Slide
Slide
Slide
previous arrow
next arrow

ಶಾಲೆಗೆ ಧ್ವನಿವರ್ಧಕ ನೀಡುವ ಮೂಲಕ ಅರ್ಥಪೂರ್ಣ ಜನ್ಮದಿನಾಚರಣೆ

300x250 AD

ಬನವಾಸಿ: ಶಿರಸಿಯ ಶ್ರೀ ಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾಗಿರುವ ಮಂಗಳ ನಾಯ್ಕ್ ಅವರ ಜನ್ಮ ದಿನದ ಅಂಗವಾಗಿ ಸಮೀಪದ ಗುಡ್ನಾಪೂರ ಗ್ರಾಮ ಪಂಚಾಯತಿ ಸದಸ್ಯ ಹಾಗೂ ಸಮಾಜ ಸೇವಕ ರಘು ನಾಯ್ಕರವರು ತಮಗೆ ನೀಡುವ ಪಂಚಾಯತಿ ಸದಸ್ಯರ ಗೌರವ ಧನದಲ್ಲಿ ಇಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಧ್ವನಿವರ್ಧಕ ಉಡುಗೊರೆಯಾಗಿ ನೀಡುವ ಮೂಲಕ ಹುಟ್ಟು ಹಬ್ಬವನ್ನು ವಿಷೇಶವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಹುಟ್ಟು ಹಬ್ಬ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ದುಂದು ವೆಚ್ಚ ಮಾಡುವ ಬದಲಿಗೆ ಇಂತಹ ಸಾಮಾಜಿಕ ಕಾರ್ಯ ಮಾಡಿದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲಕರವಾಗಲಿದೆ ಎಂದರು.

ಕಳೆದ ಬಾರಿ ಇದೇ ಶಾಲಾ ಅಂಗಳಕ್ಕೆ ಸಿಮೆಂಟ್ ಕಾಂಕ್ರೀಟ್ ಹಾಕಿ ಕೊಟ್ಟು ಮಕ್ಕಳಿಗೆ ಅನುಕೂಲ ಮಾಡಿದ್ದರು.ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

300x250 AD

Share This
300x250 AD
300x250 AD
300x250 AD
Back to top