Slide
Slide
Slide
previous arrow
next arrow

ಜಿಲ್ಲೆಯ 170 ವಿದ್ಯಾರ್ಥಿಗಳಿಗೆ ವಿದ್ಯಾಪೋಷಕದಿಂದ ಧನ ಸಹಾಯ

300x250 AD

ಶಿರಸಿ: ಯಾರಿಂದ ಏನನ್ನು ಪಡೆದಿರುತ್ತೇವೆಯೋ ಅದನ್ನು ಮರಳಿ ಕೊಟ್ಟಾಗ ಜೀವನ ಉಜ್ವಲವಾಗುತ್ತದೆ ಎಂದು ಕೆ.ಬಿ.ಲೋಕೇಶ ಹೆಗಡೆ ಅಭಿಪ್ರಾಯಪಟ್ಟರು.

ಇಲ್ಲಿನ ಪೂಗಭವನದಲ್ಲಿ ನಡೆದ ವಿದ್ಯಾಪೋಷಕದ ಶೈಕ್ಷಣಿಕ ಧನಸಹಾಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾರಾಯಣ ಹೆಗಡೆ ವಿದ್ಯಾಪೋಷಕದ ಒಡನಾಟವನ್ನು ಹಂಚಿಕೊಂಡು, ನಮ್ಮ ಆಸಕ್ತ ಕ್ಷೇತ್ರದಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಾಗ ಮಾತ್ರ ಗೆಲುವು ಸಾದ್ಯ. ಸಮಯದ ಸದುಪಯೋಗ, ಸಮಾಜದೊಟ್ಟಿಗಿನ ನಮ್ಮ ಬೆರೆಯುವಿಕೆ ನಮ್ಮ ಬದುಕನ್ನು ರೂಪಿಸುತ್ತದೆ ಎಂಬ ಹಿತನುಡಿಗಳನ್ನು ಹೇಳಿದರು. 

ಸತೀಶ ವಿಶ್ವನಾಥನ್ ಮುನ್ನೇಟ್ರಮ್‌ ಫೌಂಡೇಶನ್‌ ಹಾಗೂ ಸಿ.ಎ. ಕೋರ್ಸ್‌ ಬಗ್ಗೆ ಮಾಹಿತಿ ನೀಡಿದರು. ಚಂದ್ರಶೇಖರ ಎಸ್.‌ ಕೆ. ವಿದ್ಯಾಪೋಷಕ ಸಂಸ್ಥೆಯ ಆಗುಹೋಗುಗಳ ಬಗ್ಗೆ ತಿಳಿಸುತ್ತ ಸಂಸ್ಥೆಯು ಮುಂದಿನ ದಿನಗಳಲ್ಲಿ ಕೈಗೊಳ್ಳುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ವಿದ್ಯಾಪೋಷಕದ ಬೆಳವಣಿಗೆ ಹಾಗೂ ಯಶಸ್ಸಿನ ಬಗ್ಗೆ ಹಿರಿಯ ಸ್ವಯಂಸೇವಕ ವಿಜಯ ಹೆಗಡೆ ದೊಡ್ಮನೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ವಿದ್ಯಾಪೋಷಕದ ಕಾರ್ಯಚಟುವಟಿಕೆಗಳ ಬಗ್ಗೆ ರತ್ನಾ ಹಿಪ್ಪರಗಿ ಹಾಗೂ ವೆಂಕಟೇಶನ್‌ ತಿಳಿಸಿಕೊಟ್ಟರು. ವಿದ್ಯಾಪೋಷಕದ ಸ್ವಯಂಸೇವಕ ಎಮ್.‌ಎಮ್.‌ರೇವಡಿ ಇವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

300x250 AD

ಕಾರ್ಯಕ್ರಮದಲ್ಲಿ ಸ್ವಯಂಸೇವಕರಾದ ಕೆ.ಎಲ್.‌ಭಟ್ಟ ಇವರನ್ನು ಸನ್ಮಾನಿಸಲಾಯಿತು, ಹಾಗೆಯೇ ಸಾಧನೆಗೈದ ವಿದ್ಯಾಪೋಷಕದ ವಿದ್ಯಾರ್ಥಿಗಳನ್ನು  ಸನ್ಮಾನಿಸಲಾಯಿತು. 

ವಿದ್ಯಾಪೋಷಕದ ವಿದ್ಯಾರ್ಥಿನಿಯಾದ ವಾಣಿ ಹೆಗಡೆ ಪ್ರಾರ್ಥಿಸಿದರು. ವಿದ್ಯಾರ್ಥಿಗಳಾದ ಪವನಕುಮಾರ ಹೆಗಡೆ, ಅಶ್ವಿನಿ ಹೆಗಡೆ ಮತ್ತು ಕಾರ್ತಿಕ ಸಾರಂಗ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ವಿದ್ಯಾರ್ಥಿ ವಿನಯಪ್ರಸಾದ ಹೆಗಡೆ ಪ್ರತಿಜ್ಞಾ ವಿಧಿ ಬೋಧಿಸಿದರು. ನಮಿತಾ ಹೆಗಡೆ  ಸ್ವಾಗತಿಸಿದರೆ, ಸ್ವಯಂಸೇವಕ ರಾಜು ಹೆಗಡೆ ಆಭಾರ ಮನ್ನಣೆ ನಡೆಸಿಕೊಟ್ಟರು. ವಿದ್ಯಾಪೋಷಕದ ವಿದ್ಯಾರ್ಥಿನಿಯಾದ ಶಿಲ್ಪಾ ಪೂಜಾರಿ ನಿರ್ವಹಿಸಿದರು. 2023-24 ನೇ ಸಾಲಿನಲ್ಲಿ ಉತ್ತರಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯ 280 ವಿದ್ಯಾರ್ಥಿಗಳಿಗೆ 35.50 ಲಕ್ಷಗಳಸ್ಟು ಧನಸಹಾಯವನ್ನು ನೀಡಲಾಗಿದೆ.  ಈ ಕಾರ್ಯಕ್ರಮದಲ್ಲಿ ಉತ್ತರಕನ್ನಡ ಜಿಲ್ಲೆಯ 170 ವಿದ್ಯಾರ್ಥಿಗಳು, ಪಾಲಕರು ಹಾಜರಿದ್ದರು. ವಿದ್ಯಾಪೋಷಕದ ಸ್ವಯಂಸೇವಕರು ಹಾಗೂ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top