ಜೊಯಿಡಾ: ತಾಲೂಕಿನ ಜೊಯಿಡಾ ಸೇವಾ ಸಹಕಾರಿ ಸಂಘದಿoದ ರೈತರಿಗೆ ಬೆಳೆ ಸಾಲ ನೀಡದೇ ಇರುವುದರಿಂದ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಆಡಳಿತ ಸಮಿತಿ ಅಧ್ಯಕ್ಷರಿಂದ ಸಹಕಾರಿ ಸಂಘಗಳ ನೊಂದಣಾಧಿಕಾರಿಗೆ ದೂರು ನೀಡಿ ತನಿಖೆಗೆ ಆಗ್ರಹಿಸಲಾಗಿದೆ. ಇದರಿಂದ ಸಂಘದಲ್ಲಿ ಪಿಗ್ಮಿ ಹಾಗೂ ಫಿಕ್ಸ್ ಡಿಪಾಸಿಟ್ ಹಣ ಇಟ್ಟವರಲ್ಲಿ ಆತಂಕ ಉಂಟು ಮಾಡಿದೆ. ಬೆಳೆ ಸಾಲ ಮತ್ತು ಎಲ್ಲಾ ಹಣ ವಾಪಸ್ ನೀಡುವಂತೆ ಸಭೆಯಲ್ಲಿ ಆಗ್ರಹಿಸಲಾಯಿತು.
ತಾಲೂಕಿನ ಕುಣಬಿ ಭವನದಲ್ಲಿ ಬೆಳೆ ಸಾಲ ವಂಚಿತ ರೈತರು, ಪಿಗ್ಮಿ ಹಾಗೂ ಫಿಕ್ಸ್ ಡಿಪೋಜಿಟ ಹಣ ಇಟ್ಟವರ ಸಭೆ ಕರೆಯಲಾಗಿತ್ತು. ಜೊಯಿಡಾ ಸೇವಾ ಸಹಕಾರಿ ಸಂಘದಲ್ಲಿ 1800ಕ್ಕೂ ಹೆಚ್ಚು ಷೇರುದಾರರು ಇದ್ದಾರೆ. ಈ ಸಂಘದ ಮೂಲಕ ಅನೇಕ ರೈತರಿಗೆ ಪ್ರತಿ ವರ್ಷ ಬೆಳೆ ಸಾಲ ನೀಡಲಾಗುತ್ತಿತ್ತು. ಆದರೆ ಇಂದಿಗೂ ನೀಡದೇ ರೈತರು ಬೀಜ, ಗೊಬ್ಬರ ಖರಿದಿ ಮಾಡಲು ಸಾಧ್ಯವಾಗದೇ ತೊಂದರೆ ಪಟ್ಟಿದ್ದರು. ಹತ್ತಾರು ಬಾರಿ ಸುತ್ತಿದರೂ ನಾಳೆ ಬಾ ಎಂದು ಮುಖ್ಯಕಾರ್ಯನಿರ್ವಾಹಕ ರಾಮ ನಾಯ್ಕ ಇಷ್ಟು ದಿನ ರೈತರನ್ನು ಕಾಡುತ್ತಿದ್ದರು. ರೈತರು ಅಸಮಾಧಾನಗೊಂಡು ರವಿವಾರ ಕರೆದ ಸಭೆಗೆ ಆಡಳಿತ ಸಮಿತಿ ಅಧ್ಯಕ್ಷ ಮತ್ತು ಸಮಿತಿಯ ಸದಸ್ಯರು ಬಂದಿದ್ದರು. ಅನೇಕರು ಕೂಡಲೆ ಬೆಳೆಸಾಲ ನೀಡುವಂತೆ ಆಗ್ರಹಿಸಿದರು. ಇನ್ನು ಅನೇಕರು ಪಿಗ್ಮಿ ಮತ್ತು ಇಟ್ಟ ಹಣ ನೀಡುವಂತೆ ಆಡಳಿತ ಸಮಿತಿಯವರನ್ನು ಆಗ್ರಹಿಸಲಾಗಿದೆ.
