Slide
Slide
Slide
previous arrow
next arrow

ಇಡೀ ರಾಜ್ಯ ಸರ್ಕಾರವೇ ಮುಸಲ್ಮಾನರ ಬೆಂಗಾವಲಿಗಿದೆ: ಚಕ್ರವರ್ತಿ ಸೂಲಿಬೆಲೆ

300x250 AD

ಅಂಕೋಲಾ: ಇಡೀ ರಾಜ್ಯ ಸರ್ಕಾರವೇ ಮುಸಲ್ಮಾನರಿಗೆ ಬೆಂಗಾವಲಾಗಿ ನಿಂತು, ಅವರಿಂದಲೇ ನಾವು ಅಧಿಕಾರಕ್ಕೆ ಬಂದಿರುವುದು ಎಂದು ಹೇಳುತ್ತಿರುವಾಗ ಶಿವಮೊಗ್ಗದಲ್ಲಿ ನಡೆದಿರುವಂತಹ ದುರ್ಘಟನೆಗಳು ಅಂಕೋಲಾ, ಕಾರವಾರ ಸೇರಿದಂತೆ ನಾಡಿನೆಲ್ಲೆಡೆಯೂ ಜರುಗಬಹುದು ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಶಿವಮೊಗ್ಗದಲ್ಲಿ ಮುಸಲ್ಮಾನರು ವಿವಿಧ ತಂತ್ರಗಳ ಮೂಲಕ ಹಿಂದುಗಳಿಗೆ ಆಹಿತರ ಘಟನೆಗೆ ಮುಂದಾಗುವ ರೀತಿಯಲ್ಲಿ ಪ್ರಚೋದನೆ ನೀಡಿದ್ದರು. ಆದರೆ ಹಿಂದೂಗಳು ಅದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ. ಅದಕ್ಕಾಗಿಯೇ ಪೊಲೀಸರೊಂದಿಗೆ ಕಿತ್ತಾಟ ನಡೆಸಿದ್ದಾರೆ. ಇದನ್ನೆಲ್ಲ ಗಮನಿಸಿದರೆ ಮುಸಲ್ಮಾನರ ಸಹಜ ಮಾನಸಿಕತೆಯೇ ಗಲಾಟೆ ಮಾಡುವುದು ಎಂದು ತಿಳಿಯುತ್ತದೆ. ಗಲಾಟೆ ಮಾಡಿದವರಿಗೆ ರಕ್ಷಣೆ ನೀಡುವ ಜಮೀರ್ ಅಹ್ಮದ್ ಅಂತಹ ಸಚಿವರು, ಅವರನ್ನು ಬಿಡಿಸಿ ಎಂದು ಪತ್ರ ಬರೆಯುವ ಗ್ರಹ ಸಚಿವರು, ಹತ್ತು ಸಾವಿರ ರೂಪಾಯಿ ಕೋಟಿ ಅವರಿಗೆ ಅನುದಾನ ನೀಡುವ ಮುಖ್ಯಮಂತ್ರಿಗಳಿದ್ದಾರೆ. ಹಾಗಾಗಿಯೇ ಈ ರೀತಿಯ ಘಟನೆಗಳು ನಾಡಿನಲ್ಲಡೆ ಸಂಭವಿಸಬಹುದು ಎಂದರು.

ಉತ್ತರ ಕನ್ನಡ ಜಿಲ್ಲೆ ಐದು ಬಾರಿ ಬಿಜೆಪಿ ಸಂಸದರನ್ನು ಆಯ್ಕೆ ಮಾಡಿದ್ದರು ಅದಕ್ಕೆ ಪೂರಕವಾಗಿ ಅಭಿವೃದ್ಧಿಯಾಗಿಲ್ಲ ಎನ್ನುವ ಚರ್ಚೆಗಳು ಜನರದ್ದಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಚಕ್ರವರ್ತಿ ಸೂಲಿಬೆಲೆ, ನಾವು ನೀಡಿದ ಎಂಪಿ ಸ್ಥಾನದಿಂದ ರಾಷ್ಟçಕ್ಕೇನು ಪ್ರಯೋಜನವಾಗಿದೆ ಎನ್ನುವುದನ್ನು ತಿಳಿಯುವುದು ಸೂಕ್ತ. ಡಿಜಿಟಲ್ ವ್ಯವಹಾರ, 370ನೇ ವಿಧಿ ರದ್ದು ಸೇರಿದಂತೆ ನಮ್ಮ ಒಂದು ಸಂಸದ ಸ್ಥಾನ ಹಲವು ಬದಲಾವಣೆಗೆ ಕಾರಣವಾಗಿದೆ ಎಂದರು. ಹಲವು ಬದಲಾವಣೆಗೆ ಕಾರಣವಾದರೂ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತರಲು ಎಂಪಿ ಸ್ಥಾನದಿಂದ ಸಾಧ್ಯವಾಗಿಲ್ಲವೇ ಎನ್ನುವ ಪ್ರಶ್ನೆಗೆ ಉತ್ತರಿಸಿ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ್ದು. ಅದಕ್ಕೆ ಸಂಬಂಧಿಸಿದ ಚರ್ಚೆಗಳು ನಡೆಯುತ್ತಿರುವಾಗಲೇ ಸರ್ಕಾರಗಳು ಬದಲಾಗುತ್ತವೆ. ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬಂದರೂ ರೋಗಿಗಳಿರುವುದು ಕಡಿಮೆ, ಏಕೆಂದರೆ ಇಲ್ಲಿಯ ಜನ ಆರೋಗ್ಯವಂತರು ಎಂದು ವೈದ್ಯರು ಹೇಳುತ್ತಾರೆ. ಮುಂದಿನ ದಿನಗಳಲ್ಲಿ ಜಿಲ್ಲೆಗೆ ಏಮ್ಸ್ ಆಸ್ಪತ್ರೆ ಬಂದರು ಅಚ್ಚರಿ ಇಲ್ಲ ಎಂದರು.

300x250 AD

ಉತ್ತರ ಕನ್ನಡ ಜಿಲ್ಲೆಯ ಸಂಸದ ಸ್ಥಾನಕ್ಕೆ ಈ ಮೊದಲೇ ಎರಡು ಬಾರಿ ತನ್ನ ಹೆಸರು ಕೇಳಿ ಬಂದಿತ್ತಾದರೂ ತಾನು ಆಕಾಂಕ್ಷಿಯಲ್ಲ. ಸಮೃದ್ಧ ರಾಷ್ಟç ನಿರ್ಮಾಣದ ಕಡೆಗೆ ನನ್ನ ಒಲವು. ದೇಶವನ್ನೇ ಸಮರ್ಥವಾಗಿ ನಿಭಾಯಿಸಬಲ್ಲ ಮೋದಿ ಆಯ್ಕೆಯಾಗಬೇಕು ಎನ್ನುವುದೇ ನಮ್ಮ ಉದ್ದೇಶ ಎಂದರು.

Share This
300x250 AD
300x250 AD
300x250 AD
Back to top