ಸಿದ್ದಾಪುರ: ತಾಲೂಕ ಆಡಳಿತದ ವತಿಯಿಂದ ಪಟ್ಟಣದ ನೆಹರು ಮೈದಾನದಲ್ಲಿ ನಡೆದ 68ನೇ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಯಕ್ಷಗಾನ ಭಾಗವತ ರಾಮಚಂದ್ರ ನಾಯ್ಕ ಹೆಮ್ಮನಬೈಲ ಇವರಿಗೆ ಮರಣೋತ್ತರವಾಗಿ ಅವರ ಪತ್ನಿ ಗೀತಾ ರಾಮಚಂದ್ರ ನಾಯ್ಕ ಅವರಿಗೆ, ಕ್ರೀಡಾ ತರಬೇತುದಾರ ಪ್ರವೀಣ ವಿರೂಪಾಕ್ಷ ಕುರುಬರ, ಹಾಗೂ ಸುವರ್ಣ ಮತ್ತು ರಜತ ಶಿಲ್ಪಿ ಪ್ರಶಾಂತ್ ದತ್ತಾತ್ರೇಯ ಶೇಟ್ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕಾ ದಂಡಾಧಿಕಾರಿ ಎಮ್. ಆರ್. ಕುಲಕರ್ಣಿ, ಶಾಸಕ ಭೀಮಣ್ಣ ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಐ.ನಾಯ್ಕ, ತಾಲೂಕ ಪಂಚಾಯತ ಕಾರ್ಯನಿರ್ವಹಣಾ ಅಧಿಕಾರಿ ದೇವರಾಜ್ ಹಿತ್ತಲಕೊಪ್ಪ, ತಾಲೂಕ ಆರೋಗ್ಯಾಧಿಕಾರಿ ಲಕ್ಷ್ಮಿಕಾಂತ್ ನಾಯ್ಕ, ಸಿಪಿಐ ಕುಮಾರ್. ಕೆ, ತಾಲೂಕ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ್ ಹೆಗಡೆ, ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಗೋಪಾಲ ನಾಯ್ಕ ಭಾಶಿ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಜಗದೀಶ್ ನಾಯ್ಕ, ಪ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ನಾಯ್ಕ, ಸದಸ್ಯರಾದ ನಂದನ್ ಬೋರ್ಕರ್, ವೆಂಕೋಬ, ರಾಧಿಕಾ ಕಾನಗೋಡ, ಪ್ರಮುಖರಾದ ಕೆ.ಜಿ ನಾಗರಾಜ್, ವಸಂತ ನಾಯ್ಕ, ವಿ.ಎನ್.ನಾಯ್ಕ, ಕನ್ನಡಪರ ಸಂಘಟನೆಗಳ ಅಧ್ಯಕ್ಷರಾದ ಹೇಮಂತ್ ನಾಯ್ಕ ಹಳೆ ಬರಗಾಲ, ರವಿಕುಮಾರ್ ಕೊಠಾರಿ, ಆಕಾಶ ಕೊಂಡ್ಲಿ, ಅನಿಲ್ ಕೊಠಾರಿ, ಹೇಮಂತ್ ನಾಯಕ್ ಅಕ್ಕುಂಜಿ, ನಿವೃತ್ತ ಸರ್ಕಾರಿ ನೌಕರರ ಅಧ್ಯಕ್ಷ ಸಿ.ಎಸ್.ಗೌಡರ, ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ವಿ. ನಾಯ್ಕ ಮುಂತಾದವರು ಉಪಸ್ಥಿತರಿದ್ದರು.