Slide
Slide
Slide
previous arrow
next arrow

ಶ್ರೀ ಸತ್ಯಸಾಯಿ ಕರಿಕಾನ ಪರಮೇಶ್ವರಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ

300x250 AD

ಹೊನ್ನಾವರ: ತಾಲೂಕಿನ ಅರೇಂಗಡಿಯ ಶ್ರೀ ಸತ್ಯಸಾಯಿ ಕರಿಕಾನ ಪರಮೇಶ್ವರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕೋತ್ಸವ ಅದ್ದೂರಿಯಾಗಿ ನಡೆಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಗಾಟಿಸಿದರು. ಇದೇ ಸಂದರ್ಭದಲ್ಲಿ ಮಕ್ಕಳಿಂದ ರಚಿತವಾದ ‘ಅರಿವು’ ಹಸ್ತಪ್ರತಿಯನ್ನು ಗಣ್ಯರು ಬಿಡುಗಡೆಗೊಳಿಸಿದರು.

ಶಾಲಾ ಆಡಳಿತ ಮಂಡಳಿಯ ಶೈಕ್ಷಣಿಕ ಸಲಹೆಗಾರರಾದ ಎಸ್ ಜೆ ಕೈರನ್ ಮಾತನಾಡಿ ಕಳೆದ ಒಂದು ವರ್ಷದ ಶಾಲೆಯ ಚಟುವಟಿಕೆಗಳ ಪಕ್ಷಿನೋಟವನ್ನಿತ್ತರು. ಚಿಕ್ಕ ವಯಸ್ಸಿನಲ್ಲಿ ನಿಮ್ಮ ಪಾಲನೆ ಪೋಷಣೆ ಮಾಡಿದ ನಿಮ್ಮ ತಂದೆ-ತಾಯಿ ಎಂಬ ರತ್ನವನ್ನು ನಿಮ್ಮ ಜೀವಿತದ ಕೊನೆ ಉಸಿರಿರುವ ತನಕ ಕಾಪಾಡಿ ಎಂದು ಅನುಭವದ ಕಿವಿ ಮಾತನ್ನು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್ ನಾಯ್ಕ್ ಮಾತನಾಡಿ ವಿದ್ಯಾರ್ಥಿಗಳು ಸಮಗ್ರ ಶಿಕ್ಷಣವನ್ನು ಪಡೆದುಕೊಳ್ಳಲು ಪ್ರಯತ್ನಿಸಬೇಕು. ಇದರಲ್ಲಿ ಪಠ್ಯ ಕಲಿಕೆ ಮಾತ್ರವಲ್ಲದೇ ಜೀವನ ಕೌಶಲ್ಯಗಳನ್ನು ಕಲಿಯುವುದು ಪ್ರಮುಖವಾಗುತ್ತದೆ. ಅಲ್ಲದೇ ಆಸಕ್ತ ವಿದ್ಯಾರ್ಥಿಗಳು ಕ್ರೀಡೆ, ಸಂಗೀತ ಮುಂತಾದ ಕಲೆಗಳಲ್ಲೂ ಎಳೆಯದಲ್ಲೇ ಪ್ರಾವೀಣ್ಯ ಗಳಿಸಿಕೊಳ್ಳಬಹುದು. ಆದರೆ ಎಲ್ಲದಕ್ಕೂ ಆಸಕ್ತಿ ಬಹಳ ಮುಖ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಆಡಳಿತ ಮಂಡಳಿಯ ಸದಸ್ಯರಾದ ಕೆ.ಎಸ್. ಹೆಗಡೆ ವೇದಿಕೆಯಲ್ಲಿ ಉಪಸ್ಥಿತರಿದ್ದು ಉತ್ತಮ ಶಿಕ್ಷಕರ ಮಾಗ೯ದಶ೯ನದೊಂದಿಗೆ ಪ್ರಯತ್ನದ ಪಥದಲ್ಲಿ ಮುನ್ನುಗ್ಗಿ ಗುರಿ ಸಾಧಿಸಿ ಎಂದು ಹಾರೈಸಿದರು.

300x250 AD

ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಸತ್ಯಸಾಯಿ ಸೇವಾ ಸಮಿತಿ ಜಿಲ್ಲಾ ಅಧ್ಯಕ್ಷರಾದ ರಾಮದಾಸ ಆಚಾರಿ ಮಾತನಾಡಿ ವಿದ್ಯಾರ್ಥಿಗಳು ಸತ್ಯ, ಅಹಿಂಸೆ, ಧಾರ್ಮಿಕ ಮನೋಭಾವ, ಗುರುಹಿರಿಯರಲ್ಲಿ ಗೌರವಾದರ ಇತ್ಯಾದಿ ಗುಣಗಳನ್ನು ಶಾಲಾ ದಿನಗಳಲ್ಲಿಯೇ ಕಲಿಯಬೇಕು. ಕೇವಲ ಉತ್ತಮ ಅಂಕಗಳನ್ನು ಗಳಿಸಿ ಜೀವನ ಮೌಲ್ಯಗಳನ್ನು ಮರೆತರೆ ಅಂತವರಿಂದ ಸಮಾಜಕ್ಕೆ, ದೇಶಕ್ಕೆ ಯಾವುದೇ ಪ್ರಯೋಜನವಿಲ್ಲ. ಓದಿನ ಜೊತೆಯಲ್ಲಿ ಉತ್ತಮ ಪ್ರಜೆಗಳನ್ನು ರೂಪಿಸುವುದು ನಮ್ಮ ಶಾಲೆಯ ಮುಖ್ಯ ಧ್ಯೇಯವಾಗಿದೆ. ಈ ನಿಟ್ಟಿನಲ್ಲಿ ಶಾಲೆಯ ಆಡಳಿತ ಮಂಡಳಿ ಶಿಕ್ಷಕರ ಜೊತೆಗೆ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು. ಕಳೆದ ಶೈಕ್ಷಣಿಕ ವರ್ಷದಲ್ಲಿ ಕಲಿಕೆ, ಕ್ರೀಡೆ ಮತ್ತು ಇತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಯ ಕಾರ್ಯಕ್ರಮವೂ ಇದೇ ಸಂದರ್ಭದಲ್ಲಿ ಜರುಗಿತು.
ಸಮಾರಂಭದಲ್ಲಿ ಶಾಲೆಯ ಮುಖ್ಯಶಿಕ್ಷಕಿ ಶೈಲಾ ಹೆಗಡೆಯವರು ವಾರ್ಷಿಕ ವರದಿ ಮಂಡಿಸಿದರು. ಶಿಕ್ಷಕಿ ವೀಣಾ ಭಟ್ ವಂದಿಸಿದರು. ಗಾಯತ್ರಿ ಹೆಗಡೆ ಹಾಗೂ ದೀಪ್ತಿ ಮಿರಾಂಡಾ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಶಾಲಾ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು .

Share This
300x250 AD
300x250 AD
300x250 AD
Back to top