Slide
Slide
Slide
previous arrow
next arrow

ಕಡಲತೀರದ ಪ್ರವಾಸೋದ್ಯಮ ಹಿನ್ನಡೆಗೆ ದೇಶಪಾಂಡೆ ಬೇಸರ: ಪ್ರವಾಸೋದ್ಯಮ ಬೆಳೆಸಲು ಡಿಸಿಗೆ ಸೂಚನೆ

300x250 AD

ಕಾರವಾರ: ನಗರದ ಟ್ಯಾಗೋರ್ ಕಡಲತೀರದಲ್ಲಿನ ಪ್ರವಾಸೋದ್ಯಮ ಹಿನ್ನಡೆಗೆ ಮಾಜಿ ಸಚಿವ ಆರ್. ವಿ.ದೇಶಪಾಂಡೆ ಅಸಮಾಧಾನ ವ್ಯಕ್ತಪಡಿಸಿದ್ದು, ಕಾರವಾರ ಸೇರಿದಂತೆ ಜಿಲ್ಲೆಯ ಕಡಲ ತೀರದಲ್ಲಿ ಪ್ರವಾಸೋದ್ಯಮ ಚಟುವಟಿಕೆ ಬೆಳೆಸಿ ಎಂದು ಜಿಲ್ಲಾಧಿಕಾರಿಗಳಿಗೆ ಫೋನ್ ಮಾಡುವ ಮೂಲಕ ದೇಶಪಾಂಡೆ ಸೂಚನೆ ನೀಡಿದ್ದಾರೆ.

ಅಂಕೋಲಾದಲ್ಲಿ ಸಚಿವ ಹೆಚ್.ಕೆ.ಪಾಟೀಲ್ ನೇತೃತ್ವದಲ್ಲಿ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಸಭೆಯನ್ನು ಆಯೋಜನೆ ಮಾಡಿದ್ದು ಸಭೆಯಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಶನಿವಾರ ಸಂಜೆ ವೇಳೆಗೆ ದೇಶಪಾಂಡೆ ಕಾರವಾರಕ್ಕೆ ಆಗಮಿಸಿದ್ದರು. ಇದೇ ವೇಳೆ ಠಾಗೋರ್ ಕಡಲ ತೀರಕ್ಕೆ ಭೇಟಿ ನೀಡಿದ ದೇಶಪಾಂಡೆ ಕಡಲ ತೀರದಲ್ಲಿ ಕೆಲ ಸಮಯ ಕಳೆದು ವೀಕ್ಷಣೆ ಮಾಡಿದರು. ಇನ್ನು ಕಡಲತೀರಕ್ಕೆ ಬಂದು ಅಲ್ಲಿನ ವ್ಯವಸ್ಥೆಯನ್ನು ಗಮನಿಸಿದ ದೇಶಪಾಂಡೆ ಕಡಲ ತೀರದಲ್ಲಿ ಪ್ರವಾಸಿಗರು ಇದ್ದರು ಸ್ವಚ್ಚತೆ ಇಲ್ಲದೇ ಇರುವುದು, ಪ್ರವಾಸೋದ್ಯಮ ಅಭಿವೃದ್ದಿಗೆ ಹೆಚ್ಚು ಕ್ರಮ ಕೈಗೊಳ್ಳದೇ ಇರುವುದಕ್ಕೆ ಬೇಸರಗೊಂಡರು. ಇದೇ ವೇಳೆ ಜಿಲ್ಲಾಧಿಕಾರಿಗಳಿಗೆ ಸ್ಥಳದಲ್ಲೇ ಕರೆ ಮಾಡಿದ ದೇಶಪಾಂಡೆ ಪ್ರವಾಸೋದ್ಯಮ ಅಭಿವೃದ್ದಿ ಮಾಡಿ ಎಂದು ಸೂಚನೆ ನೀಡಿದರು.

ಠಾಗೋರ್ ಕಡಲ ತೀರ ಮಾತ್ರವಲ್ಲದೇ ಜಿಲ್ಲೆಯಲ್ಲಿ ಪ್ರವಾಸಿಗರು ಹೆಚ್ಚಾಗಿ ಬರುವ ಎಲ್ಲಾ ಕಡಲ ತೀರದಲ್ಲಿ ಅಭಿವೃದ್ದಿ ಚಟುವಟಿಕೆಗಳು ಮಾಡಬೇಕಾಗಿದೆ. ಇದಕ್ಕೆ ಅನುಧಾನ ಇಲ್ಲದಿದ್ದರೇ ತಿಳಿಸಿ, ಪ್ರವಾಸೋದ್ಯಮ ಸಚಿವ ಹೆಚ್. ಕೆ. ಪಾಟೀಲ್ ಜೊತೆ ತಾನು ಮಾತನಾಡಿ ಅನುದಾನ ತರಿಸಿ ಕೊಡುತ್ತೇನೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ದಿ ಮಾಡಿಯೇ ಉದ್ಯೋಗ ಸೃಷ್ಟಿ ಮಾಡಬೇಕು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.

300x250 AD

ಇದೇ ವೇಳೆ ಮಾದ್ಯಮದವರ ಜೊತೆ ಮಾತನಾಡಿದ ದೇಶಪಾಂಡೆ ತಾನು ಸಚಿವನಿದ್ದ ವೇಳೆಯಲ್ಲಿ ಹಲವು ಚಟುಟಿಕೆಗಳನ್ನ ಮಾಡಿದ್ದೆ. ವಾಟರ್ ಸ್ಪೋಟ್ಸ್, ಕಾಳಿ ರಿವರ್ ಗಾರ್ಡನ್, ರಾಕ್ ಗಾರ್ಡನ್, ಫುಡ್ ಕೋರ್ಟ್ ಹೀಗೆ ಹಲವು ಕಾಮಗಾರಿಗಳನ್ನು ನಮ್ಮ ಅವಧಿಯಲ್ಲಿ ಮಾಡಿದ್ದೆ. ಇದನ್ನ ಚೆನ್ನಾಗಿ ನಿರ್ವಹಣೆ ಮಾಡಿಕೊಂಡು ಹೋಗಬೇಕಾಗಿತ್ತು. ಆದರೆ ಕಡಲ ತೀರ ನೋಡಿದರೆ ಬೇಸರ ಬರುತ್ತಿದೆ. ಸ್ವಚ್ಚತೆಯೇ ಇಲ್ಲದಂತಾಗಿದೆ. ಕಡಲತೀರದಲ್ಲಿ ಅಭಿವೃದ್ದಿ ಕಾಮಗಾರಿಗಳನ್ನ ಮಾಡುವ ಮೂಲಕ ಪ್ರವಾಸಿಗರನ್ನ ಆಕರ್ಷಣೆ ಮಾಡುವಂತೆ ಮಾಡಬೇಕು ಎಂದರು.

Share This
300x250 AD
300x250 AD
300x250 AD
Back to top