Slide
Slide
Slide
previous arrow
next arrow

ರಿಕ್ಷಾ ಪಲ್ಟಿ: ಚಾಲಕನಿಗೆ ಗಾಯ

300x250 AD

ಹೊನ್ನಾವರ: ತಾಲೂಕಿನ ಕವಲಕ್ಕಿ ಬಳಿಯ ಅನ್ನೇಕೆರಿ ಹತ್ತಿರ ಬಾಡಿಗೆಗೆ ಹೋಗುತ್ತಿದ್ದ ರಿಕ್ಷಾಕ್ಕೆ ಹಂದಿ ಅಡ್ಡ ಬಂದ ಪರಿಣಾಮ ಪಲ್ಟಿಯಾದ ಘಟನೆ ಗುರುವಾರ ಸಂಜೆ ನಡೆದಿದೆ.

ತಾಲೂಕಿನ ಕೆಂಚಗಾರ ನಿವಾಸಿಯಾದ ರಾಘವೇಂದ್ರ ನಾಯ್ಕ ತನ್ನ ರಿಕ್ಷಾವನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಅನ್ನೇಕೆರೆ ತಿರುವಿನಲ್ಲಿ ಏಕಾಏಕಿ ಕಾಡು ಹಂದಿ ಅಡ್ಡ ಬಂದ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಹೊಂಡದಲ್ಲಿ ಆಟೋ ಬಿದ್ದಿದೆ. ಆಟೋ ಚಾಲಕ ರಿಕ್ಷಾ ಅಡಿಗೆ ಸಿಲುಕಿಕೊಂಡಿದ್ದು, ಸ್ವಲ್ಪ ಸಮಯದ ನಂತರ ಅದೇ ಮಾರ್ಗದಲ್ಲಿ ಬರುತ್ತಿದ್ದ ಮತ್ತೊಂದು ಆಟೋದವರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

300x250 AD

ರಿಕ್ಷಾ ಚಾಲಕನ ಕೈಗೆ ಪೆಟ್ಟಾಗಿದ್ದು, ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಕಾರವಾರದ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.

Share This
300x250 AD
300x250 AD
300x250 AD
Back to top