Slide
Slide
Slide
previous arrow
next arrow

ಅಂಬೇವಾಡಿ ಜಿ+2 ಆಶ್ರಯ ವಸತಿ ಸಮುಚ್ಚಯಕ್ಕೆ ಆಯುಕ್ತೆ ಕವಿತಾ ಮನ್ನಿಕೇರಿ ಭೇಟಿ

300x250 AD

ದಾಂಡೇಲಿ : ನಗರದ ಅಂಬೆವಾಡಿಯಲ್ಲಿ ನಿರ್ಮಾಣವಾಗುತ್ತಿರುವ ಜಿ+2 ಆಶ್ರಯ ವಸತಿ ಸಮುಚ್ಚಯಕ್ಕೆ ಕರ್ನಾಟಕ ಗೃಹ ಮಂಡಳಿಯ ಆಯುಕ್ತರಾದ ಕವಿತಾ ಮನ್ನಿಕೇರಿ ತಮ್ಮ ಇಲಾಖೆಯ ಅಧಿಕಾರಿಗಳ ಜೊತೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ನಗರಸಭೆಯ ಪೌರಾಯುಕ್ತರಾದ ಆರ್.ಎಸ್. ಪವಾರ್ ಜೊತೆ ಕವಿತಾ ಮನ್ನಿಕೇರಿಯವರು ಚರ್ಚೆ ನಡೆಸಿದರು. ಕರ್ನಾಟಕ ಗೃಹ ಮಂಡಳಿಯ ಆಯುಕ್ತರು ಭೇಟಿ ಕೊಟ್ಟಿರುವ ಮಾಹಿತಿ ತಿಳಿದು ಸ್ಥಳಕ್ಕೆ ನಗರಸಭೆಯ ಮಾಜಿ ಉಪಾಧ್ಯಕ್ಷರಾದ ಸಂಜಯ್ ನಂದ್ಯಾಳ್ಕರ್, ನಗರ ಸಭೆಯ ಸದಸ್ಯರುಗಳಾದ ಅಷ್ಪಾಕ್ ಶೇಖ, ದಶರಥ್ ಬಂಡಿವಡ್ಡರ್, ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷರಾದ ಅಕ್ರಂ ಖಾನ್ ಭೇಟಿ ನೀಡಿ ಆದಷ್ಟು ಶೀಘ್ರ ಆಶ್ರಯ ಮನೆಗಳ ನಿರ್ಮಾಣ ಕಾರ್ಯವನ್ನು ಮುಕ್ತಾಯಗೊಳಿಸಿ ತ್ವರಿತ ಗತಿಯಲ್ಲಿ ಫಲಾನುಭವಿಗಳಿಗೆ ಮನೆಗಳ ವಿತರಣೆಗೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಮನವಿ ಮಾಡಿದರು.

300x250 AD

ಈ ವೇಳೆ ಕವಿತಾ ಮನ್ನಿಕೇರಿಯವರು ಜನವರಿ 30ರ ಒಳಗೆ ನೂರು ಮನೆಗಳ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿ, ನಗರಸಭೆಗೆ ಹಸ್ತಾಂತರಿಸುವುದಾಗಿ ತಿಳಿಸಿದರು.

Share This
300x250 AD
300x250 AD
300x250 AD
Back to top