Slide
Slide
Slide
previous arrow
next arrow

ಭಗವದ್ಗೀತೆ ಕೈಯಲ್ಲಿ ಹಿಡಿದು ಹಿಂದೂ ಧರ್ಮದ ರಕ್ಷಣೆ ಮಾಡಲು ಸಾಧ್ಯ: ಹಾರಿಕಾ ಮಂಜುನಾಥ

300x250 AD

ಹಳಿಯಾಳ: ಶ್ರೀಕೃಷ್ಣ ಪರಮಾತ್ಮನ ಮಹಾಭಾರತದ ಭಗವದ್ಗೀತೆಯನ್ನು ಕೈಯಲ್ಲಿ ಹಿಡಿದು ಹಿಂದೂ ಧರ್ಮದ ರಕ್ಷಣೆ ಮಾಡಲು ಸಾಧ್ಯ. ಜಾತಿ- ಮತ ಭೇದವೆಂಬ ವಿಷಬೀಜ ಬಿತ್ತಿ ಹಿಂದೂ ಧರ್ಮವನ್ನು ಒಡೆದಾಳುವ ನೀತಿಯ ವಿರುದ್ಧ ಧ್ವನಿ ಎತ್ತಿ ಹಿಂದೂ ಧರ್ಮವನ್ನು ಉಳಿಸುವ, ಒಗ್ಗೂಡಿಸುವ ಜಾಗೃತಿಗಾಗಿ ವಿಶ್ವ ಹಿಂದೂ ಪರಿಷತ್, ಭಜರಂಗದಳ ಸಂಘಟನೆ ತಲೆ ಎತ್ತಿದೆ ಎಂದು ವಾಗ್ಮಿ ಹಾರಿಕಾ ಮಂಜುನಾಥ ಹೇಳಿದರು.

ಶ್ರೀಶಿವ ಪ್ರತಿಷ್ಠಾಪನಾ ಹಿಂದೂಸ್ತಾನ ಹಾಗೂ ಶ್ರೀರಾಮ ಸೇನೆ ಹಿಂದೂಸ್ತಾನ ಕಾಳಗಿನಕೊಪ್ಪ ದಸರಾ ಹಾಗೂ ನವರಾತ್ರಿ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ದುರ್ಗಾ ದೌಡ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ನಮ್ಮ ಮನೆಯ ತಾಯಂದಿರು ಜಾಗೃತರಾಗಬೇಕು. ನಮ್ಮನೆ ಹೆಣ್ಣುಮಕ್ಕಳಿಗೆ ಲವ್ ಜಿಹಾದ್ ಎಂದರೆ ಏನು ಎಂಬುದನ್ನ ಹೇಳಿಕೊಡಬೇಕು. ಕೆಲವು ಪೋಷಕರು ತಮ್ಮ ಮಕ್ಕಳ ಕೈಯಲ್ಲಿ ಮೊಬೈಲ್ ಕೊಟ್ಟು ಕೂರಿಸುತ್ತಾರೆ. ಆ ಮೊಬೈಲ್‌ನಲ್ಲಿ ಅವಳು ಯಾರ ಜೊತೆ ಮಾತುಕತೆ ಮಾಡುತ್ತಿದ್ದಾಳೆ ಎನ್ನುವದನ್ನ ನೋಡುವುದಿಲ್ಲ ನಮ್ಮ ಹೆಣ್ಣು ಮಕ್ಕಳಿಗೆ ನಾವು ಸ್ವತಂತ್ರ ಕೊಟ್ಟಿದ್ದೇವೆ, ಅವರು ಎಲ್ಲಿ ಬೇಕಾದರೂ ಹೋಗಿ ಬರಬಹುದು ಎಂದು ನಮ್ಮ ಹಿಂದೂ ಪೋಷಕರು ಹೆಮ್ಮೆಯಿಂದ ಹೇಳುತ್ತಾರೆ. ಬೇಸರದ ಸಂಗತಿ ಏನೆಂದರೆ, ಸ್ವತಂತ್ರ ಕೊಡುವುದರ ಜೊತೆಗೆ ಆ ಹೆಣ್ಣು ಮಕ್ಕಳು ಏನನ್ನು ಮಾಡುತ್ತಿದ್ದಾರೆ ಅದರ ಬಗ್ಗೆ ಗಮನ ಇಡುತ್ತಿಲ್ಲ ಎಂದರು.

ನಮ್ಮನೆ ಹೆಣ್ಣುಮಗಳು ಶಾಲೆಗೆ ಕಾಲೇಜಿಗೆ ಹೋಗ್ತಾ ಇದಾಳೆ ಅಂದರೆ ಯಾರ ಜೊತೆ ಹೋಗ್ತಾ ಇದ್ದಾರೆ, ಕಾಲೇಜಿನಲ್ಲಿ ಯಾರ ಜೊತೆ ಮಾತಾಡುತ್ತಾರೆ, ಯಾರು ಸ್ನೇಹಿತರು ಇದ್ದಾರೆ ಎಂಬುದರ ಬಗ್ಗೆ ಗಮನಹರಿಸುವುದು ಪೋಷಕರ ಜವಾಬ್ದಾರಿಯಾಗಿದೆ. ಆ ಕೆಲಸವನ್ನು ಪೋಷಕರು ಮಾಡಬೇಕಾಗಿದೆ. ಒಂದುವೇಳೆ ಲವ್ ಜಿಹಾದ್ ಎಂಬ ಬಲೆಗೆ ಒಬ್ಬ ಹೆಣ್ಣು ಮಗಳು ಸಿಕ್ಕಿದರೆ ಅವಳು ಮತ್ತೆ ಪುನಃ ಸಿಗುವುದು ತುಂಡು ತುಂಡಾಗಿ. ಇತ್ತೀಚಿನ ದಿನಗಳಲ್ಲಿ ಲವ್ ಜಿಹಾದ್ ಅತಿ ವೇಗವಾಗಿ ಹರಡುತ್ತಿದೆ. ಇದನ್ನು ನಿರ್ಮೂಲನೆ ಮಾಡಲು ದಯವಿಟ್ಟು ಪೋಷಕರೆಲ್ಲರೂ ತಮ್ಮ ಮನೆಯ ಹೆಣ್ಣು ಮಗಳ ಮೇಲೆ ಗಮನಹರಿಸಿ ಎಂದು ಹೇಳಿದರು.

300x250 AD

ಈ ಸಂದರ್ಭದಲ್ಲಿ ಪ್ರಮುಖರಾದ ಪೂಜಾ ದೂಳಿ, ಅನಿಲ್ ಮುತ್ನಾಳೆ, ಪತ್ರಕರ್ತ ಯುವರಾಜ ಎಸ್.ಕೆ., ಸಂತೋಷ ಘಟಕಾಂಬಳೆ, ಪ್ರಸಾದ್ ಹುಣಸವಾಡಕರ, ರಘು ಆನೆಗುಂದಿ, ಬಸವರಾಜ ದೌಡ್ಡಗೌಡ ಸೇರಿ ಹಲವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top