ಭಟ್ಕಳ: ಇತ್ತೀಚೆಗೆ ಐಎಯುಎಎಚ್‌ಎಸ್ ಹಾಗೂ ದಿ ನ್ಯೂ ಇಂಗ್ಲೀಷ್ ಸ್ಕೂಲ್‌ನ ಆಟದ ಮೈದಾನದಲ್ಲಿ ನಡೆದ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಸೋನಾರಕೇರಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.
ಶಾಲೆಯ ಬಾಲಕಿಯರ ಹಾಗೂ ಬಾಲಕರ ಖೋ- ಖೋ ಪಂದ್ಯಾವಳಿಯಲ್ಲಿ ಪ್ರಥಮ, ಯೋಗದಲ್ಲಿ ವೀರಾಗ್ರಣಿ ಪಡೆದು ವಿಜೇತರಾಗಿ ಮುಂದಿನ ಹಂತಕ್ಕೆ ಆಯ್ಕಯಾಗಿದ್ದಾರೆ. ನಡಿಗೆಯಲ್ಲಿ ಬಾಲಕಿಯರು ಪ್ರಥಮ, ದ್ವೀತಿಯ, ಬಾಲಕರು ದ್ವಿತೀಯ ಹಾಗೂ ತೃತೀಯ ಸ್ಥಾನ, 100 ಮೀ. ಓಟದಲ್ಲಿ ಬಾಲಕಿಯರು ಪ್ರಥಮ, ಬಾಲಕರು ದ್ವಿತೀಯ, 200 ಮೀ. ಓಟದಲ್ಲಿ ಬಾಲಕಿಯರು ಪ್ರಥಮ, ಬಾಲಕರು ದ್ವೀತಿಯ, 400 ಮೀ. ಓಟದಲ್ಲಿ ಬಾಲಕಿಯರು ತೃತೀಯ, 800 ಮೀ. ಓಟದಲ್ಲಿ ಬಾಲಕಿಯರು ದ್ವಿತೀಯ, 1800 ಮೀ. ಓಟದಲ್ಲಿ ಬಾಲಕಿಯರು ತೃತೀಯ, 3000 ಮೀ. ಓಟದಲ್ಲಿ ಬಾಲಕರು ಹಾಗೂ ಬಾಲಕಿಯರು ದ್ವಿತೀಯ, ರೀಲೆಯಲ್ಲಿ ಬಾಲಕಿಯರು ದ್ವೀತಿಯ, ಗುಂಡು ಎಸೆತದಲ್ಲಿ ಬಾಲಕಿಯರು ತೃತೀಯ, ಜ್ಯಾವಲಿನ್ ಥ್ರೋದಲ್ಲಿ ಬಾಲಕಿಯರು ತೃತೀಯ, ಉದ್ದಜಿಗಿತದಲ್ಲಿ ಬಾಲಕಿಯರು ತೃತೀಯ, ಹರ್ಡಲ್ಸ್ನಲ್ಲಿ ಬಾಲಕಿಯರು ಪ್ರಥಮ ಹಾಗೂ ದ್ವಿತೀಯ, ಬಾಲಕರುಪ್ರಥಮ, ಎತ್ತರ ಜಿಗಿತದಲ್ಲಿ ಬಾಲಕಿಯರು ದ್ವಿತೀಯ ಹಾಗೂ ತೃತೀಯ, ಚದುರಂಗ ಆಟದಲ್ಲಿ ಬಾಲಕಿ ಪ್ರಥಮ, ಬಾಲಕ 4ನೇ ಸ್ಥಾನ, ಕಬಡ್ಡಿ ಬಾಲಕಿಯರು ದ್ವಿತೀಯ, ವಾಲಿಬಾಲ್ ಬಾಲಕಿಯರು ದ್ವಿತೀಯ, ಥ್ರೋಬಾಲ್‌ನಲ್ಲಿ ಬಾಲಕಿಯರು ದ್ವಿತೀಯ ಸ್ಥಾನ ಪಡೆದಿದ್ದಾರೆ. ಕರಾಟೆಯಲ್ಲಿ ತಾಲೂಕಾ ಹಾಗೂ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ವಿಜೇತಳಾಗಿ ಸವಿತಾ ಆರ್.ಮರಾಠಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ. ವಿಜೇತರಾದ ಎಲ್ಲಾ ಸ್ಪರ್ಧಾಳುಗಳಿಗೆ, ತರಬೇತಿ ನೀಡಿದ ಶಾಲೆಯ ಹಳೆಯ ವಿದ್ಯಾರ್ಥಿಗಳಿಗೆ, ಆರ್‌ಎನ್‌ಎಸ್ ಪಾಲಿಟೆಕ್ನಿಕ್ ಮುರ್ಡೇಶ್ವರದ ಉಪಪ್ರಾಚಾರ್ಯರಿಗೆ ಶಾಲೆಯ ಶಿಕ್ಷಕ- ಸಿಬ್ಬಂದಿ ವರ್ಗದವರಿಗೆ ಶಾಲಾ ಮುಖ್ಯಾಧ್ಯಾಪಕಿ ಡಾ.ಯಲ್ಲಮ್ಮ ಹಾಗೂ ಎಸ್‌ಡಿಎಮ್‌ಸಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.