ಅಧ್ಯಕ್ಷ ರಮೇಶ ನಾಯ್ಕ ಮಾತನಾಡಿ, ಇಲ್ಲಿ ತನಕ ರೈತರಿಗೆ ಬೆಳೆ ಸಾಲ ನೀಡದೇ ಇರುವುದು ತಪ್ಪು ಈ ಬಗ್ಗೆ ತನಿಖೆ ಮಾಡುವಂತೆ ಎ.ಆರ್.ಓ ಮತ್ತು ಡಿ.ಆರ್.ಓ ಕಾರವಾರ ದೂರು ನೀಡಲಾಗಿದೆ. ಈ ಅವ್ಯವಹಾರ ಮುಖ್ಯ ಕಾರ್ಯನಿರ್ವಾಹಕರಿಂದ ನಡೆದಿದೆ. ನಮಗೇನು ಗೊತ್ತಿಲ್ಲ ತನಿಖೆ ನಡೆಯಲಿದೆ ಎಂದು ಸಭೆಗೆ ತಿಳಿಸಿದರು. ಸಭೆಯಲ್ಲಿ ಸೇರಿದ ರೈತರು ಬೆಳೆಸಾಲ ನೀಡದೆ ಇರಲು ಕಾರಣ ಕೇಳಿದರು. ಈ ಬಗ್ಗೆ ರಾಮ ನಾಯ್ಕ ಮುಖ್ಯ ಕಾರ್ಯನಿರ್ವಾಹಕ ಏನು ಹೇಳದೇ ಮೌನ ವಹಿಸಿದ್ದು ಅವ್ಯವಹಾರ ನಡೆದಿರುವುದು ಇನ್ನೂ ಹೆಚ್ಚು ಅನುಮಾನಕ್ಕೆ ಕಾರಣವಾಗಿದೆ. 13 ಕೋಟಿಗೂ ಹೆಚ್ಚು ಹಣ ಅವ್ಯವಹಾರ ನಡೆದಿದೆ ಎಂದು ರೈತರು, ಷೇರುದಾರರು, ಪಿಗ್ಮಿ ತುಂಬಿದ ಅಂಗಡಿ ಮುಂಗಟ್ಟುಗಳ ಮಾಲಿಕರು ಮತ್ತು ಠೇವಣಿ ಇಟ್ಟವರು ಮಾತಾಡಿಕೊಳ್ಳುತ್ತಿದ್ದರು.
ಈ ಸಂದರ್ಭದಲ್ಲಿ ವ್ಯಾಪಾರ ಸಂಘದ ಅಧ್ಯಕ್ಷ ರಫಿಕ್ ಖಾಜಿ, ಗೌ.ಅ.ರವಿ ರೆಡಕರ, ಪ್ರಮುಖರಾದ ಪಿ.ವಿ.ದೇಸಾಯಿ, ದೇವಿದಾಸ ದೇಸಾಯಿ, ಕೆ.ಎಲ್.ನಾಯ್ಕ, ಗ್ರಾಮ ಪಂಚಾಯತ್ ಸದಸ್ಯ ಅರುಣ ಕಾಮರೆಕರ, ಮಹಿಂದ್ರ ಹರ್ಚಿಲಕರ, ಗಾಂಗೋಡಾ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವಿಣ ದೇಸಾಯಿ, ದತ್ತಾ ಗಾವಡಾ, ಚಂದ್ರಕಾ0ತ ದೇಸಾಯಿ, ಪಾಂಡುರ0ಗ ಗಾವಡಾ, ಉಮೇಶ್ ವೆಳಿಪ, ಬಾಳಾ ದೇಸಾಯಿ, ಸುರೇಶ ಗಾವಡಾ, ಗಜಾನನ ಬಾಂಡೋಳಕರ, ಗುಣೊ ಗಾವಡಾ, ಸುಬ್ರಾಯ ಹೆಗಡೆ, ದೀಲಿಪ ಗಾಂವಕರ ಮುಂತಾದವರು ಇದ್ದರು.