ಶಿರಸಿ: ಎಂಇಎಸ್‌ನ ಎಂ.ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪವನ್ನು ಸಮರ್ಪಿಸುವ ಮೂಲಕವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ. ಟಿ.ಎಸ್ ಹಳೆಮನೆ ಮಹಾತ್ಮ ಗಾಂಧೀಜಿಯವರ ಸಿದ್ಧಾಂತ, ತತ್ವಗಳು ಇಂದಿಗೂ ಪ್ರಸ್ತುತವಾಗಿದೆ. ಸ್ವಚ್ಛತೆ, ಗ್ರಾಮ ಅಭಿವೃದ್ಧಿ, ಹರಿಜನರ ಉದ್ದಾರ ಈ ಎಲ್ಲಾ ವಿಚಾರಧಾರೆಗಳು ಇಂದಿಗೂ ಮಾದರಿಯಾಗಿದೆ. ಅವರ ಅಹಿಂಸಾ ಹೋರಾಟವೇ ದೇಶಕ್ಕೆ ಸ್ವಾತಂತ್ರ್ಯ ಬರಲು ಕಾರಣವಾಗಿದೆ. ಖಾದಿ ವಸ್ತ್ರಗಳ ಬಳಕೆಗೆ ವತ್ತು ನೀಡಿದವರು ಅವರು. ಸ್ವದೇಶಿ ಚಿಂತನೆಯ ಹರಿಕಾರರು. ಶಾಸ್ತ್ರೀಜಿಯವರು ಕೂಡ ನಮ್ಮ ದೇಶ ಕಂಡ ಅಪ್ರತಿಮ, ಸಜ್ಜನ ಪ್ರಧಾನಿಗಳಲ್ಲಿ ಒಬ್ಬರು. ದೇಶದ ಅಭಿವೃದ್ಧಿಯ ಚಿಂತನೆ, ರೈತರ ಹಿತ ಚಿಂತನೆ ಎಲ್ಲಾ ಸರಕಾರಗಳಿಗೂ ಮಾದರಿಯಾಗಿದೆ ಎಂದರು.
ಸಭಾ ಕಾರ್ಯಕ್ರಮದ ನಂತರ ಪ್ರಾಧ್ಯಾಪಕರು, ಶಿಕ್ಷಕೇತರ ಸಿಬ್ಬಂದಿಗಳು, ಎನ್‌ಸಿಸಿ, ಎನ್ಎಸ್ಎಸ್, ಸ್ಕೌಟ್ಸ್ ಗೈಡ್ಸ್, ರೆಡ್ ಕ್ರಾಸ್‌ನ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಶ್ರಮದಾನವನ್ನು ಮಾಡಿದರು.