ಕುಮಟಾ: ವಿದ್ಯಾನಿಕೇತನ ಮೂರೂರು ಕಲ್ಲಬ್ಬೆ ಇವರ ಆಶ್ರಯದಲ್ಲಿ ಪ್ರಗತಿ ಆಂಗ್ಲ ಮಾಧ್ಯಮ ಶಾಲೆ, ಮೂರೂರು ಇವರು ನಡೆಸಿದ ಅಂತರ್ ಶಾಲಾ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸಿ.ವಿ.ಎಸ್.ಕೆ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಪಾವನಿ ಎಸ್. ನಾಯ್ಕ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ರಾಹುಲ್ ಏಮ್. ಭಟ್ಟ ಮತ್ತು ಸ್ನೇಹಾ ಉದಯ ನಾಯ್ಕ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಶ್ರೇಯಾ ಗಿರೀಶ ಹೆಬ್ಬಾರ ಭಾವಗೀತೆಯಲ್ಲಿ ಪ್ರಥಮ ಸ್ಥಾನ ಹಾಗೂ ಕೃತಿಕಾ ಎಮ್. ಭಟ್ಟ ಇವಳು ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ನಡೆಸಿದ ಐದು ಸ್ಪರ್ಧೆಗಳಲ್ಲಿ ನಾಲ್ಕೂ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ, ಶೈಕ್ಷಣಿಕ ಸಲಹೆಗಾರರು, ಮುಖ್ಯಾಧ್ಯಾಪಕರು, ಹಾಗೂ ಶಾಲಾ ಶಿಕ್ಷಕವರ್ಗ ಅಭಿನಂದಿಸಿದ್ದಾರೆ.