Slide
Slide
Slide
previous arrow
next arrow

ದುರ್ಗಮುರ್ಗಿ ಸಮಾಜದಿಂದ ಸುಳ್ಳು ಜಾತಿ ಪ್ರಮಾಣಪತ್ರ; ಕ್ರಮಕ್ಕೆ ವಾಲ್ಮೀಕಿ ಸಂಘದ ಆಗ್ರಹ

300x250 AD

ಕಾರವಾರ: ಮುಂಡಗೋಡದ ನಂದಿಕಟ್ಟಾ ಗ್ರಾಮ ಪಂಚಾಯತಿ ವ್ಯಾಪ್ತಿಯ ದುರ್ಗಮುರ್ಗಿ ಸಮಾಜದವರು ವಾಲ್ಮೀಕಿಗಳೆಂದು ಹೇಳಿಕೊಂಡು ಪರಿಶಿಷ್ಟ ಪಂಗಡದ ಪ್ರಮಾಣಪತ್ರ ಪಡೆದಿದ್ದು, ಅಂಥವರ ವಿರುದ್ಧ ಕ್ರಮವಾಗಬೇಕು ಎಂದು ಮುಂಡಗೋಡದ ವಾಲ್ಮೀಕಿ ನಾಯಕ ಸಂಘ ಆಗ್ರಹಿಸಿದೆ.

ಜಿಲ್ಲಾಧಿಕಾರಿಗೆ ಈ ಕುರಿತು ಮನವಿ ಪತ್ರ ಸಲ್ಲಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ರಾಘವೇಂದ್ರ ಮಳಗೀಕರ, ಹಳ್ಳಿಗಳಿಂದ ಕೂಡಿದ ಪ್ರದೇಶವಾಗಿರುವ ಮುಂಡಗೋಡದ ನಂದಿಕಟ್ಟಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೇವಲ 10- 15 ವಾಲ್ಮೀಕಿ ಸಮಾಜದವರಿದ್ದಾರೆ. ಆದರೆ ದುರ್ಗಮುರ್ಗಿಯ ಸುಮಾರು 100 ಕುಟುಂಬಗಳು ಇಲ್ಲಿವೆ. ಇವರು ವಾಲ್ಮೀಕಿ ಸಮಾಜಕ್ಕೆ ನೀಡುವ ಪರಿಶಿಷ್ಟ ಪಂಗಡದ ಪ್ರಮಾಣಪತ್ರ ಪಡೆದಿದ್ದಾರೆಂಬ ಮಾಹಿತಿ ಇದೆ. ಈ ಹಿಂದೆ ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಕೊಟ್ಟರೂ ಯಾವುದೇ ಕ್ರಮವಾಗಿಲ್ಲ ಎಂದು ದೂರಿದರು.

ಪ್ರವರ್ಗ 1ರಲ್ಲಿ ಬರುವ ದುರ್ಗಮುರ್ಗಿ ಸಮಾಜದವರು ಶಾಲಾ ದಾಖಲಾತಿಗಳನ್ನು ತಿದ್ದುಪಡಿ ಮಾಡಿ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣಪತ್ರವನ್ನು ಕಾನೂನು ಬಾಹಿರವಾಗಿ ಪಡೆದಿದ್ದಾರೆ. ಆ ಮೂಲಕ ಪರಿಶಿಷ್ಟರ ಸೌಲಭ್ಯಗಳನ್ನು ಪಡೆದು, ಪರಿಶಿಷ್ಟರ ಮೇಲೇ ದೌರ್ಜನ್ಯ ಎಸಗುತ್ತಿದ್ದಾರೆ. ಗ್ರಾಮದಲ್ಲಿ ವಾಲ್ಮೀಕಿ ಜಯಂತಿ ಆಚರಣೆಗೆ ಅವಕಾಶ ನೀಡದೆ ವಾಲ್ಮೀಕಿ ಸಮಾಜದ ತಮ್ಮ ಮೇಲೆ ದೌರ್ಜನ್ಯ ಎಸಗುತ್ತಿದೆ ಎಂದು ಅವರು ಆರೋಪಿಸಿದ್ದು, ಇದು ಶುದ್ಧ ಸುಳ್ಳು. ಮಹಾನ್ ನಾಯಕರ ಜಯಂತಿಗಳು ಯಾರು ಬೇಕಾದರೂ ಆಚರಣೆ ಮಾಡಬಹುದು ಎಂದ ಅವರು, ಮಾರೇಕ್ಕಾ ದುರ್ಗಮುರ್ಗಿ ಎಂಬುವವರು ಸುಳ್ಳು ಪರಿಶಿಷ್ಟ ಪಂಗಡದ ಪ್ರಮಾಣಪತ್ರ ಪಡೆದು ನಂದಿಕಟ್ಟಾ ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿ ಅಧಿಕಾರ ಪೂರೈಸಿ, ಈಗ ಉಪಾಧ್ಯಕ್ಷೆಯಾಗಿದ್ದಾರೆ. ಅವರ ವಿರುದ್ಧ ಕ್ರಮವಾಗಬೇಕು. ಯಾವ ಆಧಾರದಲ್ಲಿ ಈ ಸಮಾಜಕ್ಕೆ ಜಾತಿ ಪ್ರಮಾಣಪತ್ರ ನೀಡಿದ್ದೀರಿ ಎಂಬ ಬಗ್ಗೆ ತಹಶಿಲ್ದಾರರಿಗೆ ಕೇಳಿದ್ದೇವೆ ಎಂದರು.

300x250 AD

ಭೀಮ್ ಆರ್ಮಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ್ ಸಂಗಮೇಶ ಮಾತನಾಡಿ, ಮುಂಡಗೋಡದಲ್ಲಿ ಸುಳ್ಳು ಜಾತಿ ಪ್ರಮಾಣಪತ್ರದ ಹಾವಳಿ ಹೆಚ್ಚಾಗಿದೆ. ಶಾಲಾ ದಾಖಲಾತಿ ತಿದ್ದುಪಡಿ ಮಾಡಿ ಪಡೆದಿರುವವರ ಎಲ್ಲಾ ಜಾತಿ ಪ್ರಮಾಣಪತ್ರಗಳನ್ನೂ ರದ್ದು ಮಾಡಬೇಕು. ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ಸರ್ಕಾರ ಈ ಬಗ್ಗೆ ತಹಶಿಲ್ದಾರರಿಗೆ ನಿರ್ದೇಶನ ನೀಡಬೇಕು. ಎಂದು ಆಗ್ರಹಿಸಿದರು.

ಪ್ರಮುಖರಾದ ಕಲ್ಲಪ್ಪ ನಾಗನೂರು, ಲಕ್ಷ್ಮಣ ದೇವರಗುಡ್ಡ, ಸಂತೋಷ್ ತಳವಾರ, ನಾಗರಾಜ ತಳವಾರ, ಸೋಮಣ್ಣ, ಶಂಕರಣ್ಣ ಓಣಿಕೇರಿ, ಅರ್ಜುನ್ ಸನವಳ್ಳಿ ಮುಂತಾದವರಿದ್ದರು

Share This
300x250 AD
300x250 AD
300x250 AD
Back to top