Slide
Slide
Slide
previous arrow
next arrow

ಪೌರಕಾರ್ಮಿಕರ ಮಕ್ಕಳಿಗೆ ಶಿಕ್ಷಣ ನೀಡಿ ಆದರ್ಶ ನಾಗರಿಕರನ್ನಾಗಿಸಲು ಶಾಸಕ ಭೀಮಣ್ಣ ಕರೆ

300x250 AD

ಶಿರಸಿ: ಶಿರಸಿ ನಗರದ ದೇವಿಕೆರೆ ಕೋರ್ಟ್ ರಸ್ತೆಯಲ್ಲಿರುವ ನೂತನವಾಗಿ ಬೆಳ್ಳಿ ಕವಚ ಧರಿಸಿದ ಶ್ರೀ ನಾಗಚೌಡೇಶ್ವರಿ ದೇವಸ್ಥಾನಕ್ಕೆ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕರಾದ ಭೀಮಣ್ಣ ನಾಯ್ಕ ನವರಾತ್ರಿ ಉತ್ಸವ ನಿಮಿತ್ತ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಸ್ಥಳೀಯರು, ಕೋರಾರ ಸಮಾಜದವರು ಹಾಗೂ ದೇವಸ್ಥಾನದ ಕಮಿಟಿಯವರು ಶಾಸಕರನ್ನು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿದ ಭೀಮಣ್ಣ ನಾಯ್ಕ ಮಾತನಾಡುತ್ತಾ, ಪೌರಕಾರ್ಮಿಕರ ಮಕ್ಕಳು ಪೌರಕಾರ್ಮಿಕರಾಗಬೇಕೆಂದೆನಿಲ್ಲ. ಅವರ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರವನ್ನು ನೀಡಿ ಈ ದೇಶದ ಆದರ್ಶ ನಾಗರಿಕರನ್ನಾಗಿ ಮಾಡಬೇಕು. ಉತ್ತಮ ಪ್ರತಿಭೆಗಳಿಗೆ ಸಮಾಜಕ್ಕೆ ಮಾದರಿಯಾಗುವಂತೆ ಸೂಕ್ತ ಅವಕಾಶವನ್ನು ನೀಡಬೇಕು. ಪೌರಕಾರ್ಮಿಕರು ಸರ್ಕಾರದ ಸವಲತ್ತು ಮತ್ತು ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಅಭಿವೃದ್ಧಿ ಹೊಂದಬೇಕೆಂದು ಕರೆ ನೀಡಿದರು.

300x250 AD

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉದ್ಯಮ ಗಣಪತಿ ಜೋಗಳೇಕರ್, ನಗರಸಭೆಯ ಸದಸ್ಯರಾದ ಪ್ರದೀಪ ಶೆಟ್ಟಿ, ರಾಜು ಉಗ್ರಾಣಕರ, ಮನೋಹರ ನಾಯ್ಕ, ಗಜಾನನ ಹೊಂಡದಕಲ್ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top