Slide
Slide
Slide
previous arrow
next arrow

ಕಾರ್ಮಿಕ ಕಲ್ಯಾಣ ಮಂಡಳಿ ಆಯುಕ್ತ ಟಿ.ಆಂಜನೇಯ ದಾಂಡೇಲಿಗೆ ಭೇಟಿ

300x250 AD

ದಾಂಡೇಲಿ : ಕಾರ್ಮಿಕ ಕಲ್ಯಾಣ ಮಂಡಳಿಯ ಆಯುಕ್ತರಾದ ಟಿ.ಆಂಜನೇಯ ದಾಂಡೇಲಿ ನಗರಕ್ಕೆ ಭೇಟಿ ನೀಡಿದರು.

ನಗರದ ಸೋಮಾನಿ ವೃತ್ತದ ಹತ್ತಿರದಲ್ಲಿರುವ ಕಾರ್ಮಿಕ ಭವನ‌ ಮತ್ತು ಕಾರ್ಮಿಕ ಭವನದಲ್ಲಿರುವ ಕಾರ್ಮಿಕ ನಿರೀಕ್ಷಕರ ಕಚೇರಿಗೆ ಭೇಟಿ ನೀಡಿದರು.

ಇದೇ ಸಂದರ್ಭದಲ್ಲಿ ಕಾರ್ಮಿಕ ಆಯುಕ್ತರನ್ನು ಭೇಟಿಯಾದ ನಗರಸಭೆಯ ಮಾಜಿ ಉಪಾಧ್ಯಕ್ಷರಾದ ಸಂಜು ನಂದ್ಯಾಳ್ಕರ್, ನಗರ ಸಭಾ ಸದಸ್ಯ ದಶರಥ ಬಂಡಿವಡ್ಡರ್, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ ಸಂಘಟನೆಯ ಅಧ್ಯಕ್ಷರಾದ ರಾಜೇಸಾಬ್ ಕೇಸನೂರ, ಸಿಐಟಿಯು ಮುಖಂಡ ಸಲೀಂ ಸೈಯದ್, ಮುಖಂಡರಾದ ಶೇರಖಾನೆ ಮೊದಲಾದವರು ನೂತನವಾಗಿ ನಿರ್ಮಿಸಲಾಗಿರುವ ಕಾರ್ಮಿಕ ಭವನವನ್ನು ಕಾರ್ಮಿಕರ ಹಾಗೂ ಸಾರ್ವಜನಿಕರ ಬಳಕೆಗಾಗಿ ಸಿಗುವಂತೆ ಆದಷ್ಟು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

300x250 AD

ಈ ಸಂದರ್ಭದಲ್ಲಿ ಮಾತನಾಡಿದ ಟಿ.ಆಂಜನೇಯ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.

Share This
300x250 AD
300x250 AD
300x250 AD
Back to top