• Slide
  Slide
  Slide
  previous arrow
  next arrow
 • ಶ್ರೀನಿಕೇತನ ಶಾಲೆಯಲ್ಲಿ ಹಿಂದಿ ದಿನ, ಅಭಿಯಂತರರ ದಿನಾಚರಣೆ

  300x250 AD

  ಶಿರಸಿ; ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಶ್ರೀನಿಕೇತನ ಶಾಲೆಯಲ್ಲಿ ಸೆ.15, ಶುಕ್ರವಾರದಂದು ಹಿಂದಿ ದಿವಸ ಹಾಗೂ ಅಭಿಯಂತರರ ದಿನವನ್ನು ಆಚರಿಸಲಾಯಿತು.

  ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಎಂಜಿನಿಯರ್ ನಾರಾಯಣ ಭಟ್’ರನ್ನು ಸನ್ಮಾನಿಸಲಾಯಿತು. ಶಾಲೆಯ ಉಪಪ್ರಾಂಶುಪಾಲರಾದ ಶ್ರೀಮತಿ ವಸುಧಾ ಹೆಗಡೆ ಮಾತನಾಡಿ, ಮಕ್ಕಳಿಗೆ ಹಿಂದಿ ಭಾಷೆಯ ಮಹತ್ವ ಹಾಗೂ ವಿಶ್ವಪ್ರಸಿದ್ಧ ಎಂಜಿನಿಯರ್ ಸರ್ ಎಮ್. ವಿಶ್ವೇಶ್ವರಯ್ಯರವರ ಸಾಧನೆಗಳ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಕಿ ಶ್ರೀಮತಿ ತೇಜಸ್ವಿನಿ ಗೌಡ ಪ್ರಾಸ್ತಾವಿಕ ನುಡಿಯನ್ನು ನುಡಿದರು. ಕಾರ್ಯಕ್ರಮವನ್ನು ಶಿಕ್ಷಕ ವಿವೇಕ್ ಶೇಟ್‌ ಮಾರ್ಗದರ್ಶನದಲ್ಲಿ ಕುಮಾರ್ ವೃಷಭ್ ಹಾಗೂ ಶ್ರೇಯಸ್ ನಿರೂಪಿಸಿದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top