• Slide
  Slide
  Slide
  previous arrow
  next arrow
 • ಸೆ.3ಕ್ಕೆ ಪೋಟೋಗ್ರಾಫರ್‌, ವಿಡಿಯೋಗ್ರಾಫರ್ ಅಸೋಸಿಯೇಶನ್ ವಾರ್ಷಿಕೋತ್ಸವ

  300x250 AD

  ಶಿರಸಿ: ತಾಲೂಕು ಪೋಟೋಗ್ರಾಫರ್‌ ಹಾಗೂ ವಿಡಿಯೋಗ್ರಾಫರ್ ಅಸೋಸಿಯೇಶನ್ 13 ನೇ ವರ್ಷದ ವಾರ್ಷಿಕೋತ್ಸವದ ನಿಮಿತ್ತ ಸಾರ್ವಜನಿಕ ಸತ್ಯನಾರಾಯಣ ಕಥೆ,
  ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಸೆ.3 ರಂದು ಮಧ್ಯಾಹ್ನ 3.30 ಗಂಟೆಗೆ ನಡೆಯಲಿದೆ.

  ಬೆಳಿಗ್ಗೆ 10 ಘಂಟೆಯಿಂದ ಸಾಮೂಹಿಕ ಸತ್ಯನಾರಾಯಣ ಕಥೆ ನಡೆಯಲಿದೆ. ಮಧ್ಯಾಹ್ನ 3.30 ಘಂಟೆಗೆ ನಡೆಯುವ ಸಭಾ ಕಾರ್ಯಕ್ರಮವನ್ನು ಶಾಸಕ ಭೀಮಣ್ಣ ನಾಯ್ಕ ಉದ್ಘಾಟಿಸಲಿದ್ದು, ಶಿರಸಿ ತಾಲೂಕಾ ಫೋಟೋಗ್ರಾಫರ್ ಹಾಗೂ
  ವಿಡಿಯೋಗ್ರಾಪರ್ ಅಸೋಶಿಯೇಶನ್ ಅಧ್ಯಕ್ಷ ರಾಜು ಕಾನಸೂರು ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಡಿ.ಎಸ್.ಪಿ ಕೆ.ಎಲ್.ಗಣೇಶ, ಸ್ಕೋಡವೇಸ್ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ, ಕೆ. ಪಿ. ಎ., ಬೆಂಗಳೂರು ಜಂಟಿ ನಿರ್ದೇಶಕ  ಲಕ್ಷ್ಮೀನಾರಾಯಣ ಭಟ್ಟ ಪಾಲ್ಗೊಳ್ಳಲಿದ್ದಾರೆ.

  300x250 AD

  ಮಧ್ಯಾಹ್ನ ನಡೆಯಲಿರುವ ಸಮಾರಂಭದಲ್ಲಿ ಜಿಲ್ಲೆಯ ಹಿರಿಯ ಛಾಯಾಗ್ರಾಹಕರಾದ ಲಕ್ಷ್ಮೀನಾರಾಯಣ ಭಟ್ಟ, ಸುಧೀರ ಶಾನಭಾಗ, ಅಶೋಕ ಬಾಳೆಕಾಯಿ, ರವಿ ಕರ್ಜಗಿ ಇವರನ್ನು ಸನ್ಮಾನಿಸಲಾಗುವುದು. ಕುಮಟಾದ ಹಿರಿಯ ಛಾಯಾಗ್ರಾಹಕ ಪ್ರಮೋದ ಜೈವಂತ, ಭಟ್ಕಳ ಛಾಯಾಗ್ರಾಹಕ ಕಿರಣ ಶಾನಭಾಗ, ಹೊನ್ನಾವರ ಛಾಯಾಗ್ರಾಹಕ ಸುರೇಶ ಹೊನ್ನಾವರ, ಕಾರವಾರ ಛಾಯಾಗ್ರಾಹಕ ಬಶೀರ, ಅಂಕೋಲಾ ಛಾಯಾಗ್ರಾಹಕ ಶ್ರೀನಿವಾಸ ರಾಮನಾಥಕರ, ದಾಂಡೇಲಿ ಛಾಯಾಗ್ರಾಹಕ ಉದಯಕುಮಾರ.ಜಿ.ಎಮ್, ಹಳಿಯಾಳ ಛಾಯಾಗ್ರಾಹಕ ಜಯಪ್ರಕಾಶ್.ಎಮ್, ಯಲ್ಲಾಪುರ ಛಾಯಾಗ್ರಾಹಕ ಗಣಪತಿ ಹೆಗಡೆ, ಮುಂಡಗೋಡ ಛಾಯಾಗ್ರಾಹಕ ಬಾಬುರಾವ್  ಮೀರಜಕರ, ಸಿದ್ದಾಪುರ ಛಾಯಾಗ್ರಾಹಕ ಜೀವನ ಪೈ ಇವರನ್ನು ಸನ್ಮಾನಿಸಲಾಗುವುದು.  ಪೊಲೀಸ್ ಇಲಾಖೆ ಡಿ. ದರ್ಜೆ ನೌಕರ ಮಂಜುನಾಥ ಹಾಗೂ ಅಂಬ್ಯುಲೆನ್ಸ್ ಚಾಲಕ ಬಾಬಣ್ಣ ಇವರಿಗೆ ಸಾರ್ವಜನಿಕವಾಗಿ ಸನ್ಮಾನಿಸಲಾಗುವುದು. ಪೊಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಕುಟುಂಬಸ್ಥರಿಗೆ ಏರ್ಪಡಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಗುವುದು ಎಂದು ಕಾರ್ಯದರ್ಶಿ ಜಗದೀಶ ಜೈವಂತ ತಿಳಿಸಿದ್ದಾರೆ.

  Share This
  300x250 AD
  300x250 AD
  300x250 AD
  Leaderboard Ad
  Back to top