶಿಸ್ತು, ಮೌಲ್ಯಗಳು ಮತ್ತು ಸಂಸ್ಕಾರವನ್ನು ತಮ್ಮ ಜೀವನದ ಭಾಗವಾಗಿ ಅಳವಡಿಸಿಕೊಂಡಾಗ ಪರಿಪೂರ್ಣರಾಗಲು ಸಾಧ್ಯ ಎಂದು ಉತ್ತರ ಕನ್ನಡ ಜಿಲ್ಲಾ ಗಾಣಿಗ ಸೇವಾ ಸಂಘದ ಸದಸ್ಯರು ಮತ್ತು ಹೊನ್ನಾವರ ತಾಲೂಕಿನ ಹೊಸಾಕುಳಿಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಹೇಳಿದರು.
ಅವರು ಭಟ್ಕಳ ತಾಲೂಕಾ ಗಾಣಿಗ ಸೇವಾ ಟ್ರಸ್ಟ್(ರಿ), ಶ್ರೀ ಗೋಪಾಲಕೃಷ್ಣ ಪತ್ತಿನ ಸಹಕಾರಿ ಸಂಘ ಭಟ್ಕಳ, ಶ್ರೀ ಮುಗಳಿ ಕೋಣೆ ಗೋಪಾಲಕೃಷ್ಣ ದೇವಸ್ಥಾನ ಆಡಳಿತ ಮಂಡಳಿ ಇವರ ಸಹಯೋಗದಲ್ಲಿ ಭಟ್ಕಳ ತಾಲೂಕ ಗಾಣಿಗ ಸಮಾಜದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಾಧಕರಿಗೆ ಹಾಗೂ ನಿವೃತ್ತರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಅಂಕಗಳು ಕೇವಲ ಉದ್ಯೋಗ ಪಡೆಯಲು ಮಾನದಂಡವಾಗಿದ್ದು, ಪಡೆದ ಉದ್ಯೋಗ ಮತ್ತು ಜೀವನದಲ್ಲಿ ಯಶಸ್ಸು ಪಡೆಯಲು ಅಂಕಗಳ ಹೊರತಾಗಿ ಅವಶ್ಯವಾಗಿ ಬೇಕಾಗುವ ಶಿಸ್ತು, ಮೌಲ್ಯ ಮತ್ತು ಸಂಸ್ಕಾರ ಗಳನ್ನು ವಿದ್ಯಾರ್ಥಿಗಳು ತಮ್ಮ ಎಳೆಯ ವಯಸ್ಸಿನಲ್ಲಿಯೇ ಶಿಕ್ಷಣದ ಭಾಗವಗಿಸಿಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ
ಹಿರಿಯ ಸಾಹಿತಿಗಳಾದ ಮಾನಾಸುತ ಶಂಬು ಹೆಗಡೆಯವರು “ಗುರು ನಿಂದನೆ ಮಹಾ ಪಾಪ ಗುರುವಂದನೆ ದಾರಿ ದೀಪ” ಗುರುವಿನ ಮಹತ್ವವನ್ನು ತಿಳಿಸಿ ವಿದ್ಯಾರ್ಥಿಗಳು ತಮ್ಮ ಗುರಿಯೆಡೆಗೆ ಸಾಗಲು ನಿರಂತರ ಪ್ರಯತ್ನ ಮತ್ತು ಶೃದ್ಧೆಯಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಭಟ್ಕಳ ತಾಲೂಕ ಗಾಣಿಗ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಸುಭಾಷ್ ಎಮ್ ಶೆಟ್ಟಿ ಅವರು ಮಾತನಾಡಿ ನಮ್ಮ ಟ್ರಸ್ಟ್ ಇಲ್ಲಿಯವರೆಗೆ ಬಹಳಷ್ಟು ಸಾಮಾಜಿಕ ,ಧಾರ್ಮಿಕ, ಶೈಕ್ಷಣಿಕ ಕಾರ್ಯಗಳನ್ನು ಮಾಡುತ್ತಾ ಬಂದುದ್ದು ವಿದ್ಯಾರ್ಥಿಗಳು ಬಯಸಿದ್ದಲ್ಲಿ ಯು.ಪಿ.ಎಸ್.ಸಿ . ಕೆ ಎ.ಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ನೀಡಲು ಸಿದ್ದವಿದೆ. ಉನ್ನತ ವ್ಯಾಸಂಗಕ್ಕೂ ಸಹಕಾರ ನೀಡುತ್ತೇವೆ ಎಂದು ಹೇಳಿದರು. ಮುಖ್ಯ ಅತಿಥಿಗಳಾದ ಹಿರಿಯ ನ್ಯಾಯವಾದಿ ರವೀಂದ್ರ ಆರ್ ಶ್ರೇಷ್ಠಿ ಮಾತನಾಡಿ ಗಾಣಿಗ ಸೇವಾ ಟ್ರಸ್ಟನ ಕಾರ್ಯಕ್ರಮಗಳು ನಿಜಕ್ಕೂ ಮಾದರಿಯಾಗಿದೆ. ಸಮಾಜದ ಎಳ್ಗೆಯು ಕೇವಲ ಶಿಕ್ಷಣದಿಂದ ಮಾತ್ರ ಸಾಧ್ಯ. ವಿದ್ಯಾರ್ಥಿಗಳು ಮೊಬೈಲ್ ನಿಂದ ಆದಷ್ಟು ದೂರವಿದ್ದು, ತಮ್ಮ ಶೈಕ್ಷಣಿಕ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು. ವೇದಿಕೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ನಾರಾಯಣ ಎಮ್ ಶೆಟ್ಟಿ, ಟ್ರಸ್ಟನ ಉಪಾಧ್ಯಕ್ಷ ರಾದ ರಾಧಾ ಶೆಟ್ಟಿ, ಗಜಾನನ ಶೆಟ್ಟಿ , ಶಿರಾಲಿ ಜಿ.ವಿ.ಎಸ್.ಎಸ್ ನ ಜಿ.ವಿ.ಶೆಟ್ಟಿ ಉಪಸ್ಥಿತಿತರಿದ್ದರು.
