Slide
Slide
Slide
previous arrow
next arrow

ಅ.1ಕ್ಕೆ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರಿಕ್ಷಾ ಚಾಲಕರಿಗೆ ಸಮವಸ್ತ್ರ ವಿತರಣೆ

300x250 AD

ಕುಮಟಾ: ಕುಮಟಾದ ಹೆಗಡೆ ಕ್ರಾಸ್ ಬಳಿಯ ಪುರಭವನದಲ್ಲಿ ಶ್ರೀ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕುಮಟಾ ತಾಲೂಕಿನ ಆಟೋ ರಿಕ್ಷಾ, ಹಾಗೂ ಗೂಡ್ಸ್ ರಿಕ್ಷಾ ಚಾಲಕ ಮತ್ತು ಮಾಲಕರಿಗೆ ಉಚಿತ ಪಾಸಿಂಗ್ ಯೋಜನೆ ಹಾಗೂ ಔತಣಕೂಟ, ಸಮವಸ್ತ್ರ ಮತ್ತು ಪ್ರಿಂಟಿಂಗ್ ಹುಡ್ ವಿತರಣಾ ಕಾರ್ಯಕ್ರಮವನ್ನು ಅ.1,ರವಿವಾರ ಬೆಳಿಗ್ಗೆ 10.30 ಕ್ಕೆ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಉದ್ಘಾಟಕರಾಗಿ ಶಾಸಕ ದಿನಕರ ಶೆಟ್ಟಿ ಆಗಮಿಸಲಿದ್ದು, ಅಧ್ಯಕ್ಷತೆಯನ್ನು ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಭಟ್ಕಳ ಡಿ.ವೈ.ಎಸ್.ಪಿ. ಶ್ರೀಕಾಂತ ಕೆ., ಕುಮಟಾ ಪುರಸಭೆ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ, ಉತ್ತರಕನ್ನಡ ಮತ್ತು ಹೊನ್ನಾವರ ಆಟೋ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಶಿವರಾಜ ಮೇಸ್ತಾ,ಭಟ್ಕಳ ಆಟೋ ಚಾಲಕ ಸಂಘದ ಅಧ್ಯಕ್ಷ ಕೃಷ್ಣ ನಾಯ್ಕ್ ಆಗಮಿಸಲಿದ್ದು, ಆಟೋ ಚಾಲಕ ಮಾಲಕ ಸಂಘದ ಮಾಜಿ ಜಿಲ್ಲಾಧ್ಯಕ್ಷ ಆರ್.ಜಿ‌.ನಾಯ್ಕ್ ಕುಮಟಾ, ಸಮಾಜ ಸೇವಕ ಕುಮಾರ ಮಾರ್ಕಂಡಯ್ಯಾ,ಸಂತೋಷ ನಾಯ್ಕ್ ಯಲ್ಲಾಪುರ, ವಿಶ್ವನಾಥ ಗೌಡ ಉಪಸ್ಥಿತರಿರಲಿದ್ದಾರೆ.

300x250 AD

ಸಾರ್ವಜನಿಕರು ಕಾರ್ಯಕ್ರಮಕ್ಕೆ ಆಗಮಿಸಿ ಸಮಾಜಮುಖಿ ಕಾರ್ಯಗಳನ್ನು ಪ್ರೋತ್ಸಾಹಿಸಿ, ಮಾರ್ಗದರ್ಶನ ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top