Slide
Slide
Slide
previous arrow
next arrow

ಸಿದ್ದಾಪುರದಲ್ಲಿ ಮುಸ್ಲಿಂ ಯುವಕನಿಂದ RSS ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ

300x250 AD

ಸಿದ್ದಾಪುರ: ಕ್ಷುಲ್ಲಕ ಕಾರಣಕ್ಕೆ ತನ್ವೀರ್ ಸಾಬ್ ಎನ್ನುವ ಮುಸ್ಲಿಂ ಯುವಕನೊಬ್ಬ ಅರ್ಎಸ್ಎಸ್ ಕಾರ್ಯಕರ್ತನೊಬ್ಬನ ಮೇಲೆ ಸುತ್ತಿಗೆ, ರಾಡ್ ನಿಂದ ಮಾರಣಾಂತಿಕ ಹಲ್ಲೆ ಮಾಡಿದ ದುರ್ಘಟನೆ ಪಟ್ಟಣದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಂತೆ ದಿನವಾಗಿದ್ದ ಶುಕ್ರವಾರ ರಾಜಮಾರ್ಗದ ರಸ್ತೆಯಲ್ಲಿ ಗ್ಯಾಸ್ ಸ್ಟೋಗಳನ್ನಿಟ್ಟು ಪೇಂಟ್ ಮಾಡುತ್ತಿದ್ದ ತನ್ವಿರ್ ಸಾಬ್ ಬಳಿ, ‘ರಸ್ತೆ ಮೇಲೆ ನಿಮ್ಮ ಅಂಗಡಿ ಕೆಲಸ ಮಾಡಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಅಂಗಡಿಯ ಒಳಗೆ ಕೆಲಸ ಮಾಡು’ ಎಂದಿದ್ದಕ್ಕೆ ಆಕ್ರೋಷಗೊಂಡ ತನ್ವೀರ್ ಸಾಬ್, ದಿನೇಶ ಪಟೇಲ್ ಗೆ ಸುತ್ತಿಗೆ, ರಾಡ್ ನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

ಪಟ್ಟಣದ ಸುಪ್ರಸಿದ್ದ ಜೈ ರಾಜಾರಾಮ್ ಹಾರ್ಡವೇರ್ ಕಟ್ಟಡ ಸಾಮಗ್ರಿಗಳ ಅಂಗಡಿ ಮಾಲೀಕರಾಗಿದ್ದ ದಿನೇಶ ಪಟೇಲ್ ಎಂಬುವವರೇ ಮಾರಣಾಂತಿಕವಾಗಿ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಕ್ರೀಯ ಕಾರ್ಯಕರ್ತರಾಗಿದ್ದಾರೆ.

ಹಿಂದೂ ಕಾರ್ಯಕರ್ತ ಮೇಲಿನ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ನೂರಕ್ಕೂ ಅಧಿಕ ಹಿಂದೂ ಸಂಘಟನೆ ಕಾರ್ಯಕರ್ತರು ಹಾಗು ಸಾರ್ವಜನಿಕರು ಪಟ್ಟಣದ ತಿಪ್ಪಮ್ಮ ಸರ್ಕಲ್ ನಿಂದ ಪ್ರತಿಭಟನಾ ಮೆರವಣಿಗೆ ನಡೆಸಿ, ಹಿಂದೂ ವಿರೋಧಿ ಗೂಂಡಾಗಳ ವಿರುದ್ಧ ಘೋಷಣೆ ಕೂಗುತ್ತಾ ತಾಲೂಕಾ ಆಡಳಿತ ಸೌಧಕ್ಕೆ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು‌.

ಈ ವೇಳೆ ಪ್ರತಿಭಟನಾಕಾರರನ್ನುದ್ಧೇಶಿಸಿ ಭಾಜಪಾ ಮುಖಂಡ ಗುರುರಾಜ ಶ್ಯಾನಭಾಗ್ ಮಾತನಾಡಿ, ಸಿದ್ದಾಪುರದಲ್ಲಿ ಇಂತಹ ಪ್ರಕರಣಗಳು ಈಗೀಗ ಹೆಚ್ಚುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ. ಕ್ಷುಲ್ಲಕ ಕಾರಣಕ್ಕೆ ಹಿಂದೂ ಕಾರ್ಯಕರ್ತರನ್ನು ಗುರಿಯನ್ನಾಗಿಸಿಕೊಂಡು ಹಲ್ಲೆ ಮಾಡುವುದು ಪೂರ್ವ ನಿರ್ಧರಿತ ಎಂದೆನಿಸುತ್ತದೆ. ಹಿಂದುಗಳ ದೊಡ್ಡ ಹಬ್ಬವಾಗಿರುವ ದೀಪಾವಳಿ ಸಂದರ್ಭದಲ್ಲಿ ಇಂತಹ ಅಹಿತಕಾರಿ ಘಟನೆ ಸೃಷ್ಟಿಸುವ ಮೂಲಕ‌ ಸಮಾಜದಲ್ಲಿ‌ ಅಶಾಂತಿ ಮೂಡಿಸುವ ಕೆಲಸ ಇಂತಹ ದುಷ್ಕರ್ಮಿಗಳಿಂದಾಗುತ್ತಿದೆ ಎಂದರು.

