ಕುಮಟಾ: ತಾಲೂಕಿನ ಗೋರೆಯ ಕೆನರಾ ಎಕ್ಸಲೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ ಇಸ್ರೋ ಸಂಸ್ಥೆಯ ಎಕ್ಸ್ ಡೆಪ್ಯೂಟಿ ಡೈರೆಕ್ಟರ್ ಪಿ.ಜೆ.ಭಟ್ರವರು ಚಂದ್ರಯಾನ -3 ಕುರಿತಾದ ವಿಜ್ಞಾನ ಉಪನ್ಯಾಸ ನಡೆಸಿಕೊಟ್ಟರು.
ಗೋರೆಯ ಕೆನರಾ ಎಕ್ಸಲೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ವಿಜ್ಞಾನ ಉಪನ್ಯಾಸ ಕಾರ್ಯಕ್ರಮದಲ್ಲಿ ಪಿ.ಜೆ.ಭಟ್ ಅವರು, ಚಂದ್ರಯಾನ -3 ಯಶಸ್ವಿಯಾದ ಬಗ್ಗೆ, ರೋವರ್ ಮತ್ತು ಲ್ಯಾಂಡರ್ಗಳಲ್ಲಿ ಅನುಸರಿಸಲಾದ ತಂತ್ರಜ್ಞಾನಗಳು ಹಾಗೂ ಅಳವಡಿಸಿದ್ದ ವಿಶೇಷ ಉಪಕರಣಗಳ ಬಗ್ಗೆ ಹಂತ ಹಂತವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಪಿ.ಜೆ.ಭಟ್ರವರು ಇಸ್ರೋದಲ್ಲಿ ಸುದೀರ್ಘ 41 ವಷಗಳ ಕಾಲ ಸೇವೆ ಸಲ್ಲಿಸಿ ಅತ್ಯುನ್ನತ ಹುದ್ದೆಯಲ್ಲಿದ್ದು ನಿವೃತ್ತಿ ಹೊಂದಿದ್ದು, ಈಗಾಗಲೇ ಗ್ರಾಮೀಣ ಭಾಗದ ಅನೇಕ ಶಾಲಾ ಕಾಲೇಜುಗಳಲ್ಲಿ ಎರಡು ನೂರಕ್ಕೂ ಹೆಚ್ಚು ಉಪನ್ಯಾಸವನ್ನು ನೀಡಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ.ಜಿ.ಜಿ.ಹೆಗಡೆ ವಹಿಸಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಿ.ಎನ್.ಭಟ್, ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.