Slide
Slide
Slide
previous arrow
next arrow

ವಿದ್ಯಾರ್ಥಿಗಳು ಜ್ಞಾನ ಗಳಿಸುವಲ್ಲಿ ಮುಂದಡಿ ಇಡಬೇಕು: ಸೂರಜ್ ನಾಯ್ಕ್

300x250 AD

 ವಿದ್ಯಾರ್ಥಿಗಳು ಎಲ್ಲಾ ರೀತಿಯ ಜ್ಞಾನಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಶೀಲರಾಗಿರಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಲಾ, ವಿಜ್ಞಾನ, ವಾಣಿಜ್ಯ ವಿಭಾಗಗಳ ಜ್ಞಾನವೂ ಅತೀ ಅವಶ್ಯವಾಗಿದೆ. ಕೇವಲ ಅಂಕ ಗಳಿಕೆಯ ಉದ್ದೇಶದಿಂದ ಓದಬಾರದು. ನಮ್ಮ ವ್ಯಕ್ತಿತ್ವ ನಿರ್ಮಾಣದ ದೃಷ್ಟಿಯಿಂದ ಬಗೆ ಬಗೆಯ ಪುಸ್ತಕಗಳನ್ನು ಓದಬೇಕು ಎಂದು ವ್ಯಕ್ತಿತ್ವ ಮಾರ್ಗದರ್ಶಕ ಸೂರಜ್ ನಾಯ್ಕ್ ಹೇಳಿದರು.

 ಅವರು ಎಂ.ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ IQAC ಅಡಿಯಲ್ಲಿ ಪ್ಲೇಸ್ಮೆಂಟ್ ವಿಭಾಗ ಹಾಗೂ ಭೂಮಿಕಾ ವಿಭಾಗದ  ಸಹಭಾಗಿತ್ವದಲ್ಲಿ ನಡೆದ ವ್ಯಕ್ತಿತ್ವ ಮಾರ್ಗದರ್ಶನ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

 ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಾದರೆ ವಿದ್ಯಾರ್ಥಿಗಳಲ್ಲಿ ದೃಢ ನಿಶ್ಚಯದ ಗುರಿಯನ್ನು ಹೊಂದಿರಬೇಕು. ಯುವಕರು ಜೀವನದಲ್ಲಿ ಸಾಧಿಸುವ ಛಲವನ್ನು ಮೂಡಿಸಿಕೊಂಡು ಗುರಿಯಿಡೆಗೆ ದಾಪುಗಾಲು ಹಾಕುತ್ತಿರಬೇಕು. ಸಮಯದ ಸದ್ಭಳಕೆ ಮಾಡುತ್ತಾ ಅಧ್ಯಯನ ಶೀಲರಾಗಬೇಕು. ಓದಿನ ಜೊತೆ – ಜೊತೆಗೆ ನಮ್ಮಲ್ಲಿರುವ ಸಾಮರ್ಥ್ಯ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಬೇಕು. ನಮ್ಮ ಮುಂದಿನ ಭವಿಷ್ಯದ ನಿರ್ಮಾಣಕ್ಕೆ ನಮ್ಮಲ್ಲಿರುವ ನೈಪುಣ್ಯತೆ ಅತೀ ಅವಶ್ಯಕವಾಗಿದೆ.

300x250 AD

ಸರ್ಕಾರಿ ಉದ್ಯೋಗಗಳನ್ನು ಪಡೆಯುವ ಅಭಿಲಾಷೆ ಸಾಕಷ್ಟು ವಿದ್ಯಾರ್ಥಿಗಳಲ್ಲಿ ಇದ್ದರೂ ಸಹ, ಅದಕ್ಕೆ ಅಗತ್ಯವಾದ ಪ್ರಯತ್ನಗಳು ಕಂಡುಬರುತ್ತಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವುದರ ಮೂಲಕವಾಗಿ ಯಶಸ್ಸು ನಮ್ಮದಾಗಿಸಿಕೊಳ್ಳಬಹುದು. ಅದಕ್ಕನುಗುಣವಾದ  ಮನಸ್ಥಿತಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಿ ಎಂದರು.

 ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ  ಡಾ. ಟಿ. ಎಸ್. ಹಳೆಮನೆ, ಪ್ರಾಧ್ಯಾಪಕರಾದ ಕೆ ಎನ್ ರೆಡ್ಡಿ, ಉಪಸ್ಥಿತರಿದ್ದರು. ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಶೈಲಜಾ ಭಟ್ ನಿರೂಪಿಸಿದರು.

Share This
300x250 AD
300x250 AD
300x250 AD
Back to top