Slide
Slide
Slide
previous arrow
next arrow

ಮಾರಿಕಾಂಬಾ ಪ್ರೌಢಾಶಾಲಾ ಶಿಕ್ಷಕಿ ಜಯಲಕ್ಷ್ಮಿ ಗುನಗಾಗೆ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ

300x250 AD

ಶಿರಸಿ: ಮಕ್ಕಳಿಗೆ ವಿಜ್ಞಾನ ವಿಷಯ ಭೋದಿಸುವ ಜೊತೆಗೆ ಕ್ರಿಯಾಶೀಲವಾಗಿ ವಿಜ್ಞಾನ ಕಲಿಕಾಂಶಗಳ ಪ್ರಯೋಗ, ವಿಜ್ಞಾನ ನಾಟಕ, ವಿಜ್ಞಾನ ವಿಚಾರ ಗೋಷ್ಠಿ, ವಿಜ್ಞಾನ ವಸ್ತು ಪ್ರದರ್ಶನ ಮತ್ತು ಪಾತ್ರಾಭಿನಯ ಸ್ಪರ್ಧೆಗಳಲ್ಲಿ ರಾಜ್ಯ ಮತ್ತು ದಕ್ಷಿಣ ಭಾರತ ಮಟ್ಟದಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವುದರ ಮೂಲಕ ಗುರುತಿಸಿಕೊಂಡ ಜಯಲಕ್ಷ್ಮೀ ಗುನಗಾ ಅವರಿಗೆ ಜಿಲ್ಲಾ‌ ಮಟ್ಟದಲ್ಲಿನ ಪ್ರೌಢಶಾಲಾ ಭಾಗದಲ್ಲಿ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಅರಸಿ ಬಂದಿದೆ.

ಇಲ್ಲಿನ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯ‌ ವಿಜ್ಞಾನ ಶಿಕ್ಷಕಿಯಾದ ಜಯಲಕ್ಷ್ಮೀ‌ ಹದಿನೈದು ವರ್ಷಗಳಿಗೂ ಅಧಿಕ ಕಾಲ ಬಂಡಲ ಸೇರಿದಂತೆ ಹಲವಡೆ ಗ್ರಾಮೀಣ ಸೇವೆ ಸಲ್ಲಿಸಿದ್ದರು. ಅವರು ರಾಷ್ಟ್ರ ಮಟ್ಟದಲ್ಲಿ ಪ್ರದರ್ಶನಗೊಂಡ ವಿಜ್ಞಾನ ನಾಟಕದ ಇಂಗ್ಲಿಷ್ ಭಾಷಾಂತರಕ್ಕೆ ದಕ್ಷಿಣ ಭಾರತ ಮಟ್ಟದಲ್ಲಿ ಅತ್ಯುತ್ತಮ ಸ್ಕ್ರಿಪ್ಟ್ ರೈಟರ್ ಪ್ರಶಸ್ತಿ ಗಳಿಸಿದ್ದರು. ಶಿಕ್ಷಣ ಇಲಾಖೆಯ ವಿವಿಧ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ವಿಜ್ಞಾನ ವಿಷಯದ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

300x250 AD

ಮೂಲತಃ ಕುಮಟಾ ಮಣಕಿ ಗ್ರಾಮದವರಾದ ಇವರು ಕೆಯುಡಿಯಲ್ಲಿ ಎಂಎಸ್ ಸಿ ಎಂಎಡ್ ನಲ್ಲಿ ಎರಡನೇ ಸ್ಥಾನ ಪಡೆದು ಕೊಂಡಿದ್ದರು.
ಕೆಡಿಸಿಸಿ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ದತ್ತಾತ್ರೇಯ ಗುನಗಾ ಮತ್ತು ಸುನಂದಾ ಗುನಗಾ ಇವರ ಮಗಳು. ಇವರ ಪತಿ ಶಾಂತಾರಾಮ ಗುನಗಾ ಇಸಳೂರು ಪ್ರೌಢ ಶಾಲೆಯ ಶಿಕ್ಷಕರಾಗಿದ್ದಾರೆ.
ಪ್ರಶಸ್ತಿ ಬಂದದ್ದು ಖುಷಿ ಕೊಟ್ಟಿದೆ. ಇದು ನನ್ನೆಲ್ಲ ವಿಜ್ಞಾನ ಬಳಗಕ್ಕೆ ಸಂದ ಪ್ರಶಸ್ತಿ ಎಂದೇ ಭಾವಿಸಿದ್ದೇನೆ. ಪ್ರಶಸ್ತಿ ನನ್ನ ಜವಾಬ್ದಾರಿಯನ್ನು ದ್ವಿಗುಣಗೊಳಿಸಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Share This
300x250 AD
300x250 AD
300x250 AD
Back to top