ಮುಂಡಗೋಡ: ತಾಲೂಕಿನ ಹುನಗುಂದ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದಿಂದ ಬಹುಮಾನ ವಿತರಣೆ ನಡೆಯಿತು.
ಬಹುಮಾನ ವಿತರಣೆ ಮಾಡಿ ಮಾತನಾಡಿದ ಡಾ.ಪಿ.ಪಿ.ಛಬ್ಬಿ, ಕನ್ನಡ ಸಾಹಿತ್ಯ ಪರಿಷತ್ತು ಒಂದು ವಿಶಿಷ್ಟವಾದ ಕಾರ್ಯಕ್ರಮ ಮಾಡಿದೆ. ತುಂಬಾ ಉಪಯುಕ್ತ ಮತ್ತು ವಿದ್ಯಾರ್ಥಿಗಳು ಶಿಕ್ಷಕರು ಹೇಳಿದ ಕೆಲಸವನ್ನು ಚೆನ್ನಾಗಿ ಮಾಡಬೇಕು, ಶಿಕ್ಷಕರನ್ನು ಗೌರವದಿಂದ ಕಾಣಬೇಕು ಎಂದು ಅವರು ಹೇಳಿದರು.
ಎ.ಆರ್.ಗಾಣಿಗೇರ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಶಾಲೆಗೆ ಬಂದು ಮಕ್ಕಳಲ್ಲಿರುವ ಸಾಹಿತ್ಯ ಅಭಿರುಚಿ ಬೆಳಸುತ್ತಿರುವುದು ನಮ್ಮ ವಿದ್ಯಾರ್ಥಿಗಳ ಪುಣ್ಯ. ಅದಕ್ಕೆ ನಾನು ಪ್ರೌಢಶಾಲೆಯ ವತಿಯಿಂದ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನನಗೆ ಸಾಹಿತ್ಯ ಗೊತ್ತಿಲ್ಲ ಏಕೆಂದರೆ ನಾನು ಗಣಿತ ಓದಿದ್ದರಿಂದ ಸಾಹಿತ್ಯದ ಆದರೂ ಇದೊಂದು ಒಳ್ಳೆಯ ಕಾರ್ಯಕ್ರಮ ಎಲ್ಲ ಮಕ್ಕಳಿಗೆ ಸ್ಪೂರ್ತಿಯಾಗಿದೆ ಎಂದು ಅವರು ಹೇಳಿದರು.
ಈ ಸ್ಪರ್ಧೆಯಲ್ಲಿ ಅನ್ನಪೂರ್ಣೆಶ್ವರಿ ಗುಡ್ಡಾಪುರಮಠ ಪ್ರಥಮ, ದ್ವಿತೀಯ ಸ್ಥಾನ ಭಾಗ್ಯಲಕ್ಷ್ಮಿ ಬಿಸ್ನಳ್ಳಿ, ಖಾದರ್ ಬಿ ಅಕ್ಬರಲಿ ಜಿಗಳೂರ್ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳಾದ ಪೂಜಾ ವೀರೇಶ್ ದೋಣಿ, ನೀಲಮ್ಮ ತೀರ್ಥ್ ಸಮಾಧಾನಕರ ಬಹುಮಾನ ಪಡೆದಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನ ವಸಂತ ಎಸ್.ಕೋಣಸಾಲಿ ವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷ ಸಹದೇವಪ್ಪ ನಡಿಗೇರಿ ಜಾನಪದ ಗೀತೆಯನ್ನು ಹಾಡಿದರು. ಕಾರ್ಯಕ್ರಮದಲ್ಲಿ ಆರ್.ಜೆ.ಬೆಳ್ಳೆನವರ್ ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಯುವರಾಜ್ ಎನ್.ಲಕ್ಕಿಕೊಪ್ಪ ನಡೆಸಿಕೊಟ್ಟರು. ನಾಗರಾಜ್ ಅರ್ಕಸಾಲಿ ವಂದನಾರ್ಪಣೆ ಮಾಡಿದರು.