ಕುಮಟಾ: ತಾಲೂಕಾ ಅರಣ್ಯವಾಸಿಗಳ ಸಭೆಯನ್ನು ಸೆ.3, ಭಾನುವಾರ ಮುಂಜಾನೆ 10.30ಕ್ಕೆ ಕುಮಟಾ ಬಸ್‌ಸ್ಟಾಂಡ್ ಸರ್ಕಲ್ ಹತ್ತಿರ ಇರುವ ಮಹಾಸತಿ ದೇವಾಲಯದ ಸಭಾಂಗಣದಲ್ಲಿ ಸಂಘಟಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವಿಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರಣ್ಯವಾಸಿಗಳಿಗೆ ಗುರುತಿನ ಪತ್ರ(ಐಡಿ ಕಾರ್ಡ)ವಿತರಿಸುವುದು, ಬೆಂಗಳೂರಿನಲ್ಲಿ ಸೆ.14 ರಂದು ನಡೆಯುವ ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನದಲ್ಲಿನ ಪೋಟೋ ಪ್ರದರ್ಶನದ ಕುರಿತು ಚರ್ಚಿಸುವುದು, ಅರಣ್ಯ ಹಕ್ಕು ಮಂಜೂರಿ ಕುರಿತು ರಾಜ್ಯ ಸರಕಾರದ ಸಂಬಂಧಿಸಿದ ಹಿರಿಯ ಸಚಿವರೊಂದಿಗೆ ಸಂವಾದ ಏರ್ಪಡಿಸುವ ಕುರಿತು, ಉತ್ತರ ಕನ್ನಡ ಜಿಲ್ಲೆಯ ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಉಸ್ತುವಾರಿ ಸಚಿವ ಮಂಕಾಳ ವೈಧ್ಯರೊಂದಿಗೆ ಚರ್ಚಿಸುವ ಕುರಿತು ಸಭೆಯಲ್ಲಿ ತಿಳಿಸಲಾಗುವುದೆಂದು ಹಾಗೂ ಆಸಕ್ತರು ಹೇಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ಕೋರಿದ್ದಾರೆ.