Slide
Slide
Slide
previous arrow
next arrow

ಅವಹೇಳನಕಾರಿ ಹೇಳಿಕೆ ನೀಡಿದ್ದವರ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

300x250 AD

ಹೊನ್ನಾವರ: ಸನಾತನ ಧರ್ಮ ನಿರ್ಮೂಲನೆ ಮಾಡಬೇಕೆಂದು ವಿವಾದಾತ್ಮಕ ಹೇಳಿಕೆ ಕೊಟ್ಟಿರುವ ತಮಿಳುನಾಡಿನ ಯುವಜನ ಮತ್ತು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಹಾಗೂ ಅದಕ್ಕೆ ಬೆಂಬಲಿಸಿ ಅವಹೇಳನಕಾರಿಯಾಗಿ ಮಾತನಾಡಿದ ಎ.ರಾಜಾ ಅವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಮಂಡಲದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಸೀಲ್ದಾರರ ಮೂಲಕ ರಾಜ್ಯ ಪಾಲರಿಗೆ ಮನವಿ ಸಲ್ಲಿಸಿದರು.

ಪಟ್ಟಣದ ಶರಾವತಿ ವೃತ್ತದಲ್ಲಿ ಉದಯನಿಧಿ ಸ್ಟಾಲಿನ್ ಅವರ ಪ್ರತಿಕೃತಿ ಬೆಂಕಿ ಹಚ್ಚಿ ದಿಕ್ಕಾರದ ಮೂಲಕ ಆಕ್ರೋಶ ವ್ಯಕ್ತಪಡಸಿದರು. ನಂತರ ತಹಸೀಲ್ದಾರರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಬಿಜೆಪಿ ಹೊನ್ನಾವರ ಮಂಡಲದ ಅಧ್ಯಕ್ಷ ರಾಜೇಶ ಭಂಡಾರಿ ಮಾತನಾಡಿ, ನಮ್ಮ ದೇಶದಲ್ಲಿ ತಮಿಳುನಾಡು ಎರಡನೆ ಅತಿ ಹೆಚ್ಚು ಜಿಡಿಪಿ ಹೊಂದಿರುವ ರಾಜ್ಯ. 70ಸಾವಿರಕ್ಕೂ ಹೆಚ್ಚು ದೇವಸ್ಥಾನಗಳಿವೆ. 40 ಸಾವಿರಕ್ಕೂ ಹೆಚ್ಚು ದೇವಸ್ಥಾಗಳು ಮುಜರಾಯಿ ಇಲಾಖೆಯಡಿ ನೋಂದಣಿಯಾಗಿವೆ. ದೇವಸ್ಥಾನದಿಂದ ಬರುವ ಆದಾಯವನ್ನು ಬಳಸಿಕೊಂಡು ನಮ್ಮ ಸನಾತನ ಧರ್ಮವನ್ನು ಅಲ್ಲಿ ಆಡಳಿತ ನಡೆಸುವ ಸಚೀವರು ಟಿಕೀಸುತ್ತಾರೆ. ಉದಯನಿಧಿ ಸ್ಟಾಲಿನ್ ಹಾಗೂ ಎ ರಾಜಾ ಸನಾತನ ಧರ್ಮದ ಬಗ್ಗೆ ಅತ್ಯಂತ ಕೆಟ್ಟದಾಗಿ ಮಾತನಾಡಿದ್ದಾರೆ. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಸುಪ್ರೀಂ ಕೋರ್ಟ್ ಸುಮೋಟೋ ಮೊಕದ್ದಮೆ ದಾಖಲಿಸಬೇಕು. ಹಿಂದು ಧರ್ಮ, ಸನಾತನ ಧರ್ಮದ ವಿರುದ್ದ ಮಾತನಾಡುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

300x250 AD

ಬಿಜೆಪಿ ಹೊನ್ನಾವರ ಮಂಡಲದ ಕಾರ್ಯದರ್ಶಿ ಮಂಜುನಾಥ ನಾಯ್ಕ, ಒಬಿಸಿ ಜಿಲ್ಲಾ ಉಪಾಧ್ಯಕ್ಷ ಗಣಪತಿ ನಾಯ್ಕ ಬಿ.ಟಿ., ಪ.ಪಂ. ಅಧ್ಯಕ್ಷೆ ಭಾಗ್ಯಾ ಮೇಸ್ತ, ಪ.ಪಂ. ಮಾಜಿ ಅಧ್ಯಕ್ಷ ಶಿವರಾಜ ಮೇಸ್ತ,ಪ.ಪಂ. ಸದಸ್ಯರಾದ ವಿಜು ಕಾಮತ, ಸುಭಾಷ ಹರಿಜನ, ತಾರಾ ಕುಮಾರಸ್ವಾಮಿ, ಸುಜಾತ ಮೇಸ್ತ ಮುಖಂಡರಾದ ಗಣೇಶ ಪೈ, ಎಂ.ಎಸ್.ಹೆಗಡೆ ಕಣ್ಣಿಮನೆ, ನಾರಾಯಣ ಹೆಗಡೆ ಆರೊಳ್ಳಿ, ರಾಜೇಶ ಸಾಳೇಹಿತ್ತಲ, ಹರಿಶ್ಚಂದ್ರ ನಾಯ್ಕ, ರವಿ ನಾಯ್ಕ ರಾಯಲಕೇರಿ ಮತ್ತಿತರರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top