Slide
Slide
Slide
previous arrow
next arrow

‘ರಾಮಮಂದಿರ ಕಾರ್ಯಕ್ರಮದಲ್ಲಿ ಮಾನಸಿಕ,ಆಧ್ಯಾತ್ಮಿಕವಾಗಿ ಭಾಗಿಯಾಗಿ’

300x250 AD

ಹೊನ್ನಾವರ: ರಾಮರಾಜ್ಯ ಸ್ಥಾಪನೆಯ ಪೂರಕವಾಗಿ ಅಯೊಧ್ಯೆಯಲ್ಲಿ ರಾಮಮಂದಿರವು ಸ್ಥಾಪಿತವಾಗುತ್ತಿದೆ ಎಂದು ಕರ್ಕಿ ಮಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮೀಜಿಯವರು ನುಡಿದರು.

ಕರ್ಕಿಯ ಜ್ಞಾನೇಶ್ವರಿ ಮಠದಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ, ವಿಶ್ವ ಹಿಂದೂ ಪರಿಷತ್ ವತಿಯಿಂದ ಅಯೋಧ್ಯೆಯ ಶ್ರೀರಾಮ ಪ್ರಾಣ ಪ್ರತಿಷ್ಟೆಯ ಅಂಗವಾಗಿ ಅಯೊಧ್ಯೆಯಿಂದ ಬಂದ ಅಕ್ಷತಾ ಕಲಶ ವಿತರಣಾ ಕಾರ್ಯಕ್ರಮದ ದೀಪ‌ಪ್ರಜ್ವಲನೆಯ ಮೂಲಕ ಚಾಲನೆ ನೀಡಿದ ಬಳಿಕ ಆರ್ಶಿವಚನದಲ್ಲಿ ಶ್ರೀಗಳು ಬಹು ವರ್ಷದ ಬಳಿಕ ನಮ್ಮ ಹಿಂದು ಸಮಾಜದ ಬಹುವರ್ಷದ ಕನಸು ನನಸಾಗುತ್ತಿದೆ. ಈ ಹಿಂದಿನ ಹಲವರ ತ್ಯಾಗದ ಫಲವಾಗಿ ಇಂದು ನಮ್ಮ ಯೋಗವಾಗಿದೆ. ಅಯೊಧ್ಯೆಯಂದು ಪ್ರತಿಷ್ಟಾಪನೆಯ ಕಾರ್ಯಕ್ರಮಕ್ಕೆ ಶಾರೀರಿಕವಾಗಿ ತಲುಪಸಲು ಮಾನಸಿಕವಾಗಿ ಆಧ್ಯಾತ್ಮಿಕವಾಗಿ ತಲುಪಲು ಪ್ರತಿ ಮನೆಗೆ ಅಕ್ಷತೆ ತಲುಪಿಸುವ ಕಾರ್ಯ ನಡೆಯಲಿದೆ. ಜಾತಿ ಮತವಿಲ್ಲದೇ ಪ್ರತಿ ಮನೆಯಲ್ಲಿ ಆ ದಿನ ದಿಪೋತ್ಸವ ಆಚರಿಸುವಂತೆ ಸೂಚನೆ ನೀಡಿದರು.

ಜಿಲ್ಲೆಯ ವಿವಿಧ ಪ್ರಾಂತ್ಯದವರಿಗೆ ಅಕ್ಷತೆಯನ್ನು ಶ್ರೀಗಳು ಹಸ್ತಾಂತರಿಸಿದರು.ಪ್ರಾಂತ ಪ್ರಮುಖರಾದ ಗಂಗಾಧರ ಹೆಗಡೆ ಮಾತನಾಡಿ 76 ಬಾರಿ ಯುದ್ದ ಮಾಡಿ ಮೂರು ಲಕ್ಷ ಹಿಂದುಗಳ ಪ್ರಾಣತ್ಯಾಗ ಮಾಡಿ ಅಯೊಧ್ಯೆಯನ್ನು ಉಳಿಸಿಕೊಳ್ಳಲು ಹೋರಾಟ ಮಾಡಲಾಗಿದೆ ಎನ್ನುವುದು ಇತಿಹಾಸದಲ್ಲಿ ಉಲ್ಲೇಖಿತವಾಗಿದೆ. ಅಭಿಯಾನದ ರೂಪದಲ್ಲಿ‌ ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯ ನಡೆದಿದ್ದು, ಉದ್ಘಾಟನೆಯ ದಿನ ಪ್ರತಿ ಮನೆಯಲ್ಲಿ ದೀಪ ಬೆಳಗಿಸಿವ ಮೂಲಕ ಭಕ್ತಿಪೂರ್ವಕವಾಗಿ ನಮಿಸಬೇಕು ಎಂದು ರಾಮಮಂದಿರದ ಇತಿಹಾಸವನ್ನು ತಿಳಿಸಿದರು.

300x250 AD

ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ವಿ.ಜಿ .ಶೆಟ್ಟಿ ವಿಭಾಗದ ಪ್ರಮುಖರಾದ ರಾಮಚಂದ್ರ ಕಾಮತ್, ಸಂಜು ಶೇಟ್ ಉಪಸ್ಥಿತರಿದ್ದರು. ವಿಶ್ವ ಹಿಂದು ಪರಿಷತ್ ಸಹ ಕಾರ್ಯದರ್ಶಿ ಸಂತೋಷ ನಾಯ್ಕ ಸ್ವಾಗತಿಸಿ ವಿಶ್ವನಾಥ ನಾಯಕ ಕಾರ್ಯಕ್ರಮ ನಿರ್ವಹಿಸಿದರು.

Share This
300x250 AD
300x250 AD
300x250 AD
Back to top