ಕಾರವಾರ: ಸಾರಿಗೆ ಇಲಾಖೆಯಿಂದ ಪ್ರತಿ ವರ್ಷದ ನವೆಂಬರ್ ತಿಂಗಳನ್ನು ವಾಯುಮಾಲಿನ್ಯ ತಡೆ ಮಾಸಾಚರಣೆಯನ್ನಾಗಿ ಆಚರಿಸುತ್ತಿದ್ದು, ಪ್ರಾದೇಶಿಕ ಸಾರಿಗೆ ಕಚೇರಿ ವತಿಯಿಂದ ಕಚೇರಿಗೆ ಬರುವ ಎಲ್ಲಾ ಪೆಟ್ರೋಲ್ ಚಾಲಿತ ವಾಹನಗಳ ಪರೀಕ್ಷೆ, ವಾಯುಮಾಲಿನ್ಯ ಮಿತಿ ಮೀರಿದಲ್ಲಿ ಅಂತಹ ವಾಹನಗಳ ಮೇಲೆ ದಂಡ ವಿಧಿಸಲಾಗುತ್ತದೆ.
ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ವಾಯು ಮಾಲಿನ್ಯ ತಡೆಗಟ್ಟಲು ವಾಹನಗಳ ತಪಾಸಣೆ ನಡೆಸಲಾಗುವುದು. ತಪಾಸಣೆ ವೇಳೆಯಲ್ಲಿ ವಾಹನಗಳಿಗೆ ಸಂಬಂಧಪಟ್ಟ ಎಲ್ಲಾ ದಾಖಲಾತಿಗಳ ಪರಿಶೀಲನೆ, ವಾಯು ಮಾಲಿನ್ಯ ಹಾಗೂ ಶಬ್ದ ಮಾಲಿನ್ಯಕ್ಕಾಗಿ ವಾಹನಗಳ ಪರೀಕ್ಷೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಆದ್ದರಿಂದ ವಾಹನ ಮಾಲೀಕರು ಮತ್ತು ಚಾಲಕರು ತಮ್ಮ ವಾಹನಗಳ ದಾಖಲಾತಿ ವಾಯು ಮಾಲಿನ್ಯ ಶಬ್ದ ಮಾಲಿನ್ಯ ವಾಹನಗಳನ್ನು ಪರೀಕ್ಷೆ ಮಾಡಿ ಸುಸ್ಥಿತಿಯಲ್ಲಿಡುವಂತೆ ತಿಳಿಸಿದೆ.
ವಾಯುಮಾಲಿನ್ಯ ತಡೆ ಮಾಸಾಚರಣೆ ಅಂಗವಾಗಿ, ‘ಸ್ವಚ್ಛ ವಾಯುವಿನ ಅಳಿಗಾಲ, ಜಗತ್ತಿನ ವಿನಾಶಕಾಲ’ ಕಾರ್ಯಕ್ರಮದ ಉದ್ಘಾಟಣೆಯನ್ನು ನ.7ರಂದು ಬೆಳಗ್ಗೆ 11.30 ಗಂಟೆಗೆ ಕಾರವಾರದ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ನಡೆಯಲಿದ್ದು, ಸಾರ್ವಜನಿಕರು, ಸಂಘ ಸಂಸ್ಥೆಗಳು, ಕಾಲೇಜ್ ವಿದ್ಯಾರ್ಥಿಗಳು ಭಾಗವಹಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.