ಕುಮಟಾ: ಇಲ್ಲಿಯ ರೋಟರಿ ಕ್ಲಬ್‌ನ ಸದಸ್ಯರಾದ ರೋಟರಿಯ ಅಸಿಸ್ಟಂಟ್ ಗವರ್ನರ್ ವಸಂತ ರಾವ್ ಹಾಗೂ ಡಾ.ಸಂಜಯ್ ಪಟಗಾರ ಅವರಿಗೆ ಹೆಡ್‌ಬಂದರಿನ ಸೀಲಿಂಕ್ ಬೀಚ್ ಫಾರ್ಮನಲ್ಲಿ ನಡೆದ ರೋಟರಿಯ ಬೋರ್ಡ್ ಆಫ್ ಡೈರೆಕ್ರ‍್ಸ್ (ಬಿಒಡಿ) ಸಭೆಯಲ್ಲಿ ಕುಮಟಾ ರೋಟರಿಯು ಪ್ರಸ್ತುತಪಡಿಸುವ ‘ರೋಟರಿ ಸದ್ಭಾವನಾ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು.
ಅಂತರಾಷ್ಟ್ರೀಯ ರೋಟರಿಯ, ರೋಟರಿ ಫೌಂಡೇಶನ್ನಿಗೆ ಹಾಗೂ ಪಲ್ಸ್ ಪೋಲಿಯೋಗೆ ಅತಿ ಹೆಚ್ಚಿನ ದೇಣಿಗೆ ನೀಡಿದ ಪ್ರಯುಕ್ತ ವಸಂತ್ ರಾವ್ ಅವರಿಗೆ ಹಾಗೂ ರೋಟರಿ ಕ್ಲಬ್ ಸೇವೆಗೆ ಗಣನೀಯ ಕೊಡುಗೆ ನೀಡಿದ ಡಾ.ಸಂಜಯ್ ಪಟಗಾರ ಅವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ಬಿನ ಅಧ್ಯಕ್ಷ ಎನ್.ಆರ್.ಗಜು, ಸಮಾಜಮುಖಿ ಸೇವೆಯಲ್ಲಿರುವ ದಂತವೈದ್ಯ ಡಾ.ಸಂಜಯ್ ಅವರು ಕ್ಲಬ್ ಆಧಾರಿತ ಕಾರ್ಯಚಟುವಟಿಕೆಗಳಲ್ಲಿ ವಿಶಿಷ್ಠವಾಗಿ ತೊಡಗಿಸಿಕೊಂಡಿರುವುದನ್ನು ಉಲ್ಲೇಖಿಸಿದರು. ಕಾರ್ಯದರ್ಶಿ ರಾಮದಾಸ ಗುನಗಿ ಕಾರ್ಯಕ್ರಮ ನಿರ್ವಹಿಸಿದರು. ಸನ್ಮಾನ ಸಮಾರಂಭದ ವೇದಿಕೆಯಲ್ಲಿ ಮಾಜಿ ಅಧ್ಯಕ್ಷರಾದ ಡಾ. ಡಿ.ಡಿ. ನಾಯಕ, ಜಿ.ಜೆ.ನಾಯ್ಕ, ಜೈವಿಠ್ಠಲ ಕುಬಾಲ, ಚೇತನ್ ಶೇಟ್ ಹಾಗೂ ಪದಾಧಿಕಾರಿಗಳಾದ ಎಸ್.ಎಸ್.ಭಟ್ ಲೋಕೇಶ್ವರ ಮೊದಲಾದವರು ಉಪಸ್ಥಿತರಿದ್ದರು. ಪ್ರಣವ್ ಮಣಕೀಕರ್ ಸ್ವಾಗತಿಸಿದರು. ಯೋಗೇಶ್ ಕೋಡ್ಕಣಿ ನಿರೂಪಿಸಿದರು.