Slide
Slide
Slide
previous arrow
next arrow

ವ್ಯಸನಮುಕ್ತ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿ ಪಾತ್ರ ಬಹುಮುಖ್ಯ; ಡಿವೈಎಸ್ಪಿ ಗಣೇಶ

300x250 AD

ಶಿರಸಿ: ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿ ದಿಸೆಯಿಂದಲೇ ಮಾದಕ ವ್ಯಸನಗಳಿಗೆ ಒಳಗಾಗುತ್ತಿರುವುದು ಕಂಡುಬರುತ್ತಿದೆ. ಕಾರಣ ವಿದ್ಯಾರ್ಥಿಗಳು ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡಬೇಕಾದರೆ ಈಗಿನಿಂದಲೇ ವ್ಯಸನದಿಂದ ದೂರ ಇರುವ ದೃಢ ಸಂಕಲ್ಪ ಮಾಡಿ, ನಿಮ್ಮ ಸುತ್ತಮುತ್ತಲಿನ ಸಮಾಜಕ್ಕೆ ಮಾರ್ಗದರ್ಶನ ನೀಡುವ ಮೂಲಕ ವ್ಯಸನ ಮುಕ್ತ ಸಮಾಜ ಕಟ್ಟುವ ಅವಶ್ಯಕವಾಗಿದೆ ಎಂದು ಡಿ.ಎಸ್.ಪಿ. ಕೆ.ಎಲ್.ಗಣೇಶ ಹೇಳಿದರು.

ಅವರು ಬುಧವಾರ ಇಲ್ಲಿನ ಬನವಾಸಿ ರಸ್ತೆಯಲ್ಲಿರುವ ಸರ್ಕಾರಿ ಪದವಿ ಕಾಲೇಜಿನಲ್ಲಿ ಅಪರಾಧ ಮಾಸಾಚರಣೆ ಅಂಗವಾಗಿ ಮಾದಕ ದೃವ್ಯಗಳ ತಡೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸೈಬರ್ ಅಪರಾಧ ಮತ್ತು  ಮಾದಕ ದ್ರವ್ಯಗಳ ಬಳಕೆಯ ದುಷ್ಪರಿಣಾಮಗಳ ಕುರಿತು, ತುರ್ತು ಸಂದರ್ಭದಲ್ಲಿ ಇಲಾಖೆಯ 112 ಕರೆ ಮಾಡಿ ಪ್ರಯೋಜನ ಪಡೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡಿದರು.
ಗ್ರಾಮೀಣ ಠಾಣಿ ಪಿಐ ಶ್ರೀ ಸೀತಾರಾಮ ಪಿ. ಮಾತನಾಡಿ, ಅಪರಾಧ ಮಾಸಾಚರಣೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಕಾಲೇಜಿನಲ್ಲಿ ಆಯೋಜಿಸಿ ಜಾಗೃತಿ ಮೂಡಿಸುವ ಉದ್ದೇಶವೇನೆಂದರೆ, ವಿದ್ಯಾರ್ಥಿಗಳು ಜಾಗೃತರಾಗುವುದಲ್ಲದೇ ತಮ್ಮ ಸುತ್ತಲಿನ ಸಮಾಜಕ್ಕೆ ತಿಳುವಳಿಕೆ ನೀಡಿ, ಅಪರಾಧಿಕ ಚಟುವಟಿಕೆಗಳ ಬಗ್ಗೆ ಮೂಡಿಸಬೇಕಿದೆ. ಇಂತಹ ಜಾಗೃತಿ ಮೂಡಿಸುವ ಕೆಲಸ ನಿಮ್ಮಿಂದಲೂ ನಿಮ್ಮ ಸುತ್ತಮುತ್ತಲಿನ ಸಮಾಜದಲ್ಲಿ ಅಗಲಿ ಎಂದರು.
ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿ ರಮೇಶ ಮುಚ್ಚುಂಡಿ ಅವರು ವಿದ್ಯಾರ್ಥಿಗಳಿಗೆ ಸೈಬರ್ ಕ್ರೈಂ ಮತ್ತು ಮಾದಕ ವಸ್ಯನಗಳಿಂದ ದೂರವಿರಲು ವಿವಿಧ ಅಪರಾಧ ಘಟನೆಗಳ ಉದಾಹರಣೆಯೊಂದಿಗೆ ತಿಳಿವಳಿಕೆ ನೀಡಿ, ಜಾಗೃತಿ ಮೂಡಿಸಿದರು.

300x250 AD

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯೆ ಶ್ರೀಮತಿ ದಾಕ್ಷಾಯಿಣಿ ಹೆಗಡೆ ವಹಿಸಿದ್ದರು. ಕಾಲೇಜು ಉಪನ್ಯಾಸಕರು, ಪೊಲೀಸ್ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Share This
300x250 AD
300x250 AD
300x250 AD
Back to top