Slide
Slide
Slide
previous arrow
next arrow

ಡಿ.9ಕ್ಕೆ ತಾಲೂಕಾ ಮಡಿವಾಳ ಸಮಾಜ ಸಂಘದ ವಾರ್ಷಿಕೋತ್ಸವ

300x250 AD

ಶಿರಸಿ: ತಾಲೂಕ ಮಡಿವಾಳ ಸಮಾಜ ಸಂಘದ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಹಾಗು ಸರ್ವಸಾಧಾರಣ ಸಭೆಯು ಡಿ.09, ಶನಿವಾರ ಮುಂಜಾನೆ 8.00ಘಂಟೆಗೆ ಸಾಮೂಹಿಕ ಸತ್ಯನಾರಾಯಣ ಪೂಜೆಯೊಂದಿಗೆ ಪ್ರಾರಂಭವಾಗಲಿದೆ.

ಸಭಾ ಕಾರ್ಯಕ್ರಮವನ್ನು 10.00 ಘಂಟೆಗೆ ಟಿ.ಎಸ್.ಎಸ್.ರಸ್ತೆಯಲ್ಲಿರುವ ಶ್ರೀ ಮಾಚಿದೇವ ಸಮುದಾಯಭವನದಲ್ಲಿ ಶಾಸಕ ಭೀಮಣ್ಣ. ಟಿ. ನಾಯ್ಕ ಉದ್ಗಾಟಿಸಲಿದ್ದು, ಮಡಿವಾಳ ಸಮಾಜ ಸಂಘದ ಸದಸ್ಯತ್ವ ಹೊಂದಿರುವ ಪಾಲಕರ ಪ್ರತಿಭಾನ್ವಿತ ಮಕ್ಕಳನ್ನು ಪುರಸ್ಕರಿಸಲಾಗುವುದು.

300x250 AD

SSLCಯಲ್ಲಿ 90% ಹಾಗು ಹೆಚ್ಚುವರಿ, PUCಯಲ್ಲಿ 85% ಹಾಗು ಹೆಚ್ಚುವರಿ ಮತ್ತು ಪದವಿ(BSC,BCOM & BA)ಯಲ್ಲಿ-80% ಹಾಗು ಹೆಚ್ಚುವರಿ ಅಂಕವನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಇವರುಗಳ ಅಂಕಪಟ್ಟಿಗಳನ್ನು ಪ್ರದಾನ ಕಾರ್ಯದರ್ಶಿಯವರಾದ ಮೋಹನ ಮಡಿವಾಳ (ಮೊ-TEL:+919620325494) ಇವರಿಗೆ ಡಿ.4ರ ಮುಂಚಿತವಾಗಿ ತಲುಪಿಸಲು ಕೋರಲಾಗಿದೆ.

Share This
300x250 AD
300x250 AD
300x250 AD
Back to top