• Slide
    Slide
    Slide
    previous arrow
    next arrow
  • ಕಾನೂನುಗಳು ಇರುವುದು ಹಬ್ಬಗಳಿಗೆ ಅಡ್ಡಿ ಮಾಡುವುದಕ್ಕಲ್ಲ: ಎಸ್ಪಿ ವಿಷ್ಣುವರ್ಧನ್

    300x250 AD

    ಭಟ್ಕಳ: ನಮ್ಮ ಇಲಾಖೆಯ ಕಾನೂನುಗಳು ಹಬ್ಬ- ಹರಿದಿನಗಳಿಗೆ ಅಡೆ- ತಡೆ ಉಂಟುಮಾಡುವುದಲ್ಲ. ಬದಲಿಗೆ ಅದು ನಿಮ್ಮದೇ ಒಳಿತಿಗೆ ಎಂದು ಭಾವಿಸಿ ಸಂಭ್ರಮದಿoದ ಶಾಂತಿ- ಸುವ್ಯವಸ್ಥೆಯಿಂದ ಆಚರಿಸಿ ಇಲಾಖೆಗೂ ಸಹಕರಿಸಿ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಕಿವಿಮಾತು ಹೇಳಿದರು.

    ಇಲ್ಲಿನ ಅರ್ಬನ್ ಬ್ಯಾಂಕ್ ಸಭಾಭವನದಲ್ಲಿ ಗೌರಿ ಗಣೇಶ ಹಬ್ಬದ ನಿಮಿತ್ತ ಪೊಲೀಸ್ ಇಲಾಖೆಯಿಂದ ಆಯೋಜಿಸಲಾದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾರ್ವಜನಿಕ ಗಣೇಶೋತ್ಸವ ಕಮಿಟಿಗಳಿರುವ ಜಾಗದಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಲೇಬೇಕು. ಅಗತ್ಯ ಬಿದ್ದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಇಲಾಖೆ ಸಹಕರಿಸಲಿದೆ. ಗಣೇಶ ಕೂರಿಸುವ ಜಾಗದಲ್ಲಿ ಬೆಂಕಿ ನಂದಿಸುವ ಸಿಲಿಂಡರ್‌ಗಳನ್ನು ಇಟ್ಟುಕೊಳ್ಳಬೇಕು. ಆಯೋಜಕರು ಅಥವಾ ಅವರ ಪರವಾಗಿ ಓರ್ವರನ್ನು ಗಣೇಶೋತ್ಸವದ ಜಾಗದಲ್ಲಿ ನೇಮಿಸಲೇಬೇಕು. ವಿಸರ್ಜನಾ ಮೆರವಣಿಗೆಯಲ್ಲಿಯೂ ಸಹ ಅಹಿತಕರ ಘಟನೆ ನಡೆಯದಂತೆ ಆಯೋಜಕರು ಗಮನ ಹರಿಸಬೇಕು ಎಂದರು.

    ಡಿವೈಎಸ್ಪಿ ಕೆ.ಶ್ರೀಕಾಂತ ಮಾತನಾಡಿ, ಸಾರ್ವಜನಿಕ ಗಣೇಶೋತ್ಸವಗಳ ಬಗ್ಗೆ ಪೊಲೀಸ್ ಇಲಾಖೆಗೆ ಮಂಡಳಿಯವರು ಮಾಹಿತಿ ನೀಡಬೇಕು. ಮೈಕ್ ಅಳವಡಿಕೆ ಸೇರಿದಂತೆ ಮಂಡಳಿಯಿ0ದ ನಡೆಸಲಾಗುವ ವಿವಿಧ ಕಾರ್ಯಕ್ರಮಗಳ ಪಟ್ಟಿಯನ್ನು ನೀಡಿದ್ದಲ್ಲಿ ಪರವಾನಗಿ ಹಾಗೂ ಬಂದೋಬಸ್ತ್ತ್ಗೆ ಅಗತ್ಯ ಕ್ರಮ ತೆಗೆದುಕೊಳ್ಳಲು ಸಾಧ್ಯ. ಎಲ್ಲಿಯೂ ಡಿಜೆ ಅಳವಡಿಕೆಗೆ ಅನುಮತಿಯಿಲ್ಲ. ಗಣೇಶ ಕೂರಿಸುವ ಜಾಗದಲ್ಲಿ ಅಥವಾ ಬೇರೆ ಕಡೆಗಳಲ್ಲಿ ಅಳವಡಿಸುವ ಪ್ಲೆಕ್ಸ್ ಮತ್ತು ಬ್ಯಾನರ್‌ಗಳಿಗೆ ಪುರಸಭೆ ಅಥವಾ ಪಟ್ಟಣ ಪಂಚಾಯತಗಳ ಪರವಾನಗಿ ತೆಗೆದುಕೊಳ್ಳುವುದು ಅಗತ್ಯ ಎಂದು ತಿಳಿಸಿದರು.

    300x250 AD

    ತಹಸೀಲ್ದಾರ ತಿಪ್ಪೇಸ್ವಾಮಿ, ಹಬ್ಬಗಳ ಆಚರಣೆಯಿಂದ ಯಾವುದೇ ಕಿರಿಕಿರಿಯಾಗದೇ ಸಂತೋಷದಿ0ದ ಮಾಡಬೇಕು. ಸರಕಾರದ ಸುತ್ತೋಲೆಯಂತೆ ಪಿಓಪಿ ಗಣಪತಿಯ ಬಳಕೆ ಹಾಗೂ ಅತೀಯಾಗಿ ಬಣ್ಣ ಬಳಿದ ಗಣೇಶ ಮೂರ್ತಿಯನ್ನು ಮಾರುವುದು, ಖರೀದಿಸುವುದು ನಿಷೇಧ ಎಂಬ ಕಾನೂನನ್ನು ಸಾರ್ವಜನಿಕರು ಪಾಲಿಸಬೇಕು. ಗಣೇಶ ಕೂರಿಸುವ ಸ್ಥಳದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದಲ್ಲಿ ನಮ್ಮ ಪರಿಸರಕ್ಕೆ ಉತ್ತಮ ಎಂದು ಹೇಳಿದರು.

    ಗಣೇಶೋತ್ಸವ ಮಂಡಳಿಯ ಶಂಕರ ಶೆಟ್ಟಿ, ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿದ್ದ ಇಲಾಖೆಗಳ ಸಿಸಿಟಿವಿ ಕ್ಯಾಮೆರಾಗಳೇ ಹಾಳಾಗಿವೆ. ಗಣೇಶೋತ್ಸವ ಮಂಡಳಿಯವರಿಗೆ ತಾತ್ಕಾಲಿಕವಾಗಿ ಗಣೇಶ ಕೂರಿಸುವ ಜಾಗದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಅಸಾಧ್ಯ ಎಂದರು. ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಕೃಷ್ಣ ನಾಯ್ಕ, ಗಣೇಶೋತ್ಸವದ ಪರವಾನಗಿಗಳಿಗಾಗಿ ಸಿಂಗಲ್ ವಿಂಡೋ ಪರ್ಮಿಶನ್ ವ್ಯವಸ್ಥೆ ಕಲ್ಪಿಸಲು ಸಲಹೆ ನೀಡಿದರು. ಮುಸ್ಲಿಂ ಸಮುದಾಯದ ಮುಖಂಡರಾದ ಮುನೀರಿ ಹಾಗೂ ಇನಾಯತ್ ಉಲ್ಲಾ ಶಾಬಂದ್ರಿ ಹಬ್ಬದ ಶುಭಾಶಯ ಕೋರಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top