Slide
Slide
Slide
previous arrow
next arrow

ಅಡಿಕೆ ತೋಟಕ್ಕೆ ಬೆಂಕಿ: ನೂರಾರು ಗಿಡಗಳು ನಾಶ

300x250 AD

ಮುಂಡಗೋಡ: ಅಡಿಕೆ ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿ ನೂರಾರು ಅಡಿಕೆ ಗಿಡಗಳು ಸುಟ್ಟುಹೋದ ಘಟನೆ ತಾಲೂಕಿನ ಕಲ್ಲಹಕ್ಕಲ ಗ್ರಾಮದಲ್ಲಿ ನಡೆದಿದೆ.

ರತ್ನಮ್ಮ ಪಾಟೀಲ ಎಂಬುವರಿಗೆ ಸೇರಿದ ಮೂರು ಎಕರೆ ಅಡಿಕೆ ತೋಟದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಗಿಡಗಳು ಸುಟ್ಟಿವೆ. ತೋಟದಲ್ಲಿ ಅಳವಡಿಸಿದ್ದ ನೀರಾವರಿ ಪರಿಕರಗಳು ಸಹ ಸುಟ್ಟು, ಲಕ್ಷಾಂತರ ರೂಪಾಯಿ ಹಾನಿ ಆಗಿದೆ.

300x250 AD

ಸಂಜೆಯ ವೇಳೆಗೆ ತೋಟಕ್ಕೆ ನೀರು ಹಾಯಿಸಲು ಬಂದಾಗ, ಡ್ರಿಪ್ ಪೈಪ್‌ಗಳು ಹೊತ್ತಿ ಉರಿಯುತ್ತಿದ್ದವು. 3-4 ಅಡಿ ಎತ್ತರಕ್ಕೆ ಬೆಳೆದಿದ್ದ ಗಿಡಗಳು ಅದಾಗಲೇ ಸುಟ್ಟಿದ್ದವು. ಗಿಡಗಳಿಗೆ ತಾಗಿಯೇ ಇದ್ದ ಒಣಗಿದ ಹುಲ್ಲು ಬೆಂಕಿಯ ವೇಗವನ್ನು ಹೆಚ್ಚಿಸಿದೆ. ಒಟ್ಟು 1050 ಗಿಡಗಳಿದ್ದವು. ಅಡಿಕೆ ತೋಟದಲ್ಲಿ ವಿದ್ಯುತ್ ಲೈನ್ ಹಾದು ಹೋಗಿದ್ದು, ಬೆಂಕಿ ಹೊತ್ತಿಕೊಂಡಿರುವುದಕ್ಕೆ ಸರಿಯಾದ ಕಾರಣ ತಿಳಿದುಬಂದಿಲ್ಲ. ‘ಕಣ್ಣೆದುರಿಗೆ ಅಡಿಕೆ ತೋಟಗಳು ಸುಟ್ಟಿರುವುದನ್ನು ನೋಡಲು ಆಗಲಿಲ್ಲ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಬೆಳೆಸಿದ ಅಡಿಕೆ ಗಿಡಗಳು ಹಾನಿಯಾಗಿವೆ’ ಎಂದು ರೈತ ಧೀರಜ್ ಕಣ್ಣೀರು ಹಾಕಿದ್ದಾರೆ.

Share This
300x250 AD
300x250 AD
300x250 AD
Back to top