Slide
Slide
Slide
previous arrow
next arrow

ಸಹಕಾರಿ ಸಂಘ ಸೌಲಭ್ಯಗಳ‌ ಕುರಿತ ಮಾಹಿತಿ ಕಾರ್ಯಕ್ರಮಕ್ಕೆ ಚಾಲನೆ

300x250 AD

ಜೋಯಿಡಾ : ತಾಲ್ಲೂಕಿನ ನಂದಿಗದ್ದಾ ವಿವಿದೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಯರಮುಖ ಇದರ ಆಶ್ರಯದಡಿ ಸಹಕಾರಿ ಸಂಘದಲ್ಲಿರುವ ಸೌಲಭ್ಯಗಳ‌ ಬಗ್ಗೆ ಮನೆ ಮನೆಗೆ ಮಾಹಿತಿ ನೀಡುವ ಕಾರ್ಯಕ್ರಮಕ್ಕೆ ಶುಕ್ರವಾರ ಶೇವಾಳಿ ಗ್ರಾಮದ ಕೊಂಬಾದಲ್ಲಿ ಚಾಲನೆಯನ್ನು‌ ನೀಡಲಾಯಿತು.

ಸಂಘದಲ್ಲಿರುವ ಸೌಲಭ್ಯಗಳ ಮಾಹಿತಿ ಹಾಗೂ ಸಂಘದ ಮೂಲಕ ವ್ಯವಹಾರ ನಡೆಸುವ ಕುರಿತಾಗಿ ಸಹಕಾರಿ ಸಂಘದ ಅಧ್ಯಕ್ಷರಾದ ರಾಮಕೃಷ್ಣ ವಿ ದಾನಗೇರಿ ಅವರು ಮಾತನಾಡಿ
ನಂದಿಗದ್ದೆ ಸಹಕಾರಿ ಸಂಘ ಹಲವು ವರ್ಷಗಳಿಂದ ತಾಲೂಕಿನಲ್ಲೇ ಅತ್ಯುತ್ತಮ ಸಂಘ ಎನಿಸಿಕೊಂಡಿದ್ದು, ಆರ್ಥಿಕವಾಗಿ ಸುಭದ್ರವಾಗಿದೆ, ಎಲ್ಲ ರೈತರು ತಾವು ಬೆಳೆದ ಅಡಿಕೆ, ಕಾಳುಮೆಣಸು ಇತ್ಯಾದಿಗಳನ್ನು ಸಂಪೂರ್ಣವಾಗಿ ಸಂಘದ ಮೂಲಕ ವ್ಯವಹರಿಸಬೇಕು. ಅಂತಹ ರೈತರಿಗೆ ಬೆನ್ನೆಲುಬಾಗಿ ಸಂಘವು ಸದಾಕಾಲ ತಮ್ಮೊಂದಿಗೆ ನಿಲ್ಲುತ್ತದೆ. ರೈತರು ಹೊರಗಿನ ಸಂಸ್ಥೆಗಳನ್ನು ಬೆಳೆಸುವುದಕ್ಕಿಂತ ನಮ್ಮ ಊರಿನ ಸಹಕಾರ ಸಂಘವನ್ನು ಬೆಳೆಸಿದಲ್ಲಿ ಸಂಘಕ್ಕೂ ಲಾಭ ರೈತರಿಗೂ ಲಾಭ ಎಂದರು.

300x250 AD

ಈ ಸಂಧರ್ಭದಲ್ಲಿ ಸಂಘದ ಉಪಾಧ್ಯಕ್ಷ ಸುದರ್ಶನ ಭಾಗ್ವತ ನಿರ್ದೇಶಕ ಸಂದೇಶ ದೇಸಾಯಿ, ಸಂಘದ ವ್ಯವಸ್ಥಾಪಕ ಶಿವರಾಮ ದಬಗಾರ, ಹಿರಿಯರಾದ ಶ್ರೀನಿವಾಸ ಕೊಂಬಾ, ಪತ್ರಕರ್ತ ಹರೀಶ್ ಭಟ್ ಕೊಂಬಾ ಮತ್ತು ಕೊಂಬಾ ಭಾಗದ ಸದಸ್ಯರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top