Slide
Slide
Slide
previous arrow
next arrow

ಸಚಿವ ಡಿ.ಸುಧಾಕರನ್ನು ಮಂತ್ರಿಮಂಡಲದಿಂದ ಕೈಬಿಡಲು ಆಗ್ರಹ

300x250 AD

ಸಿದ್ದಾಪುರ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಿದ್ದಾಪುರ ಶಾಖೆಯ ವತಿಯಿಂದ ಸಚಿವ ಡಿ.ಸುಧಾಕರ ಅವರನ್ನು ಮಂತ್ರಿಮಂಡಲದಿಂದ ಕೈಬಿಡಬೇಕೆಂದು ಆಗ್ರಹಿಸಿ ಸ್ಥಳೀಯ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಕರ್ನಾಟಕ ಸರ್ಕಾರದ ಯೋಜನೆ ಹಾಗೂ ಸಾಂಸ್ಕೃತಿಕ ಸಚಿವ ಡಿ.ಸುಧಾಕರ ಅವರು ಯಾವುದೋ ಜಮೀನು ವ್ಯವಹಾರದ ಮಾತುಕತೆಯ ಸಂದರ್ಭದಲ್ಲಿ ಅನಾವಶ್ಯಕವಾಗಿ ಬ್ರಾಹ್ಮಣರ ಬಗ್ಗೆ ಅವಹೇಳನಕಾರಿ ಪದ ಬಳಕೆ ಮಾಡಿ ದುರಹಂಕಾರದ ಮಾತುಗಳನ್ನು ಆಡಿರುವುದು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಈ ರೀತಿಯ ಅವಹೇಳನಕಾರಿ ಹೇಳಿಕೆಗಳನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಖಂಡಿಸುತ್ತದೆ. ಪ್ರತಿಜ್ಞಾವಿಧಿಯ ಸಂದರ್ಭದಲ್ಲಿ ಸಚಿವ ಸುಧಾಕರ ಅವರು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ಎತ್ತಿಹಿಡಿಯುವುದಾಗಿ, ರಾಜ್ಯದ ಮಂತ್ರಿಯಾಗಿ ನಿಷ್ಠೆಯಿಂದ ಆತ್ಮಸಾಕ್ಷಿಗನುಗುಣವಾಗಿ ಕರ್ತವ್ಯ ನಿರ್ವಹಿಸುವುದಾಗಿ ಪ್ರತಿಜ್ಞೆ ಸ್ವೀಕರಿಸಿದ್ದರು.

ಸಂವಿಧಾನ ಮತ್ತು ಕಾನೂನಿನ ಪ್ರಕಾರ ಸಮಸ್ತ ನಾಗರಿಕರನ್ನು ಸಮಾನವಾಗಿ ಕಾಣುವುದಾಗಿ, ಯಾವುದೇ ದ್ವೇಷಭಾವನೆಯಿಲ್ಲದೆ ಕಾರ್ಯನಿರ್ವಹಿಸುವುದಾಗಿ ಘೋಷಿಸಿಕೊಂಡಿದ್ದರು. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಕೆಲವು ಸಮುದಾಯದ ಮೇಲೆ ಸದರಿಯವರು ದ್ವೇಷ ಹೊಂದಿರುವುದು ಅವರ ಮಾತಿನಿಂದ ಸ್ಪಷ್ಟವಾಗುತ್ತದೆ. ಇಂತಹ ವ್ಯಕ್ತಿಗಳು ಸಚಿವ ಸಂಪುಟದಲ್ಲಿ ಮುಂದುವರಿಯಲು ಅರ್ಹರಲ್ಲ. ಡಿ.ಸುಧಾಕರ ಅವರ ಬೇಜವಾಬ್ದಾರಿ ವರ್ತನೆಯನ್ನು, ಬ್ರಾಹ್ಮಣ ಜನಾಂಗದ ಬಗ್ಗೆ ಅವಹೇಳನಕಾರಿಯಾಗಿ ನಾಲಿಗೆ ಹರಿಬಿಟ್ಟಿದ್ದನ್ನು, ಅಖಿಲ ಕರ್ನಾಟಕ ಮಹಾಸಭಾ ತೀವ್ರವಾಗಿ ಖಂಡಿಸುತ್ತದೆ. ಜಾತಿ ನಿಂದನೆ ಮಾಡಿರುವ ಸದರಿ ಸಚಿವರನ್ನು ಈ ಕೂಡಲೆ ಸಂಪುಟದಿ0ದ ಕೈಬಿಡಬೇಕೆಂದು ಆಗ್ರಹಿಸುತ್ತದೆ ಎಂದು ಮನವಿಯಲ್ಲಿ ಸ್ಪಷ್ಟಪಡಿಸಲಾಗಿದೆ.

300x250 AD

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಡಾ.ಶಶಿಭೂಷಣ ಹೆಗಡೆ ಅವರ ನೇತೃತ್ವದಲ್ಲಿ ಗಣ್ಯರು ಪದಾಧಿಕಾರಿಗಳಾದ ಆರ್.ಎಸ್.ಭಟ್ಟ ಸ್ವಸ್ತಿಕ್, ಮಹೇಶ ಭಟ್ಟ ಚಟ್ನಳ್ಳಿ, ಅನಂತ ಭಟ್ಟ ಗಾಳಿಮನೆ, ರಮೇಶ ಹೆಗಡೆ ಕೊಡ್ತಗಣಿ, ಜನಾರ್ಧನ ಹೆಗಡೆ ಹುಲಿಮನೆ, ರಾಮಮೂರ್ತಿ ಹೆಗಡೆ ಕನ್ನಳ್ಳಿ, ಅರವಿಂದ ಶರ್ಮಾ ಕಲ್ಲಾಳ, ಮಂಜುನಾಥ ಹೆಗಡೆ ನೇರ‍್ಲಮನೆ, ಗಣಪತಿ ಹೆಗಡೆ ಕೊಳಗಿ, ಚಂದನ ಶಾಸ್ತ್ರಿ ಮಗೇಗಾರು ಇತರರು ಶನಿವಾರ ಮನವಿ ಸಲ್ಲಿಸಿದ್ದಾರೆ.

Share This
300x250 AD
300x250 AD
300x250 AD
Back to top