ಹೊನ್ನಾವರ: ತಾಲೂಕಿನ ಸ.ಹಿ.ಪ್ರಾ.ಶಾಲೆ ನಗರೆ ನಂ.1 ರಲ್ಲಿ
ಮಕ್ಕಳ ವ್ಯವಹಾರ ಕೌಶಲ, ಗಣಿತದ ಬಳಕೆ, ವಾಕ್ ಚಾತುರ್ಯ ಮುಂತಾದ ಗುಣಗಳ ಓರೆಗೆ ಹಚ್ಚಬಹುದಾದ ಮೆಟ್ರಿಕ್ ಮೇಳವನ್ನು ಆಯೋಜಿಸಲಾಗಿತ್ತು.
ಮುಗ್ವಾ ಪಂಚಾಯತ ಅಧ್ಯಕ್ಷ ಆಯ್.ವಿ.ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಕ್ಕಳು ಇಂತಹ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸಬೇಕು. ನಗರೆ ಶಾಲೆಯಲ್ಲಿ ಇಂತಹ ಅನೇಕ ಚಟುವಟಿಕೆಗಳಲ್ಲಿ ನಾನು ಭಾಗವಹಿಸಿದ್ದೇನೆ, ಶಿಕ್ಷಕರ ಕಾರ್ಯ ಶ್ಲಾಘನೀಯ ಎಂದರು.
ಕ್ಲಸ್ಟರ್ ಸಿ.ಆರ್.ಪಿ ಪ್ರಮೀಳ ಕೆ.ಎಸ್., ನಗರೆ ಮತ್ತು ಚಿಕ್ಕನಕೋಡ ಕ್ಲಸ್ಟರ್ ನ ಎಲ್ಲಾ ನಲಿ-ಕಲಿ ಶಿಕ್ಷಕ ಶಿಕ್ಷಕಿಯರು ಮಕ್ಕಳ ಸಂತೆಗೆ ಭೇಟಿ ನೀಡಿ ಮಕ್ಕಳ ಚಾಕಚಕ್ಯತೆಯನ್ನು ಪರೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದರು.