ಯಲ್ಲಾಪುರ: ಪಟ್ಟಣದ ಕಾಳಮ್ಮನಗರದ ಫಾತಿಮಾ ಪಠಾಣ್ ಎಂಬುವವರ ಮನೆಯ ಮೇಲೆ ಮರ ಬಿದ್ದು, ಹಾನಿ ಉಂಟಾದ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು 10 ಸಾವಿರ ರೂ ಸಹಾಯಧನ ಮಂಜೂರಿ ಮಾಡಿದ್ದಾರೆ. ಅದನ್ನು ಗುರುವಾರ ಫಾತಿಮಾ ಕುಟುಂಬದವರಿಗೆ ಯೋಜನೆಯ ವಲಯ ಮೇಲ್ವಿಚಾರಕ ವೆಂಕಟೇಶ ಗೌಡ ವಿತರಿಸಿದರು.