ಗೋಕರ್ಣ: ಸಮೀಪದ ಕಡಮೆಯಲ್ಲಿ ಗಣೇಶೋತ್ಸವದ ಐವತ್ತನೇ ವರ್ಷದ ಆಚರಣೆಯನ್ನು ಸುವರ್ಣ ಸಂಭ್ರಮ ಎಂಬ ಶೀರ್ಷಿಕೆಯಡಿಯಲ್ಲಿ ವೈಭವದಿಂದ ಆಚರಿಸಲಾಯಿತು.
ಕಳೆದ ಐವತ್ತು ವರ್ಷಗಳಿಂದ ಗಣೇಶೋತ್ಸವವನ್ನು ಅನೂಚಾನವಾಗಿ ನಡೆಸಿಕೊಂಡು ಬರುವಲ್ಲಿ ಕೈಜೋಡಿಸಿದ ಮೂಲ ಸಂಘಟನೆಯ ಊರ ಹಿರಿಯರನ್ನು ವೇದಿಕೆಯಲ್ಲಿ ಸನ್ಮಾನಿಸುವ ಕಾರ್ಯಕ್ರಮ ನಡೆಯಿತು. ಸುವರ್ಣ ಸಂಭ್ರಮ ವೇದಿಕೆಯ ಕಾರ್ಯಕ್ರಮವನ್ನು ಊರ ಗೌಡರಾದ ಶ್ರೀಬೀರಪ್ಪ ಬೀರಾ ಗೌಡರು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು. ಊರಿನ ಹಿರಿಯ ಸಂಘಟಕರನ್ನು ಗೌರವಪೂರ್ವಕವಾಗಿ ಶಾಲು ಹೊದಿಸಿ ಫಲ ನೀಡಿ ಸನ್ಮಾನಿಸಲಾಯಿತು.
ಉಪನ್ಯಾಸಕ ರಮೇಶ ಗೌಡ ಸನ್ಮಾರ್ಗದ ಸಂಘಟನೆಯಲ್ಲಿ ಅಸಾಧಾರಣವಾದ ಶಕ್ತಿ ಅಡಗಿದೆ. ಹಲವು ಅಭ್ಯುತ್ಥಾನದ ಕಾರ್ಯಕ್ರಮಗಳ ಮೂಲಕ ಅದನ್ನು ಕಂಡುಕೊಳ್ಳಲು ಸಾಧ್ಯ. ಶಿಕ್ಷಣದ ಮೂಲಕ ಇರುವ ಎಲ್ಲಾ ಸದವಕಾಶಗಳನ್ನು ಪಡೆಯಬಹುದು. ಅದಕ್ಕಾಗಿ ಊರಿನ ಶಾಲೆಯನ್ನು ಮಾದರಿಯಾಗಿ ರೂಪಿಸಲು ಜೊತೆಯಾಗೋಣ ಎಂದು ಪ್ರೇರಣಾದಾಯಕವಾಗಿ ಮಾತನಾಡಿದರು. ಗ್ರಾಮ ಪಂಚಾಯತ ಹನೇಹಳ್ಳಿಯ ಅಧ್ಯಕ್ಷರೂ ಸಂಘಟನೆಯ ಸಕ್ರಿಯ ಕಾರ್ಯಕರ್ತರೂ ಆದ ಸಣ್ಣು ಗೌಡ ಹಿರಿಯರ ಸ್ಮರಣೀಯ ಕೆಲಸಗಳನ್ನು ನೆನಪಿಸಿಕೊಂಡರು. ಮಕ್ಕಳ ಓದಿನ ಬಗ್ಗೆ ಪಾಲಕರು ಕಾಳಜಿ ತೆಗೆದುಕೊಳ್ಳಬೇಕೆಂಬುದನ್ನು ಒತ್ತಿಹೇಳಿದರು.
ಕಾರ್ಯಕ್ರಮದಲ್ಲಿ ವಸಂತ ಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪಾಂಡು ಗೌಡ ಆತ್ಮೀಯವಾಗಿ ಸ್ವಾಗತಿಸಿದರು. ಶಿಕ್ಷಕರಾದ ದಯಾನಂದ ಗೌಡ ವಂದಿಸಿದರು. ನಿತ್ಯಾನಂದ ಗೌಡ ಕಾರ್ಯಕ್ರಮ ನಿರ್ವಹಿಸಿದರು. ಗಣೇಶೋತ್ಸವ ಸಮಿತಿಯ ಎಲ್ಲಾ ಕಾರ್ಯಕರ್ತರು ಜೊತೆಯಿದ್ದು ಸಹಕರಿಸಿದರು. ನಂತರ ಓಂಕಾರ ಮೆಲೋಡಿಸ್ ಬೆಂಗಳೂರು ತಂಡದವರಿAದ ರಸಮಂಜರಿ ಮತ್ತು ವಿವಿಧ ಮನರಂಜನಾ ಕಾರ್ಯಕ್ರಮಗಳು ಉತ್ತಮ ರಂಜನೆಯನ್ನು ನೀಡಿದವು. ಗಣೇಶ ಪ್ರತಿಷ್ಠಾಪನೆ ಮಹಾಪೂಜೆ, ಗಣಹೋಮ. ಮಹಾ ಅನ್ನಸಂತರ್ಪಣೆ. ಇತ್ಯಾದಿ ಧಾರ್ಮಿಕ ಕರ್ಯಗಳು ನಡೆದವು. ಗುಮಟೆಪಾಂಗ್, ಮಕ್ಕಳ ಮನರಂಜನಾ ಕಾರ್ಯಕ್ರಮ ವಿಶೇಷ ವಾದ್ಯ ವೃಂದದೊAದಿಗೆ ಆಕರ್ಷಕವಾದ ಮೆರವಣಿಗೆಯಲ್ಲಿ ಮೂರ್ತಿ ವಿಸರ್ಜನೆ ಮುಂತಾದ ಸೊಗಸಾದ ಕಾರ್ಯಕ್ರಮಗಳು ನೆರವೇರಿದವು. ಸಮಸ್ತ ಕಡಮೆ ಊರಿನ ನಾಗರಿಕರು ಸುವರ್ಣ ಸಂಭ್ರಮಕ್ಕೆ ಸಾಕ್ಷಿಯಾದರು.