Slide
Slide
Slide
previous arrow
next arrow

ಕೊನೆಗೂ ಸಿಕ್ಕಿಬಿದ್ದ ಸಾವಿನ ನಾಟಕವಾಡಿದ ಮಹಿಳೆ ನಿವೇದಿತಾ

300x250 AD

ಕುಮಟಾ: ತನ್ನ ಕರಳು ಬಳ್ಳಿಯಿಂದ ಹುಟ್ಟಿದ್ದ ಎರಡು ಮಕ್ಕಳನ್ನ ನಡು ರಸ್ತೆಯಲ್ಲಿ ಬಿಟ್ಟು ಸಮುದ್ರದಲ್ಲಿ ಮುಳುಗಿದ ನಾಟಕವಾಡಿದ ಕುಮಟಾ ತಾಲೂಕಿನ ಸಾಂತಗಲ್ ಗ್ರಾಮದ ನಿವೇದಿತಾ ಭಂಡಾರಿ ಹೊನ್ನಾವರದ ಬಾಡಿಗೆ ಮನೆಯಲ್ಲಿರುವಾಗ ಪೊಲೀಸರ ಕೈಗೆ ಸಿಕ್ಕಿ ಬಿದಿದ್ದಾಳೆ.

ಕುಮಮಟಾದ ಸಾಂತಗಲ್‌ ಗ್ರಾಮದ ನಿವೇದಿತಾ ನಾಗರಾಜ ಭಂಡಾರಿ ಮಕ್ಕಳನ್ನ ಬಸ್‌ನಿಲ್ದಾಣದಲ್ಲಿ ಬಿಟ್ಟು ಕುಮಟಾದ ಹೆಡ್ ಬಂದರ್ ಸಮುದ್ರದ ಬಳಿ ತಾನು ತಂದಿದ್ದ ಸ್ಕೂಟಿ ಇಟ್ಟು ಅದರಲ್ಲಿ ಮಾಂಗಲ್ಯ ಕಾಲುಂಗುರ, ಮೊಬೈಲ್ ಇಟ್ಟು ಸಮುದ್ರಕ್ಕೆ ಹಾರಿದಂತೆ ನಾಟಕವಾಡಿ ನಾಪತ್ತೆಯಾಗಿದ್ದಳು.ಎಲ್ಲರೂ ಆಕೆ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಅಂದುಕೊಂಡಿದ್ದರು. ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದೆ ಸತ್ಯ ಎಂದು ನಂಬಲಾಗಿತ್ತು.

ಸಮುದ್ರದಲ್ಲಿ ಆಕೆ ವೇಲ್ ಬಿದ್ದು ತೇಲುತಿದ್ದಿದ್ದನ್ನು ಕಂಡು ಲೈಫ್ ಗಾರ್ಡಗಳು,ಪೊಲೀಸರು ಆಕೆ ನಾಪತ್ತೆ ಆಗಿರೋ ದಿನದಿಂದ ಸಮುದ್ರವನ್ನ ಜಾಲಾಡಿದ್ದಾರೆ. ಆದ್ರೆ ಶವ ಮಾತ್ರ ಸಿಕ್ಕಿರಲಿಲ್ಲ. ಆಕೆಗೆ ಬೇರೆ ಯಾರ ಜೊತೆ ಆದ್ರೂ ಸಂಪರ್ಕ ಇದೇಯಾ ಅಂತ ಪೊಲೀಸರು ಜಾಲಾಡಿದಾಗ ಪತ್ತೆ ಆಗಿದ್ದವನೇ ಹೊನ್ನಾವರದ ಆಟೋ ರಾಜ ಲೋಕೇಶ್ ನಾಯ್ಕ. ಇದೆ ಲೋಕೇಶ್ ನಾಯ್ಕ ಅಂದು ಕುಮಟಾ ಹೆಡ್ ಬಂದರ್‌ ಬಳಿ ಆಟೋ ತಂದು ನಿಲ್ಲಿಸಿಕೊಂಡಿದ್ದ ಮನೆಯಿಂದ ತನ್ನ ಇಬ್ಬರೂ ಮಕ್ಕಳನ್ನ ಕರೆತಂದ ಚಾಲಾಕಿ ನಿವೇದಿತಾ ಭಂಡಾರಿ ಮನೆಯವರ ದಿಕ್ಕು ತಪ್ಪಿಸಲು ಆತ್ಮಹತ್ಯೆ ನಾಟಕವಾಡಿ ಲೋಕೇಶ ನಾಯ್ಕ ಆಟೋ ಹತ್ತಿ ಹೊನ್ನಾವರಕ್ಕೆ ಪರಾರಿಯಾಗಿದ್ದು, ಅಲ್ಲಿನ ಒಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ಇದೀಗ ಆಕೆಯನ್ನ ಪೊಲೀಸರು ಕರೆತಂದಿದ್ದಾರೆ.

300x250 AD

ಘಟನೆ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಪಿ.ಎಸ್.ಐ ನವೀನ್ ನೇತೃತ್ವದ ತಂಡ ಮಹಿಳೆಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

Share This
300x250 AD
300x250 AD
300x250 AD
Back to top