Slide
Slide
Slide
previous arrow
next arrow

ವಿಸರ್ಜನೆಗೆ ಸಾಲು ಸಾಲಾಗಿ ಸಾಗಿದ ಗಣಪನ ಮೂರ್ತಿಗಳು

300x250 AD

ಗೋಕರ್ಣ: ಶ್ರೀಕ್ಷೇತ್ರ ಗೋಕರ್ಣದಲ್ಲಿ ಗಣಪತಿ ಪ್ರತಿಷ್ಠಾಪನೆಯ ಜತೆಗೆ ವಿಸರ್ಜನೆಯು ಕೂಡ ಇಲ್ಲಿ ವಿಶೇಷವಾಗಿ ಗಮನ ಸೆಳೆಯುತ್ತದೆ. ಶ್ರೀಮಹಾಬಲೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ ಶ್ರೀ ಮಹಾಗಣಪತಿಯನ್ನು ಕೋಟಿತೀರ್ಥದವರೆಗೆ ಪಲ್ಲಕ್ಕಿಯ ಮೂಲಕ ಸಾಗಿ ನಂತರ ಶ್ರೀ ವೆಂಕಟರಮಣ ದೇವಸ್ಥಾನದ ಹತ್ತಿರ ಆಗಮಿಸುತ್ತದೆ.

ನಂತರ ಇದರ ಜತೆಗೆ ಕೆಲ ಊರುಗಳ ಗಣಪತಿಯು ಕೂಡ ಇದರೊಟ್ಟಿಗೆ ಆಗಮಿಸಿ ರಥಬೀದಿಯ ಮೂಲಕ ಭವ್ಯ ಮೆರವಣಿಗೆಯಲ್ಲಿ ಸಾಗಿ ಬಂದು ಶ್ರೀ ಮಹಾಬಲೇಶ್ವರ ದೇವಸ್ಥಾನದ ಎದುರಿನ ಪ್ರಮುಖ ಕಡಲತೀರದಲ್ಲಿ ಎಲ್ಲ ಗಣಪತಿ ಮೂರ್ತಿಗಳನ್ನು ಸಾಲಾಗಿ ಇಡಲಾಯಿತು. ನಂತರ ಅಲ್ಲಿ ಪೂಜೆ ಸಲ್ಲಿಸಿ ನಿಧಾನವಾಗಿ ಸಮುದ್ರದಲ್ಲಿ ದೇವರುಗಳನ್ನು ವಿಸರ್ಜನೆ ಮಾಡಲಾಯಿತು. ಇದನ್ನು ನೋಡಲು ಅಕ್ಕಪಕ್ಕದ ಗ್ರಾಮದವರು ಕೂಡ ಆಗಮಿಸಿದ್ದರು.

300x250 AD

ಪಿ.ಐ ವಸಂತ ಆಚಾರಿ, ಪಿಎಸ್‌ಐ ಸುಧಾ ಅಘನಾಶಿನಿ, ಸಿಬ್ಬಂದಿಗಳು, ಕರಾವಳಿ ಕಾವಲು ಪಡೆ, ಜೀವ ರಕ್ಷಕ ಸಿಬ್ಬಂದಿ ಅವರು ಸಹಕರಿಸಿದರು.

Share This
300x250 AD
300x250 AD
300x250 AD
Back to top