Slide
Slide
Slide
previous arrow
next arrow

ಕ್ರೀಡಾಕೂಟ: ಲಯನ್ ಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ

300x250 AD

ಶಿರಸಿ:  JMJ, ಚಿಪಗಿ ಶಾಲೆಯ ಆಶ್ರಯದಲ್ಲಿ ಶ್ರೀ ಮಾರಿಕಾಂಬಾ ಕ್ರೀಡಾಂಗಣದಲ್ಲಿ ಸೆ.11,ಸೋಮವಾರದಂದು ನಡೆದ ಪ್ರಾಥಮಿಕ ಶಾಲಾ ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಇಲ್ಲಿನ ಲಯನ್ಸ್ ಆಂಗ್ಲ ಮಾಧ್ಯಮ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು  ಭಾಗವಹಿಸಿ ಸಾಧನೆ ಗೈದಿದ್ದಾರೆ.

ಯೋಗಾಸನದಲ್ಲಿ ಸಿಂಚನಾ ಹೆಗಡೆ  ಮತ್ತು ಅರ್ಪಿತಾ ಹೆಗಡೆ ಪ್ರಥಮ , ಚೆಸ್ ನಲ್ಲಿ ಅಭಯ ಹೆಗಡೆ ಮತ್ತು ಅನ್ವಿತಾ ಹೆಗಡೆ ಪ್ರಥಮ ಸ್ಥಾನ , ಹಿತೇಶ್ ಸುತಾರ್ ಬಾಲಕರ ಉದ್ದ ಜಿಗಿತ ಪ್ರಥಮ ಬಾಲಕರು ಎತ್ತರ ಜಿಗಿತ ದ್ವಿತೀಯ ಸ್ಥಾನ, ಶ್ರೀರಾಮ ನಾಗರಕಟ್ಟೆ ಬಾಲಕರ ಎರಡು ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿದರೆ, ಬಾಲಕರ ವಿಭಾಗದಲ್ಲಿ ವಾಲಿಬಾಲ್ ತಂಡ  ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಒಳಾಂಗಣ ಕ್ರೀಡೆಗಳಲ್ಲಿ ಟೇಬಲ್ ಟೆನ್ನಿಸ್ ಬಾಲಕ  ಮತ್ತು ಬಾಲಕಿಯರು ಪ್ರಥಮ ಸ್ಥಾನ, ಷಟಲ್ ಬ್ಯಾಡ್ಮಿಂಟನ್ ನಲ್ಲಿ ಬಾಲಕಿಯರು ಪ್ರಥಮ ಸ್ಥಾನ
ಬಾಲಕರು  ದ್ವಿತೀಯ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

300x250 AD

ಮುಂದಿನ ಹಂತಕ್ಕೆ ಆಯ್ಕೆ ಆದ ವಿಜೇತರಿಗೆ ಶುಭ ಹಾರೈಕೆಗಳನ್ನು ಮತ್ತು ವಿಜೇತ ವಿದ್ಯಾರ್ಥಿಗಳ ಬೆಂಬಲವಾಗಿ  ನಿಂತ ಪೋಷಕರಿಗೆ, ಮಾರ್ಗದರ್ಶನಕ್ಕಾಗಿ ದೈಹಿಕ ಶಿಕ್ಷಕರಾದ ಶ್ರೀಮತಿ ಚೇತನಾ ಪಾವಸ್ಕರ್  ಮತ್ತು ಉಳಿದ ಎಲ್ಲಾ ಮಾರ್ಗದರ್ಶಕರಿಗೆ ಲಯನ್ಸ್ ಶಿಕ್ಷಣ ಸಂಸ್ಥೆ, ಪ್ರಾಂಶುಪಾಲರು ಮತ್ತು ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು,ಶಿರಸಿ ಲಯನ್ಸ ಕ್ಲಬ್ ಬಳಗ, ಶಿರಸಿ ಲಯನ್ಸ ಶಿಕ್ಷಣ ಸಂಸ್ಥೆ ಪದಾಧಿಕಾರಿಗಳು, ಅಭಿನಂದಿಸಿದ್ದಾರೆ.

Share This
300x250 AD
300x250 AD
300x250 AD
Back to top