• Slide
    Slide
    Slide
    previous arrow
    next arrow
  • ಕಾಂಗ್ರೆಸ್ ಸರಕಾರದ ರೈತವಿರೋಧಿ ನಡೆ ಖಂಡಿಸಿ ಬಿಜೆಪಿ ಪ್ರತಿಭಟನೆ

    300x250 AD

    ಅಂಕೋಲಾ: ಕಾಂಗ್ರೆಸ್ ಸರಕಾರದ ರೈತವಿರೋಧಿ ನಡೆಯನ್ನು ಖಂಡಿಸಿ ಬಿಜೆಪಿ ಕಾರವಾರ- ಅಂಕೋಲಾ ಕ್ಷೇತ್ರದ ರೈತಮೋರ್ಚಾ ಮತ್ತು ಮಂಡಳದ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ ನಾಗರಾಜ ನಾಯಕ, ಹಿಂದಿನ ಬಿಜೆಪಿ ಸರಕಾರ ಜಾರಿಗೆ ತಂದ ಅನೇಕ ಜನಪರ ಯೋಜನೆಗಳನ್ನು ಕಾಂಗ್ರೆಸ್ ಸರಕಾರ ರದ್ದುಪಡಿಸಿ ದಿನೇ ದಿನೇ ರೈತ ವಿರೋಧಿಯಾಗುತ್ತಿದ್ದು, ಕಿಸಾನ್ ಸಮ್ಮಾನ ಯೋಜನೆಯಲ್ಲಿ ರೈತರಿಗೆ ಕೇಂದ್ರ ಸರಕಾರ 6 ಸಾವಿರ, ರಾಜ್ಯ ಸರಕಾರ 4 ಸಾವಿರ ಒಟ್ಟು 10 ಸಾವಿರ ನೀಡಲಾಗುತ್ತಿತ್ತು. ಈಗ ಕಾಂಗ್ರೇಸ್ ಸರಕಾರ ರಾಜ್ಯ ಸರಕಾರದಿಂದ ನೀಡುವ 4ಸಾವಿರ ಖಡಿತಗೊಳಿಸಿದೆ. ರೈತವಿದ್ಯಾನಿಧಿ ಹಾಗೂ ಇನ್ನಿತರ ಅನೇಕ ಯೋಜನೆಗಳನ್ನು ರದ್ದುಪಡಿಸಿ ರೈತವಿರೋಧಿ ಜನವಿರೋಧಿಯಾಗಿ ಆಡಳಿತ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಈ ಹೋರಾಟವನ್ನು ರಾಜದಾದ್ಯಂತ ಕೈಗೊಂಡು ಕಾಂಗ್ರೆಸ್ ಸರಕಾರವನ್ನು ತೊಲಗಿಸುವ ನಿಟ್ಟಿನಲ್ಲಿ ಹೋರಾಟಕ್ಕೆ ಕರೆ ನೀಡಲಾಗಿದೆ ಎಂದರು.

    ಭಾಜಪ ಮಂಡಳಾಧ್ಯಕ್ಷ ಸಂಜಯ ಎಂ.ನಾಯ್ಕ ಮಾತನಾಡಿ, ಕಾಂಗ್ರೆಸ್ ಸರಕಾರ ಜಾರಿಯಾದ ದಿನದಿಂದ ಜನರಿಗೆ ವಿವಿಧ ರೀತಿಯಲ್ಲಿ ತೊಂದರೆ ಉಂಟಾಗಿದೆ. ಮುಖ್ಯವಾಗಿ ರೈತವಿರೋಧಿಯಾಗಿದೆ ಎಂದರು. ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಕಾರ್ಯಕಾರಣಿ ಸದಸ್ಯ ರಾಜೇಂದ್ರ ವಿ. ನಾಯ್ಕ ಮಾತನಾಡಿ, ಕಾಂಗ್ರೆಸ್ ಆಡಳಿತಕ್ಕೆ ಬಂದ ಕೇವಲ 3 ತಿಂಗಳಲ್ಲಿ ಕಿಸಾನ್ ಸಮ್ಮಾನ್, ಎ.ಪಿ.ಎಂ.ಸಿ ಕಾಯ್ದೆ, ರೈತವಿದ್ಯಾನಿಧಿ ಸೇರಿದಂತೆ ಬಿಜೆಪಿ ಸರಕಾರ ಜನಪರವಾಗಿ ತಂದ ಹಲವು ಯೋಜನೆಗಳನ್ನು ಕೈಬಿಟ್ಟಿದೆ. ಇಂತಹ ಸರಕಾರವನ್ನು ತೊಲಗಿಸಿಬೇಕಾಗಿದೆ ಎಂದು ಹೇಳಿದರು.

    300x250 AD

    ಪ್ರತಿಭಟನಾಕಾರರು ತಹಶೀಲ್ದಾರ ಕಛೇರಿಯ ಎದುರು ಪ್ರತಿಭಟನಾ ಸಭೆ ನಡೆಸಿ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಉಪತಹಶೀಲ್ದಾರ ಗಿರೀಶ ಜಾಂಬಾವಳಿಕರ ಅವರಿಗೆ ಮನವಿ ಅರ್ಪಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಪ್ರಮುಖರಾದ ಭಾಸ್ಕರ ಕೆ.ನಾರ್ವೇಕರ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಪ್ರಶಾಂತ ಜಿ.ನಾಯಕ, ರಾಜ್ಯ ಮೀನುಗಾರರ ಪ್ರಕೋಸ್ಟ ಸಂಚಾಲಕ ಹೂವಾ ಖಂಡೇಕರ, ಕಾರವಾರ ನಗರ ಘಟಕದ ಅಧ್ಯಕ್ಷ ನಾಗೇಶ ಕುರ್ಡೇಕರ, ಕಾರವಾರ ಗ್ರಾಮಾಂತರ ಘಟಕದ ಅಧ್ಯಕ್ಷ ಸುಭಾಷ ಗುನಗಿ ಮುಂತಾದವರು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top