ಶಿರಸಿ: ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಶ್ರಯದಲ್ಲಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನದ ಆಯ್ದ ಒಂದು ಸಾವಿರ ಛಾಯಾಚಿತ್ರವನ್ನ ಸೆ.14ರಂದು ಮುಂಜಾನೆ 10 ಗಂಟೆಗೆ ಬೆಂಗಳೂರಿನ ಜ್ಞಾನ ಜ್ಯೋತಿ ಆಡಿಟೊರಿಯಮ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಹೋರಾಟಗಾರರ ವೇದಿಕೆ ಕಾರ್ಯಾಲಯದಲ್ಲಿ ಮಾತನಾಡಿದ ಅವರು, ಜಿಲ್ಲಾದ್ಯಂತ 41 ಸಾವಿರ ಕುಟುಂಬಗಳು, 2 ಲಕ್ಷಕ್ಕೂ ಮಿಕ್ಕಿ, 147 ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ, ಜಿಲ್ಲೆಯ 837 ಹಳ್ಳಿಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ಜರುಗಿರುವುದು ದಾಖಲಾರ್ಹ ಕ್ರಮವಾಗಿದೆ. ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಹಿರಿಯ ಸಚಿವರು, ಸರಕಾರದ ಪ್ರತಿನಿಧಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಅರಣ್ಯವಾಸಿಗಳ ಸಮಸ್ಯೆಗಳ ಸ್ಪಂದನಾ ಕಾರ್ಯಕ್ರಮ ಅಂದು ಸಂಘಟಿಸಲು ನಿರ್ಧರಿಸಲಾಗಿದೆ. ಆಸಕ್ತ ಅರಣ್ಯವಾಸಿಗಳು ಸೆ.14ರಂದು ಬೆಂಗಳೂರಿನ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಅವರು ತಿಳಿಸಿದರು.
ಇಬ್ರಾಹಿಂ ಗೌಡಳ್ಳಿ, ನೆಹರೂ ನಾಯ್ಕ ಕಂಡ್ರಾಜಿ, ದೇವರಾಜ ಮರಾಠಿ ಬಂಡಲ, ಎಮ್.ಆರ್.ನಾಯ್ಕ ಕಂಡ್ರಾಜಿ, ಬಾಬು ಮರಾಠಿ ಬಂಡಲ, ಎಮ್.ಕೆ.ನಾಯ್ಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಚಂದ್ರು ಶಾನಭಾಗ, ದುಗ್ಗು ಮರಾಠಿ, ಬಂರ‍್ಯ ಬಸ್ಯಾ ನಾಯ್ಕ, ಶ್ರೀಧರ ಕಂಡ್ರಾಜಿ, ದೇವೆಂದ್ರ ಕೆ.ನಾಯ್ಕ, ಕೃಷ್ಣ ಮರಾಠಿ ಮುಂತಾದವರು ಉಪಸ್ಥಿತರಿದ್ದರು.