• Slide
    Slide
    Slide
    previous arrow
    next arrow
  • ಕೃಷ್ಣರಾಧೆ ವೇಷದಲ್ಲಿ ಗಮನಸೆಳೆದ ಚಂದನ ಬಾಲವಾಡಿ ಮಕ್ಕಳು

    300x250 AD

    ಶಿರಸಿ: ಬಾಲಕೃಷ್ಣ, ನವನೀತಪ್ರೀಯ, ಮುರುಳಿಧರ ಹೀಗೆ ಶ್ರೀಕೃಷ್ಣನ ವಿವಿಧ ರೂಪಗಳಲ್ಲಿ ಹಾಗೂ ರಾಧೆಯ ವೇಷದಾರಿಗಳಾಗಿ ಪುಟ್ಟಪುಟ್ಟ ಹೆಜ್ಜೆ ಇಡುತ್ತಾ ಪುಟಾಣಿಯರು ಕಂಗೊಳಿಸಿದ್ದು, ಸೇರಿದ್ದವರೆಲ್ಲ ಮಕ್ಕಳ ಛದ್ಮವೇಷ ನೋಡಿ ಖುಷಿಪಟ್ಟರು.
    ನಗರದ ಗಣೇಶ ನೇತ್ರಾಲಯದ ಸಭಾಂಗಣದಲ್ಲಿ ಬುಧವಾರ ಕೃಷ್ಣಾಷ್ಟಮಿ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಮಿಯಾಡ್ಸ್ ಸಂಸ್ಥೆ ನಡೆಸುತ್ತಿರುವ ಶಾಂತಿನಗರದ ಚಂದನ ಬಾಲವಾಡಿ ಮಕ್ಕಳು ಇಂತಹ ವಿಶೇಷತೆಗಳಿಂದ ಆಕರ್ಷಿಸಿದರು. ಪುಟಾಣಿ ಮಕ್ಕಳು ಕೃಷ್ಣರಾಧೆಯರ ವೇಷದ ಜತೆಯಲ್ಲಿ ಕೃಷ್ಣ ಲೀಲೆಗಳನ್ನು ಬಣ್ಣಿಸುವ ನೃತ್ಯವನ್ನೂ ಪ್ರದರ್ಶಿಸಿ ಗಮನಸೆಳೆದರು. ಎರಡು ತಾಸಿಗೂ ಹೆಚ್ಚು ಕಾಲ ನಡೆದ ಮಕ್ಕಳ ಇಂತಹ ಕಲರವ ಹೊಸ ವಾತಾವರಣ ಸೃಷ್ಟಿಸಿತ್ತು.

    ಕಾರ್ಯಕ್ರಮವನ್ನು ಹುಲೇಕಲ್ ವಲಯ ಅರಣ್ಯಾಧಿಕಾರಿ ಉಷಾ ಕಬ್ಬೇರ್ ಉದ್ಘಾಟಿಸಿದರು. ಅತಿಥಿಯಾಗಿ ಎಂ.ಎಸ್.ಹೆಗಡೆ, ಮಲೆನಾಡು ಶಿಕ್ಷಣ ಮತ್ತು ಗ್ರಾಮಿಣಾಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ಎಲ್.ಎಂ.ಹೆಗಡೆ, ಆಡಳಿತಾಧಿಕಾರಿ ವಿದ್ಯಾ ನಾಯ್ಕ, ಚಂದನ ಬಾಲವಾಡಿ ಅಧ್ಯಕ್ಷೆ ಮಾಧುರಿ ಶಿವರಾಮ್, ಸದಸ್ಯೆ ಉಮಾ ಎಲ್.ಹೆಗಡೆ ಮುಂತಾದವರು ಉಪಸ್ಥಿತರಿದ್ದರು.
    ಚಂದನ ಬಾಲವಾಡಿ ಮುಖ್ಯ ಶಿಕ್ಷಕಿ ಮಮತಾ ಆರ್.ಭಟ್ಟ, ಶಿಕ್ಷಕಿಯರಾದ ರಾಜೇಶ್ವರಿ ಹೆಗಡೆ, ಆಶಾ ಕೆರೆಗದ್ದೆ, ಗೀತಾ ಹೆಗಡೆ, ಉಮಾ ಹೆಗಡೆ ಮುಂತಾದವರು ವಿವಿಧ ಜವಾಬ್ದಾರಿ ನಿರ್ವಹಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top