Slide
Slide
Slide
previous arrow
next arrow

ವ್ಯಾಪಾರಸ್ಥರ ಸಭೆ; ನಿಯಮ ಪಾಲನೆಗೆ ಆಡಳಿತಾಧಿಕಾರಿ ಸೂಚನೆ

300x250 AD

ಹಳಿಯಾಳ: ತಾಲೂಕು ಆಡಳಿತ ಹಾಗೂ ಪುರಸಭೆ, ಪೊಲೀಸ್ ಇಲಾಖೆ ಇವರ ಆಶ್ರಯದಲ್ಲಿ ಆಡಳಿತಾಧಿಕಾರಿ ಜಯಲಕ್ಷ್ಮಿ ರಾಯಕೋಡ ಅಧ್ಯಕ್ಷತೆಯಲ್ಲಿ ಇಲ್ಲಿನ ಪುರಭವನಲ್ಲಿ ಗೂಡಂಗಡಿ ಮಾಲೀಕರ ತರಕಾರಿ ಮಾರಾಟಗಾರರ ಸಭೆ ಬುಧವಾರ ನಡೆಯಿತು.

ಗೂಡಂಗಡಿ ಮಾಲೀಕರು, ತರಕಾರಿ ಮಾರಾಟಗಾರರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಆಡಳಿತಾಧಿಕಾರಿ ಜಯಲಕ್ಷ್ಮಿ ರಾಯಕೋಡ, ಹಂತ ಹಂತವಾಗಿ ಎಲ್ಲಾ ಸಮಸ್ಯೆಗಳನ್ನೂ ಬಗೆಹರಿಸಲಾಗುವುದು. ನೀವು ಮಾಡುತ್ತಿರುವ ವ್ಯಾಪಾರದಿಂದ ನಿಮಗೂ ತೊಂದರೆ ಆಗಬಾರದು, ಸಾರ್ವಜನಿಕರಿಗೂ ತೊಂದರೆ ಆಗಬಾರದು. ರಸ್ತೆ ಆಗಿರಬೇಕು, ಚರಂಡಿ ಆಗಿರಬೇಕು. ನೀವು ವ್ಯಾಪಾರ ಮಾಡುತ್ತಿರುವ ಸ್ಥಳ ನಿಮ್ಮ ಸ್ಥಳವಾಗಿರಬೇಕು. ಗೂಡಂಗಡಿಗಳನ್ನು ವ್ಯವಸ್ಥೆಗಾಗಿ ಇರಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸಿಕೊಡಲಾಗುವುದು. ನಾಳೆ ಮಾರುಕಟ್ಟೆಗೆ ಭೇಟಿ ನೀಡಿ ನೀಡಿರುವ ನಿಯಮ ಮತ್ತು ಷರತ್ತುಗಳು ಪ್ರಕಾರ ನಡೆದರೆ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಲಾಗುವುದು. ಒಂದುವೇಳೆ ನೀಡಿರುವ ನಿಯಮ ಮತ್ತು ಷರತ್ತುಗಳು ಪಾಲಿಸದೆ ಇದ್ದಲ್ಲಿ ಮತ್ತೆ ತೆರವು ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಹೇಳಿದರು.

300x250 AD

ಸಭೆಯಲ್ಲಿ ತಹಶೀಲ್ದಾರ್ ಜಿ.ಕೆ.ರತ್ನಾಕರ್, ಪುರಸಭೆ ಮುಖ್ಯಾಧಿಕಾರಿ ಅಶೋಕ್ ಸಾಳೆನವರ, ಪಿಎಸ್‌ಐ ವಿನೋದ್ ರೆಡ್ಡಿ, ಪುರಸಭೆ ಸದಸ್ಯ ಉದಯ್ ಹುಲಿ, ಗೂಡಂಗಡಿ ಮಾಲೀಕರು, ತರಕಾರಿ ಮಾರಾಟಗಾರರ ಇದ್ದರು.

Share This
300x250 AD
300x250 AD
300x250 AD
Back to top