ಸಿದ್ದಾಪುರ: ಕಾರ್ತಿಕ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಪಟ್ಟಣದ ಶಂಕರ ಮಠದಲ್ಲಿ ದೀಪೋತ್ಸವ ನಡೆಯಿತು.
ಶಾರದಂಬೆ ಹಾಗೂ ಗಣಪತಿಗೆ ಪೂಜೆ ಸಲ್ಲಿಸಿ ಮಠದ ಆವಾರದ ಸುತ್ತಲೂ ಹಣತೆ ಇಟ್ಟು ದೀಪ ಹಚ್ಚಲಾಯಿತು. ಮಠದ ಧ್ಯಾನ ಮಂದಿರದಲ್ಲಿ ಸ್ವಸ್ತಿಕ್ ಆಕಾರದಲ್ಲಿ ಹಚ್ಚಿದ ದೀಪ ಕಂಗೊಳಿಸಿತು.
ಈ ಸಂದರ್ಭದಲ್ಲಿ ಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ದ್ಮನೆ, ಪ್ರಾ- ಜಿ.ಟಿ.ಭಟ್ಟ, ಎಂ. ಸಿ. ಭಟ್ಟ, ಟಿ.ಎಂ.ರಮೇಶ್, ರಾಕೇಶ ಆರ್. ಭಟ್ಟ, ಅರ್ಚಕರಾದ ವೇ. ಉಮೇಶ ಭಟ್ಟ ಮತ್ತು ವೇ. ರಘುಪತಿ ಭಟ್ಟ ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.