• Slide
    Slide
    Slide
    previous arrow
    next arrow
  • ಶಾಂತಿಯುತ ಗಣೇಶೋತ್ಸವ ಆಚರಣೆಗೆ ಸೂಚನೆ

    300x250 AD

    ದಾಂಡೇಲಿ: ಹಿಂದೂ ಧರ್ಮಿಯರ ಅತ್ಯಂತ ಪರಮ ಪವಿತ್ರ ಹಬ್ಬಗಳಲ್ಲಿ ಒಂದಾಗಿರುವ ಗಣೇಶೋತ್ಸವ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕೆಂದು ನಗರ ಠಾಣೆಯ ಪಿಎಸ್‌ಐ ಐ.ಆರ್.ಗಡ್ಡೇಕರ್ ಕರೆ ನೀಡಿದರು.
    ಅವರು ಸ್ಥಳೀಯ ಗಾಂಧಿನಗರದ ಶ್ರೀವಿಘ್ನೇಶ್ವರ ಮಾರುತಿ ಮಂದಿರದ ಸಭಾಭವನದಲ್ಲಿ ನಡೆದ ಗಾಂಧಿನಗರದ ವಿವಿಧ ಸಾರ್ವಜನಿಕ ಗಣಪತಿ ಮಂಡಳಗಳ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

    ಸರಕಾರದ ನಿಯಾಮವಳಿಯನ್ನು ಎಲ್ಲಾ ಗಣೇಶ ಮಂಡಳಿಗಳು ಚಾಚು ತಪ್ಪದೇ ಪಾಲಿಸಬೇಕು. ಯಾವುದೇ ರೀತಿಯ ಅಹಿತರಕರ ಘಟನೆಗಳಿಗೆ ಅವಕಾಶ ನೀಡಬಾರದು. ಸಾರ್ವಜನಿಕ ಗಣೇಶೋತ್ಸವದ ಸಂದರ್ಭದಲ್ಲಿ ಶಾಂತಿ ಕದಡುವವರ ಬಗ್ಗೆ ಇಲಾಖೆಗೆ ತಕ್ಷಣವೆ ಮಾಹಿತಿ ನೀಡಬೇಕು. ಸಾರ್ವಜನಿಕ ಗಣೇಶೋತ್ಸವ ಕಾರ‍್ಯಕ್ರಮವನ್ನು ಸಂಭ್ರಮ, ಸಡಗರ ಹಾಗೂ ಶ್ರದ್ಧಾಭಕ್ತಿಯ ಜೊತೆಗೆ ಪರಸ್ಪರ ಶಾಂತಿ ಸೌಹಾರ್ದತೆಯೊಂದಿಗೆ ಆಚರಿಸಬೇಕು. ಸಮಸ್ಯೆಗಳಾದ ಸಂದರ್ಭದಲ್ಲಿ ಇಲಾಖೆಯ ಗಮನಕ್ಕೆ ತರಬೇಕೆಂದು ಐ.ಆರ್.ಗಡ್ಡೇಕರ್ ಅವರು ಹೇಳಿದರು.

    300x250 AD

    ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಬುದ್ಧಿವಂತಗೌಡ ಪಾಟೀಲ್, ಮುಖಂಡರಾದ ಮಂಜುನಾಥ್ ಪಾಟೀಲ್, ತುಕಾರಾಮ ಪರಸೋಜಿ, ಅಬ್ಬಾಸಾಲಿ, ಪೊಲೀಸ್ ಸಿಬ್ಬಂದಿಗಳಾದ ಮಂಗಲದಾಸ್ ನಾಯ್ಕ, ಮುರಳೀಧರ್.ಕೆ, ಎಂ.ಕೆ.ಕಿಲ್ಲೆದಾರ್ ಹಾಗೂ ವಿವಿಧ ಸಾರ್ವಜನಿಕ ಗಣೇಶ ಮಂಡಳಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top