ಭಟ್ಕಳ: ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಿಕ್ಷಕರು ಹಾಗೂ ಉಪನ್ಯಾಸಕರುಗಳಿಗಾಗಿ ಆಯೋಜಿಸಿದ್ದ ಕವನ ರಚನಾ ಸ್ಪರ್ಧೆಯ ವಿಜೇತರಿಗೆ ಇಲ್ಲಿನ ಮುರ್ಡೇಶ್ವರದಲ್ಲಿ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಿದರು.
ಡಯೆಟ್ ಪ್ರಾಂಶುಪಾಲ ಎನ್.ಜಿ.ನಾಯ್ಕ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಲತಾ ಎಂ.ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಡಿ.ಮೊಗೇರ ಬಹುಮಾನ ವಿತರಿಸಿದರು. ಪ್ರಾಥಮಿಕ ಶಾಲಾ ವಿಭಾಗದಲ್ಲಿ ಚಿದಾನಂದ ಪಟಗಾರ (ಸಹಿಪ್ರಾ ಶಾಲೆ ಕೋಟಖಂಡ) ಪ್ರಥಮ, ಮೇಧಾ ಕೆ.ಕೆ. (ಸಕಿಪ್ರಾ ಶಾಲೆ ಅಗ್ಗ) ದ್ವಿತೀಯ, ವಿಜಯಕುಮಾರ ನರ್ವೇಕರ (ಸಹಿಪ್ರಾ ಶಾಲೆ ಮುಠ್ಠಳ್ಳಿ) ತೃತೀಯ, ರಾಘವೇಂದ್ರ ಎಸ್.ಮಡಿವಾಳ (ಸಹಿಪ್ರಾ ಶಾಲೆ ಹೊನ್ನೆಮಡಿ) ಹಾಗೂ ಜಯಶ್ರೀ ಡಿ.ಆಚಾರಿ (ಸಿಆರ್‌ಪಿ ಬೆಳಕೆ) ಪ್ರೋತ್ಸಾಹಕ ಬಹುಮಾನ ಪಡೆದುಕೊಂಡರು.
ಪ್ರೌಢಶಾಲಾ ವಿಭಾಗದಲ್ಲಿ ಎನ್.ಜಿ.ಗೌಡ (ಸರ್ಕಾರಿ ಪ್ರೌಢಶಾಲೆ ಬೆಳಕೆ) ಪ್ರಥಮ, ಸವಿತಾ ನಾಯ್ಕ (ಸರ್ಕಾರಿ ಪ್ರೌಢಶಾಲೆ ಸೊನಾರಕೇರಿ) ದ್ವಿತೀಯ, ಶಿವಮ್ಮ ಗೊಂಡ (ಸರ್ಕಾರಿ ಉರ್ದು ಪ್ರೌಢಶಾಲೆ ನವಾಯತ ಕಾಲನಿ) ತೃತೀಯ, ವಿಮಲಾ ಪಟಗಾರ (ಸರ್ಕಾರಿ ಪ್ರೌಢಶಾಲೆ ತೆಂಗಿನಗುಂಡಿ) ಹಾಗೂ ಪ್ರಶಾಂತ ನಾಯ್ಕ (ಸರ್ಕಾರಿ ಪ್ರೌಢಶಾಲೆ ತೆಂಗಿನಗುಂಡಿ) ಪ್ರೋತ್ಸಾಹಕ ಬಹುಮಾನ, ಕಾಲೇಜು ವಿಭಾಗದಲ್ಲಿ ನಯನಾ (ದಿ ನ್ಯೂ ಇಂಗ್ಲೀಷ್ ಪಪೂ ಕಾಲೇಜು ಭಟ್ಕಳ) ಪ್ರಥಮ, ಹೇಮಲತಾ ಎಸ್.ಮೊಗೇರ (ದಿ ನ್ಯೂ ಇಂಗ್ಲೀಷ್ ಪ.ಪೂ ಕಾಲೇಜು ಭಟ್ಕಳ) ದ್ವಿತೀಯ, ಪ್ರಸಾದ ಆಚಾರಿ (ಸಿದ್ಧಾರ್ಥ ಪ.ಪೂ.ಕಾಲೇಜು ಭಟ್ಕಳ) ತೃತೀಯ, ಹೇಮಾವತಿ ನಾಯ್ಕ (ಬೀನಾ ವೈದ್ಯ ಪ.ಪೂ.ಕಾಲೇಜು) ಹಾಗೂ ಮಂಜುನಾಥ ಗೌಡ (ಬೀನಾ ವೈದ್ಯ ಪ.ಪೂ.ಕಾಲೇಜು ಮುರ್ಡೇಶ್ವರ) ಪ್ರೋತ್ಸಾಹಕ ಬಹುಮಾನವನ್ನು ಪಡೆದುಕೊಂಡರು.
ಸ್ಪರ್ಧೆಯಲ್ಲಿ ವಿಜೇತರಾದ ಹಾಗೂ ಭಾಗವಹಿಸಿದವರಿಗೆ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಅಭಿನಂದಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಕವಿಗಳಿಗೆ ಸಾಹಿತ್ಯ ಸಮ್ಮೇಳನ ಮತ್ತಿತರ ಸಂದರ್ಭಗಳಲ್ಲಿ ಆಯೋಜಿಸುವ ಕವಿಗೋಷ್ಠಿಯಲ್ಲಿ ವೇದಿಕೆ ಕಲ್ಪಿಸಿ ಕವನ ವಾಚನಕ್ಕೆ ಅವಕಾಶ ನೀಡಲಾಗುವುದು. ಅಲ್ಲದೇ ಬರೆವಣಿಗೆಯಲ್ಲಿ ಆಸಕ್ತಿಯಿರುವವರಿಗಾಗಿ ಕಾವ್ಯಕಮ್ಮಟವನ್ನು ಆಯೋಜಿಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಕಸಾಪ ಗೌರವ ಕೋಶಾಧ್ಯಕ್ಷ ಶ್ರೀಧರ ಶೇಟ್, ಕಾರ್ಯಕಾರಿ ಸಮಿತಿ ಸದಸ್ಯರಾದ ಪೂರ್ಣಿಮಾ ಕರ್ಕಿಕರ್ ಹಾಗೂ ಪರಮೇಶ್ವರ ನಾಯ್ಕ ಉಪಸ್ಥಿತರಿದ್ದರು.