300x250 AD

ಸಾಮಾಜಿಕ ಕಾರ್ಯಕರ್ತ ದಿನೇಶಕುಮಾರ ಗೋಳಿಕೈ ಮಾತನಾಡಿ, ಕಳೆದ 98 ವರ್ಷಗಳಿಂದ ಸಂಘದ ಕಾರ್ಯಕರ್ತರನ್ನು ಗುರಿಯನ್ನಾಗಿಸಿಕೊಂಡು ಇಂತಹ ದಾಳಿಯನ್ನು ಎಸಗಲಾಗುತ್ತಿದೆ. ಸಂಘಟನೆಯ ಲಕ್ಷಾಂತರ ಕಾರ್ಯಕರ್ತರ ಬಲಿದಾನದ ಫಲವಾಗಿ ಇಂದು ಸಂಘ ಇಷ್ಟು ಪ್ರಬಲವಾಗಿ ನಿಂತಿದೆ. ಕಾರ್ಯಕರ್ತರು ಯಾವುದೋ ಒಂದು ಜಾತಿಗೆ ಸೀಮಿತವಾಗದೇ ಹಿಂದೂ ಸಮಾಜದ ಸಂಘಟನೆಗಾಗಿ ಶ್ರಮಿಸುತ್ತಿದ್ದಾರೆ. ಇದು ಕೆಲವರ ನಿದ್ದೆಗೆಡಿಸಿದೆ. ಸಿದ್ದಾಪುರದಲ್ಲಿಯೂ ಸಹ ಇಂತಹುದೇ ಉದ್ಧೇಶದಿಂದ ನಮ್ಮ ಹಿಂದೂ ಸಂಘಟನೆ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆಯಾಗಿದೆ. ಇಂತಹ ದುರ್ಘಟನೆಗಳು ಮುಂದೆಂದೂ ಸಹ ನಡೆಯದಂತೆ ಪೋಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ದಿಟ್ಟ ಪ್ರತ್ಯುತ್ತರವನ್ನು ಹಿಂದೂ ಸಂಘಟನೆ ನೀಡಲಿದೆ ಎಂದು ಆಕ್ರೋಷ ಹೊರಹಾಕಿದರು.

ಪ್ರತಿಭಟನೆಯಲ್ಲಿ ಹಿಂದೂ ಸಂಘಟನೆಯ ತಿಮ್ಮಪ್ಪ ಎಂ.ಕೆ. ರಘುವೀರ ನಾಯ್ಕ, ಅಣ್ಣಪ್ಪ ನಾಯ್ಕ, ಈಶ್ವರ ರಾಗಿಹೊಸಳ್ಳಿ, ರಾಜಶೇಖರ ಅರೆಂದೂರು, ಸೇರಿದಂತೆ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.

ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಉದ್ಧೇಶಪೂರ್ವಕವಾಗಿ ಗುರಿಯನ್ನಾಗಿಸಿಕೊಂಡು ಹಲ್ಲೆ ಮಾಡಲಾಗಿದೆ. ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ರಾಜ್ಯ ಸರಕಾರ, ಪೋಲೀಸ್ ಇಲಾಖೆ ಕಟ್ಟೆಚ್ಚರ ವಹಿಸಬೇಕು. ಮತಾಂಧ ದುಷ್ಕರ್ಮಿಗಳನ್ನು ಹತ್ತಿಕ್ಕಬೇಕು.

  • ಹರೀಶ ಕರ್ಕಿ, ಜಿಲ್ಲಾ ಸಂಚಾಲಕರು, ಹಿಂದೂ ಜಾಗರಣ ವೇದಿಕೆ, ಶಿರಸಿ ಜಿಲ್ಲೆ

ಹಿಂದುಗಳ ದೊಡ್ಡ ಹಬ್ಬವಾಗಿರುವ ದೀಪಾವಳಿಯ ಈ ಸಂದರ್ಭದಲ್ಲಿ ನಮ್ಮ ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಹಲ್ಲೆಯಾಗಿದ್ದು ನಿಜಕ್ಕೂ ಖೇದಕರ. ಮತಾಂಧರನ್ನು ಎಲ್ಲ ರೀತಿಯಿಂದಲೂ ಸದೆಬಡಿಯಬೇಕು. ಆ ನಿಟ್ಟಿನಲ್ಲಿ ನಮ್ಮ ಹಬ್ಬದಲ್ಲಿನ ಹೂವು-ಹಣ್ಣು ಸೇರಿದಂತೆ ಎಲ್ಲ ಖರೀದಿಯನ್ನು ನಮ್ಮ ಹಿಂದೂಗಳ ಅಂಗಡಿಯಿಂದಲೇ ಖರೀದಿಸುವಂತಾಗಬೇಕು. ಆ ಮೂಲಕ ದುಷ್ಕರ್ಮಿಗಳನ್ನು ಪೋಷಿಸುವವರಿಗೆ ನೈಜ ಪಾಠ ಕಲಿಸಬೇಕು.

  • ಹಿಂದೂ ಕಾರ್ಯಕರ್ತರೊಬ್ಬರ ಅಭಿಪ್ರಾಯ
Share This
300x250 AD
300x250 AD
300x250 AD
Back to top