ಈ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ರವೀಂದ್ರ ಆರ್ ಶ್ರೇಷ್ಠಿ ಹಿರಿಯ ನ್ಯಾಯವಾದಿಗಳು, ತೆರ್ನಮಕ್ಕಿ , ಗಣಪತಿ ತಿಮ್ಮಪ್ಪ ಶೆಟ್ಟಿ ಭಟ್ಕಳ, ಮಂಜಯ್ಯ ಶೆಟ್ಟಿ ತಟ್ಟಿಮನೆ, ಶಾಂತಿ ಈರಪ್ಪ ಶೆಟ್ಟಿ ಮುರುಡೇಶ್ವರ, ಗಿರಿಜಾ ಶೆಟ್ಟಿ ಶಿಕ್ಷಕಿ, ಭಟ್ಕಳ, ನಾಗೇಶ್ ಶೆಟ್ಟಿ ಜಿ.ವಿ ಶೆಟ್ಟಿ ಶಿರಾಲಿ , ರಾಜೇಶ ಶೆಟ್ಟಿ ಗೌಡರಗದ್ದೆ ಹಾಗೂ ನಿವೃತ್ತ ನೌಕರ ಉದಯ ವಾಸುದೇವ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು
ಟ್ರಸ್ಟ್ ಗೆ ಇದೇ ಸಂದರ್ಭದಲ್ಲಿ ಸುರೇಶ ಶೆಟ್ಟಿ ಅಧ್ಯಕ್ಷರು ಗ್ರಾಮ ಪಂಚಾಯತ್ ಹೊಸಾಕುಳಿ ಹೊನ್ನಾವರ 50,000, ಶಾಂತಿ ಈರಪ್ಪ ಶೆಟ್ಟಿ ನಿವೃತ್ತ ಶಿಕ್ಷಕಿ 1.00,000/-
ರಾಧಾ ಈರಪ್ಪ ಶೆಟ್ಟಿ ನಿವೃತ್ತ ಶಿಕ್ಷಕರು ಮುರ್ಡೇಶ್ವರ ಇವರು 50,000/ ರೂಪಾಯಿ, ವಿಮಲಾ ಮತ್ತು ಗೋವಿಂದರಾಯ ವೆಂಕಟರಮಣ ಶೆಟ್ಟಿ ನಿವೃತ್ತ ಶಿಕ್ಷಕರು ಭಟ್ಕಳ ಇವರು 25,000/ಗಳ ದತ್ತಿನಿದಿಗೆ ದೇಣಿಗೆಯನ್ನು ನೀಡಿದರು.ಅದಿತಿ ಆರ್ ಶೆಟ್ಟಿ ಮತ್ತು ಅಕ್ಷರಾ ಎಸ್ ಶೆಟ್ಟಿ ಪ್ರಾರ್ಥಿಸಿದರು. ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಶಿರಾಲಿ ಟ್ರಸ್ಟನ ಉದ್ದೇಶ, ಯೋಜನೆ ಮಾಡಿರುವ ಹಲವಾರು ಸಮಾಜಮುಖಿ, ಕಾರ್ಯಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು. ಖಜಾಂಚಿ ರಾಜೇಶ್ ಶೆಟ್ಟಿ ವಂದಿಸಿದರು. ಕಾರ್ಯದರ್ಶಿ ಮನೋಜ್ ಶೆಟ್ಟಿ ಮತ್ತು ಉಷಾ ಶೆಟ್ಟಿ, ಕಾರ್ಯಕ್ರಮವನ್ನು ನಿರೂಪಿಸಿದರು